ಹಾರ್ಮೋನ್ ಬ್ಯಾಲೆನ್ಸ್ ತಪ್ಪಿ ಋತುಚಕ್ರ ವಿಳಂಬವಾಗುತ್ತಿದ್ದರೆ ತಕ್ಷಣ ಮಾತ್ರೆ ನುಂಗುವ ಮುನ್ನ ಈ ಮನೆಮದ್ದು ಟ್ರೈ ಮಾಡಿ

ಮಹಿಳೆಯರಲ್ಲಿ ತಿಂಗಳ ಋತುಚಕ್ರವು (Periods) ಸರಿಯಾದ ಸಮಯಕ್ಕೆ ಆಗುತ್ತಿದ್ದರೆ, ಅವರ ಒಟ್ಟಾರೆ ಆರೋಗ್ಯ ಉತ್ತಮವಾಗಿದೆ ಎಂದೇ ಅರ್ಥ. ಸಾಮಾನ್ಯವಾಗಿ 28 ರಿಂದ 35 ದಿನಗಳ ನಡುವಿನ ಋತುಚಕ್ರವನ್ನು ನಿಯಮಿತ (Regular Periods) ಎಂದು ಪರಿಗಣಿಸಲಾಗುತ್ತದೆ.

ಮಹಿಳೆಯರಲ್ಲಿ ತಿಂಗಳ ಋತುಚಕ್ರವು (Periods) ಸರಿಯಾದ ಸಮಯಕ್ಕೆ ಆಗುತ್ತಿದ್ದರೆ, ಅವರ ಒಟ್ಟಾರೆ ಆರೋಗ್ಯ ಉತ್ತಮವಾಗಿದೆ ಎಂದೇ ಅರ್ಥ. ಸಾಮಾನ್ಯವಾಗಿ 28 ರಿಂದ 35 ದಿನಗಳ ನಡುವಿನ ಋತುಚಕ್ರವನ್ನು ನಿಯಮಿತ (Regular Periods) ಎಂದು ಪರಿಗಣಿಸಲಾಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನಶೈಲಿ, ಹಾರ್ಮೋನುಗಳ ಏರುಪೇರು, ಅತಿಯಾದ ಮಾನಸಿಕ ಒತ್ತಡ, ಕಳಪೆ ಆಹಾರ ಪದ್ಧತಿ ಮತ್ತು ನಿದ್ರೆಯ ಕೊರತೆಯಿಂದಾಗಿ ಅನೇಕ ಮಹಿಳೆಯರಲ್ಲಿ ಪಿರಿಯಡ್ಸ್ ದಿನಾಂಕಗಳು ತಿಂಗಳಿಂದ ತಿಂಗಳಿಗೆ ಬದಲಾಗುತ್ತಿರುತ್ತವೆ.

ಹೀಗೆ ಪದೇ ಪದೇ ಪಿರಿಯಡ್ಸ್ ವಿಳಂಬವಾಗುತ್ತಿದ್ದರೆ ತಕ್ಷಣವೇ ಕೆಮಿಕಲ್ ಮಾತ್ರೆಗಳನ್ನು ತೆಗೆದುಕೊಳ್ಳುವ ಮುನ್ನ, ನಮ್ಮ ಅಡುಗೆಮನೆಯಲ್ಲೇ ಇರುವ ಹಾಲಿನ ಈ ಸರಳ ಮನೆಮದ್ದನ್ನು ಟ್ರೈ ಮಾಡಬಹುದು. ಇದು ಯಾವುದೇ ಅಡ್ಡಪರಿಣಾಮಗಳಿಲ್ಲದೆ ಹಾರ್ಮೋನ್ ಸಮತೋಲನಗೊಳಿಸಿ, ಋತುಚಕ್ರ ಸರಿಯಾದ ಸಮಯಕ್ಕೆ ಬರುವಂತೆ ಮಾಡಲು ಸಹಾಯ ಮಾಡುತ್ತದೆ.

ಭಾರತೀಯ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯಲ್ಲಿ ಅರಿಶಿನ ಮತ್ತು ಶುಂಠಿಯ ಹಾಲಿಗೆ ವಿಶೇಷ ಸ್ಥಾನವಿದೆ. ತಜ್ಞರ ಪ್ರಕಾರ, ಹಾಲಿನೊಂದಿಗೆ ಈ ಎರಡು ಪದಾರ್ಥಗಳನ್ನು ಸೇರಿಸಿ ಸೇವಿಸುವುದರಿಂದ ದೇಹದಲ್ಲಿ ನೈಸರ್ಗಿಕವಾಗಿ ಉಷ್ಣತೆ ಹೆಚ್ಚುತ್ತದೆ ಮತ್ತು ರಕ್ತ ಪರಿಚಲನೆ ಸುಧಾರಿಸುತ್ತದೆ. ಇದು ಋತುಚಕ್ರವನ್ನು ನಿಯಂತ್ರಣಕ್ಕೆ ತರಲು ಅದ್ಭುತವಾಗಿ ಕೆಲಸ ಮಾಡುತ್ತದೆ.

ಇದು ಹೇಗೆ ಕೆಲಸ ಮಾಡುತ್ತದೆ?

  • ರಕ್ತ ಪರಿಚಲನೆ ಸುಧಾರಣೆ: ಅರಿಶಿನ ಮತ್ತು ಶುಂಠಿ ಮಿಶ್ರಿತ ಹಾಲು ದೇಹದ ಪೆಲ್ವಿಕ್ ಏರಿಯಾದಲ್ಲಿ (ಕಿಬ್ಬೊಟ್ಟೆಯ ಭಾಗ) ರಕ್ತ ಪರಿಚಲನೆಯನ್ನು ಉತ್ತಮಗೊಳಿಸುತ್ತದೆ. ಇದು ಗರ್ಭಾಶಯದ ಸ್ನಾಯುಗಳನ್ನು ಸಕ್ರಿಯಗೊಳಿಸಿ, ಮುಟ್ಟು ಸರಿಯಾದ ಸಮಯಕ್ಕೆ ಆಗುವಂತೆ ಪ್ರೇರೇಪಿಸುತ್ತದೆ.

  • ನೋವು ಮತ್ತು ಸೆಳೆತಕ್ಕೆ ಮುಕ್ತಿ: ಅರಿಶಿನ ಮತ್ತು ಶುಂಠಿಯಲ್ಲಿ ಆಂಟಿ-ಇನ್‌ಫ್ಲಮೇಟರಿ (ಉರಿಯೂತ ನಿವಾರಕ) ಗುಣಗಳು ಸಮೃದ್ಧವಾಗಿವೆ. ಇವು ಮುಟ್ಟಿನ ಸಮಯದಲ್ಲಿ ಕಾಡುವ ಅತಿಯಾದ ಹೊಟ್ಟೆನೋವು ಹಾಗೂ ಸ್ನಾಯುಗಳ ಸೆಳೆತವನ್ನು ಕಡಿಮೆ ಮಾಡುತ್ತವೆ.

  • ಹಾರ್ಮೋನ್ ಸಮತೋಲನ: ಅರಿಶಿನದಲ್ಲಿರುವ ‘ಕರ್ಕ್ಯುಮಿನ್’ ಅಂಶವು ದೇಹದಲ್ಲಿ ನೈಸರ್ಗಿಕ ಉಷ್ಣತೆಯನ್ನು ಕಾಯ್ದುಕೊಂಡರೆ, ಶುಂಠಿಯು ಹಾರ್ಮೋನುಗಳ ಏರುಪೇರನ್ನು ಸರಿಪಡಿಸಲು ನೆರವಾಗುತ್ತದೆ.

ಅರಿಶಿನ-ಶುಂಠಿ ಹಾಲು ತಯಾರಿಸುವುದು ಹೇಗೆ?

ಈ ಆರೋಗ್ಯಕರ ಹಾಲನ್ನು ತಯಾರಿಸುವುದು ತುಂಬಾ ಸುಲಭ:

  1. ಒಂದು ಲೋಟ ಶುದ್ಧ ಹಾಲನ್ನು ತೆಗೆದುಕೊಳ್ಳಿ.
  2. ಅದಕ್ಕೆ ಕಾಲು ಟೀ ಚಮಚ ಅರಿಶಿನ ಪುಡಿ (ಸಾಧ್ಯವಾದರೆ ಹಸಿ ಅರಿಶಿನ ಕೊಂಬು) ಸೇರಿಸಿ.
  3. ನಂತರ ಅರ್ಧ ಇಂಚು ತಾಜಾ ಶುಂಠಿಯನ್ನು ಜಜ್ಜಿ ಹಾಲಿಗೆ ಹಾಕಿ.
  4. ಈ ಮಿಶ್ರಣವನ್ನು ಚೆನ್ನಾಗಿ ಕುದಿಸಿ, ನಂತರ ಸೋಸಿಕೊಳ್ಳಿ.
  5. ಹಾಲು ಉಗುರುಬೆಚ್ಚಗಿರುವಾಗ ದಿನಕ್ಕೆ ಒಮ್ಮೆ ಸೇವಿಸಿ….

ಪ್ರಮುಖ ಸೂಚನೆ: ಈ ಮನೆಮದ್ದುಗಳು ಸಾಮಾನ್ಯ ಹಾರ್ಮೋನ್ ಏರುಪೇರು ಹಾಗೂ ಲೈಫ್‌ಸ್ಟೈಲ್ ಬದಲಾವಣೆಗಳಿಂದಾಗುವ ಸಮಸ್ಯೆಗೆ ಸಹಕಾರಿಯಷ್ಟೇ. ಒಂದು ವೇಳೆ ನಿರಂತರವಾಗಿ ಪಿರಿಯಡ್ಸ್ ಸಮಸ್ಯೆ ಇದ್ದರೆ ಅಥವಾ ಥೈರಾಯ್ಡ್, PCOD ನಂತಹ ಗಂಭೀರ ಆರೋಗ್ಯ ತೊಂದರೆಗಳಿದ್ದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಉತ್ತಮ.

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.