ಉಡುಪಿ, ಮಂಗಳೂರಲ್ಲಿ ಜುಲೈ 19ರ ವರೆಗೆ ಬಾರೀ ಮಳೆ : ರೆಡ್‌ ಅಲರ್ಟ್‌

Karnataka Weather Report : ಉಡುಪಿ / ಮಂಗಳೂರು : ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜುಲೈ 19ರ ವರೆಗೆ ಬಾರೀ ಮಳೆ ಸುರಿಲಿದೆ.

ಹವಾಮಾನ ಇಲಾಖೆಯ ಮುನ್ಸೂಚನೆಯ ಮೇಲೆ ರೆಡ್‌ ಅಲರ್ಟ್ ಘೋಷಿಸಲಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ಜುಲೈ 10 ರಿಂದ 13 ರವರೆಗೆ ಉಡುಪಿ ( Udupi), ದಕ್ಷಿಣ ಕನ್ನಡ ( Dakshin Kannada) ಮತ್ತು ಉತ್ತರ ಕನ್ನಡ ( Uttara Kannada) ಜಿಲ್ಲೆಗಳಲ್ಲಿ ಭಾರೀ ಮಳೆ ( Extreme Rain) ಕುರಿತು ಮುನ್ಸೂಚನೆಯನ್ನು ನೀಡಿದೆ.

ಈ ಹಿನ್ನೆಲೆಯಲ್ಲಿ ಜುಲೈ 13ರ ವರೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ಕುರಿತು News Next Live ಅತ್ಯಂತ ಭಾರೀ ಮಳೆಯಾಗಲಿದೆ ಎಂದು ವರದಿ ಮಾಡಿದೆ.

ಕರಾವಳಿಯ ಮಂಗಳೂರು, ಉಡುಪಿ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದಲೂ ಬಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ.

ಇದನ್ನೂ ಓದಿ : ಸಹಕಾರಿ ಬ್ಯಾಂಕುಗಳಲ್ಲಿ FD ಇಡುವುದು ಸೂಕ್ತವೇ ? ನಿಮ್ಮ ಹಣಕ್ಕೆ ಹೊಣೆ ಯಾರು ?

Karnataka Weather Report : ಮಲೆನಾಡಿನಲ್ಲೂ ಬಾರೀ ಮಳೆ

ಜುಲೈ 10 ರಿಂದ 15 ರವರೆಗೆ ಕರಾವಳಿ ಪ್ರದೇಶ ( Coastal Karnataka)ದಲ್ಲಿ ಆರೆಂಜ್ ಅಲರ್ಟ್ ( Orange Alert) ಘೋಷಣೆ ಮಾಡಲಾಗಿದೆ.. ಇದು 60.5 ಮಿ.ಮೀ ನಿಂದ 110.5 ಮಿ.ಮೀ ಮಳೆಯನ್ನು ಸೂಚಿಸುತ್ತದೆ.

ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇದು 60.5 ಮಿ.ಮೀ ವರೆಗೆ ಮಳೆಯಾಗುವ ಸಾಧ್ಯತೆಯನ್ನು ಸೂಚಿಸುತ್ತದೆ.

ಜುಲೈ 12 ರಂದು ಕರಾವಳಿಯಲ್ಲಿ ಭಾರೀ ಮಳೆಯ ಮುನ್ಸೂಚನೆ ಇದೆ. ಕೆಲವು ದಿನಗಳ ಹಿಂದಿನ ಮುನ್ಸೂಚನೆಗಳಲ್ಲಿ ರೆಡ್ ಅಲರ್ಟ್ ಪ್ರಸ್ತಾಪಿಸಿದ್ದರೂ, ಇತ್ತೀಚಿನ ವರದಿಗಳು ಆರೆಂಜ್ ಅಥವಾ ಯೆಲ್ಲೋ ಅಲರ್ಟ್ ಗೆ ಹೆಚ್ಚು ಒತ್ತು ನೀಡಿವೆ.

ಇದನ್ನೂ ಓದಿ : ಕರ್ನಾಟಕದಲ್ಲಿ 4 ದಿನ ಬಾರೀ ಮಳೆ : ರೆಡ್‌ ಅಲರ್ಟ್‌, ಶಾಲೆಗಳಿಗೆ ರಜೆ ಸಾಧ್ಯತೆ

ಭಾರೀ ಮಳೆಯ ನಿರೀಕ್ಷೆಯಿರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೀನುಗಾರರು ನದಿಗೆ ಇಳಿಯದಂತೆ ಜಿಲ್ಲಾಡಳಿತಗಳು ಎಚ್ಚರಿಕೆ ನೀಡಿವೆ.

Karnataka Weather Report Extreme Rain Udupi Mangalore till july 15 in kannada News

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories