ನರ್ಸ್ ನಿಮಿಷಾ ಪ್ರಿಯಾಗೆ ಮರಣದಂಡನೆ : ಸುಪ್ರೀಂ ಕೋರ್ಟ್ ತಾತ್ಕಾಲಿಕ್ ರಿಲೀಫ್

Kerala Nurse Nimisha Priya case : ನವದೆಹಲಿ : ಯೆಮೆನ್ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ರಿಲೀಪ್ ಕೊಟ್ಟಿದೆ.
ಪ್ರಕರಣದ ವಿಚಾರಣೆಗೆ ಸುಪ್ರೀಂ ಸಮ್ಮತಿ ಸೂಚಿಸಿದೆ. ನರ್ಸ್ ನಿಮಿಷಾ ಪ್ರಿಯ ಅವರನ್ನು ಜುಲೈ 16 ರಂದು ಗಲ್ಲಿಗೇರಿಸುವ ಕುರಿತು ಯೆಮೆನ್ ಜೈಲಿನ ಅಧಿಕಾರಿಗಳು ಮಂಗಳವಾರ ಮಾಹಿತಿ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಗಲ್ಲು ಶಿಕ್ಷೆಯಿಂದ ವಿನಾಯಿತಿ ಕೊಡಿಸುವಂತೆ ಕೋರಿ ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಾಗಿದೆ.
ಕೇರಳದ ನರ್ಸ್ ನಿಮಿಷಾ ಪ್ರಿಯ ಅವರನ್ನು ರಕ್ಷಿಸಲು ಭಾರತ ಸರಕಾರ ರಾಜತಾಂತ್ರಿಕ ಮಾರ್ಗಗಳನ್ನು ಅನುಸರಿಸಬೇಕು. ಈ ಕುರಿತು ಸರಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಲಾಗಿತ್ತು.
ಜುಲೈ 10 ( ಇಂದು) ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಜೋಯ್ಮಲ್ಯ ಬಾಗ್ಚಿ ಅವರ ಪೀಠವು ಜುಲೈ 14ರಂದು ವಿಚಾರಣೆಗೆ ಸಮ್ಮತಿ ಸೂಚಿಸಿದೆ.
Also Read : ಯೆಮೆನ್ ನರ್ಸ್ ನಿಮಿಷಾ ಪ್ರಿಯಾಗೆ ಜುಲೈ16ರಂದು ಗಲ್ಲುಶಿಕ್ಷೆ : ಏನಿದು ಪ್ರಕರಣ ?
ಕೇರಳದ ಪಾಲಕ್ಕಾಡ್ ನಿವಾಸಿಯಾಗಿರುವ ನಿಮಿಷಾ ಪ್ರಿಯ ಅವರ ಪರವಾಗಿ ವಕೀಲರಾದ ಸುಭಾಷ್ ಚಂದ್ರನ್ ಕೆಆರ್ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಬ್ಲಡ್ ಮನಿ ನೀಡಿದ್ರೆ ನಿಮಿಷಾಗೆ ಕ್ಷಮೆ ಸಿಗಲಿದೆ ಅನ್ನೋ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.
Kerala Nurse Nimisha Priya case : ಸುಪ್ರೀಂ ಕೋರ್ಟ್ನ ಆದೇಶದ ಪ್ರಮುಖ ಅಂಶಗಳು
ವಿಚಾರಣೆಗೆ ಒಪ್ಪಿಗೆ: “ಸೇವ್ ನಿಮಿಷಾ ಪ್ರಿಯಾ ಆಕ್ಷನ್ ಕೌನ್ಸಿಲ್” (Save Nimisha Priya Action Council) ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಜುಲೈ 10, 2025 ರಂದು ವಿಚಾರಣೆಗೆ ಒಪ್ಪಿಕೊಂಡಿದೆ.
ವಿಚಾರಣೆ ಯಾವಾಗ : ನಿಮಿಷಾ ಪ್ರಿಯ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಆರಂಭದಲ್ಲಿ ಜುಲೈ 14ಕ್ಕೆ ವಿಚಾರಣೆ ನಡೆಸುವುದಾಗಿ ಹೇಳಿತ್ತು. ಆದರೆ ಜುಲೈ 16ಕ್ಕೆ ಮರಣದಂಡನೆ ಶಿಕ್ಷೆ ಇರುವ ಹಿನ್ನೆಲೆಯಲ್ಲಿ ಜುಲೈ 11ಕ್ಕೆ ಮುಂದೂಡಿಕೆ ಮಾಡಿದೆ.
ಅಟಾರ್ನಿ ಜನರಲ್ ಕಚೇರಿಗೆ ಸೂಚನೆ:
ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಜಾಯ್ಮಾಲ್ಯಾ ಬಾಗ್ಚಿ ಅವರ ನ್ಯಾಯಪೀಠವು, ಅರ್ಜಿಯ ಮುಂಗಡ ಪ್ರತಿಯನ್ನು ಭಾರತದ ಅಟಾರ್ನಿ ಜನರಲ್ ಕಚೇರಿಗೆ ತಕ್ಷಣವೇ ಸಲ್ಲಿಸುವಂತೆ ಅರ್ಜಿದಾರ ಸಂಸ್ಥೆಗೆ ಸೂಚಿಸಿದೆ.
ಇದರಿಂದ ಕೇಂದ್ರ ಸರ್ಕಾರವು ಮುಂದಿನ ವಿಚಾರಣೆಯಲ್ಲಿ ತನ್ನ ನಿಲುವನ್ನು ಸ್ಪಷ್ಟಪಡಿಸಲು ಸಮಯ ಸಿಗುತ್ತದೆ.
ಬ್ಲಡ್ ಮನಿ (Blood Money) ಕುರಿತು ಮನವಿ:
ಶರಿಯಾ ಕಾನೂನಿನ ಪ್ರಕಾರ, ಸಂತ್ರಸ್ತರ ಕುಟುಂಬವು “ರಕ್ತ ಹಣ” (ಬ್ಲಡ್ ಮನಿ – ಆರ್ಥಿಕ ಪರಿಹಾರ) ಸ್ವೀಕರಿಸಲು ಒಪ್ಪಿದರೆ ಮರಣದಂಡನೆ ಶಿಕ್ಷೆಗೆ ಒಳಗಾದ ವ್ಯಕ್ತಿಯನ್ನು ಬಿಡುಗಡೆ ಮಾಡಬಹುದು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
Also Read : ಕರ್ನಾಟಕದಲ್ಲಿ 4 ದಿನ ಬಾರೀ ಮಳೆ : ರೆಡ್ ಅಲರ್ಟ್, ಶಾಲೆಗಳಿಗೆ ರಜೆ ಸಾಧ್ಯತೆ
ಈ ವಿಷಯದಲ್ಲಿ ರಾಜತಾಂತ್ರಿಕ ಮಧ್ಯಪ್ರವೇಶ ಮತ್ತು ಸಂಧಾನಕ್ಕೆ ಅನುಕೂಲ ಮಾಡಿಕೊಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಸುಪ್ರೀಂ ಕೋರ್ಟ್ಗೆ ಮನವಿ ಮಾಡಲಾಗಿದೆ. ಅರ್ಜಿದಾರರು “ರಕ್ತ ಹಣ” ವನ್ನು ಸಂಗ್ರಹಿಸಲು ಸಿದ್ಧರಿದ್ದಾರೆ ಎಂದು ತಿಳಿಸಿದ್ದಾರೆ.
ಏನಿದು ನಿಮಿಷಾ ಪ್ರಿಯ ಪ್ರಕರಣ ?
ಕೇರಳದ ಪಾಲಕ್ಕಾಡ್ ಮೂಲದ ನರ್ಸ್ ನಿಮಿಷ ಪ್ರಿಯ ಯೆಮೆನ್ನಲ್ಲಿ ಕ್ಲಿನಿಕ್ ಹೊಂದಿದ್ದಳು. ಯೆಮೆನ್ ಪ್ರಜೆಯಾದ ತಲಾಲ್ ಅಬ್ದೋ ಮಹದಿ ಎಂಬಾತನ ಜೊತೆಗೆ ಪಾಲುದಾರಿಕೆಯಲ್ಲಿ ವ್ಯವಹಾರ ನಡೆಸುತ್ತಿದ್ದಳು.
ಆದರೆ ತಲಾಲ್ ಈಕೆಯ ಪಾಸ್ಪೋರ್ಟ್ ಇಟ್ಟುಕೊಂಡು ಬೆದರಿಕೆಯೊಡ್ಡಿದ್ದಾನೆ. ಅಲ್ಲದೇ ಆಕೆಯ ಮಾನಸಿಕ, ದೈಹಿಕ ಕಿರುಕುಳ ನೀಡಿದ್ದ.
ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ ನಿಮಿಷಾ ಪ್ರಿಯ ಪಾಸ್ಪೋರ್ಟ್ ತೆಗೆದುಕೊಂಡು ತವರು ಬರಬೇಕು ಅನ್ನೋ ಕಾರಣಕ್ಕೆ ತಲಾಲ್ ಗೆ ನಿದ್ರೆ ಮಾತ್ರೆ ತಿನ್ನಿಸಿದ್ದಳು. ಆದರೆ ಮಾತ್ರೆ ತಿಂದ ನಂತರದಲ್ಲಿ ತಲಾಲ್ ಸಾವನ್ನಪ್ಪಿದ್ದಾನೆ.
ಈ ಕೊಲೆ ಆರೋಪದಲ್ಲಿ ನಿಮಿಷಾ ಪ್ರಿಯ 2017ರಿಂದಲೂ ಜೈಲು ಶಿಕ್ಷೆ ಅನುಭವಿಸುತ್ತಿದ್ದಾಳೆ. 2020ರಲ್ಲಿ ಈಕೆಯ ಪ್ರಕರಣ ವಿಚಾರಣೆ ನಡೆಸಿದ ಯೆಮೆನ್ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು.
ಅಲ್ಲದೇ 2023ರಲ್ಲಿ ಯೆಮೆನ್ ಸರ್ವೋಚ್ಚ ನ್ಯಾಯಾಲಯ ತೀರ್ಮನ್ನು ಎತ್ತಿ ಹಿಡಿದಿತ್ತು. ಈ ಹಿನ್ನೆಲೆಯಲ್ಲಿ ಜುಲೈ 16ರಂದು ಗಲ್ಲುಶಿಕ್ಷೆ ವಿಧಿಸುವುದಾಗಿ ಯೆಮೆನ್ ಜೈಲಾಧಿಕಾರಿಗಳು ನಿಮಿಷಾ ಪ್ರಿಯ ಪೋಷಕರಿಗೆ ತಿಳಿಸಿದ್ದರು.
ಸುಪ್ರೀಂ ಕೋರ್ಟ್ನ ಈ ಆದೇಶವು ನಿಮಿಷಾ ಪ್ರಿಯಾ ಅವರ ಜೀವ ಉಳಿಸಲು ಕೊನೆಯ ಪ್ರಯತ್ನವಾಗಿ ನೋಡಲಾಗುತ್ತಿದೆ.
ಕೇಂದ್ರ ಸರ್ಕಾರದ ರಾಜತಾಂತ್ರಿಕ ಮಧ್ಯಪ್ರವೇಶ ಮತ್ತು “ರಕ್ತ ಹಣ” ದ ಕುರಿತು ಸಂಧಾನವು ಅವರ ಬಿಡುಗಡೆಗೆ ಇರುವ ಏಕೈಕ ಮಾರ್ಗವಾಗಿದೆ.
Kerala Nurse Nimisha Priya case yemen Supreme Court Big Relief in Kannada News



