ಕಾರ್ಕಳದಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ಮೇಲೆ ಪೊಲೀಸರ ದಾಳಿ : ಪ್ರಕರಣ ದಾಖಲು

Karkala illegal mining : ಕಾರ್ಕಳ :ಅಕ್ರಮ ಕಲ್ಲುಗಣಿಗಾರಿಕೆ ನಡೆಸುತ್ತಿದ್ದ ಖಚಿತ ಮಾಹಿತಿಯ ಮೇಲೆ ಪೊಲೀಸರು ದಾಳಿ ನಡೆಸಿ ಮಾಲಕ ಸೇರಿ ಮೂವರ ವಿರುದ್ದ ಪ್ರಕರಣ ದಾಖಲಿಸಿಕೊಂಡಿರುವ ಘಟನೆ ಕಾರ್ಕಳದಲ್ಲಿ ನಡೆದಿದೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ನಕ್ರೆ ಪೊಸನೊಟ್ಟು ಎಂಬಲ್ಲಿ ಅಕ್ರಮವಾಗಿ ಕಲ್ಲುಗಣಿಗಾರಿಕೆ ನಡೆಯುತ್ತಿತ್ತು.
ಈ ಕುರಿತು ಖಚಿತ ಮಾಹಿತಿಯ ಮೇಲೆ ಪೊಲೀಸರು ಕಾರ್ಕಳ ನಗರ ಠಾಣೆಯ ಪೊಲೀಸರು ದಾಳಿ ನಡೆಸಿದ್ದಾರೆ.
Also Read : ಬೆಂಗಳೂರು RCB ಕಾಲ್ತುಳಿತಕ್ಕೆ 3 ಸಂಸ್ಥೆಗಳೇ ಹೊಣೆ : ನ್ಯಾ. ಮೈಕಲ್ ಡಿ. ಕುನ್ನಾ ವರದಿಯಲ್ಲೇನಿದೆ ?
ಈ ವೇಳೆ ಸ್ಥಳದಲ್ಲಿ ಯಾರು ಇಲ್ಲದಿದ್ದರೂ ಕೂಡ ಸ್ಥಳದ ಮಾಲೀಕ ಸುಧಾಕರ್ ಸೇರಿದಂತೆ ಲಾರಿ ಮಾಲೀಕ ಮತ್ತು ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
Karkala illegal mining : ಅಕ್ರಮಗಣಿಗಾರಿಕೆ ಪೊಲೀಸ್ ದಾಳಿ
ಕಾರ್ಕಳ ನಗರ ಪೊಲೀಸ್ ಠಾಣೆಯ ಉಪನಿರೀಕ್ಷಕ ಶಿವಕುಮಾರ್ ಎಸ್.ಆರ್. ಅವರಿಗೆ ಬೀಟ್ ಸಿಬ್ಬಂದಿ ಶಿವರಾಜ್ ಅವರಿಂದ ಕುಕ್ಕುಂದೂರು ಗ್ರಾಮದ ನಕ್ರೆ ಪೊಸನೊಟ್ಟು ಎಂಬಲ್ಲಿರುವ ಸರ್ವೇ ನಂಬ್ರ 557/2 ರಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿತ್ತು.
ಉಪನಿರೀಕ್ಷಕ ಶಿವಕುಮಾರ್ ಅವರು ತಕ್ಷಣವೇ ಠಾಣಾ ಸಿಬ್ಬಂದಿಗಳಾದ ಸದಾಶಿವ ಶೆಟ್ಟಿ, ಶಿವರಾಜ್ ಮತ್ತು ಸಂತೋಷ್ ಅವರೊಂದಿಗೆ ಸ್ಥಳಕ್ಕೆ ತೆರಳಿದರು.
ಸ್ಥಳವನ್ನು ಪರಿಶೀಲಿಸಿದಾಗ, ಬೃಹತ್ ಪ್ರಮಾಣದಲ್ಲಿ ಕಲ್ಲು ಗಣಿಗಾರಿಕೆ ನಡೆಸಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ಸುಧಾಕರ ಎಂಬಾತನು ಯಾವುದೇ ಪರವಾನಿಗೆಯನ್ನು ಪಡೆಯದೆ ಗಣಿಗಾರಿಕೆ ನಡೆಸುತ್ತಿದ್ದ.
ತನ್ನ ಸ್ವಂತ ಲಾಭಕ್ಕಾಗಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದು, ಕೆಎ 20 1737 ನಂಬರಿನ ಲಾರಿಯಲ್ಲಿ ಕಲ್ಲುಗಳನ್ನು ಸಾಗಿಸಲು ಪ್ರಯತ್ನಿಸುತ್ತಿದ್ದ ಮಾಹಿತಿ ಲಭಿಸಿದೆ.
Also Read : ಅಹಮದಾಬಾದ್ ವಿಮಾನ ದುರಂತ : 260 ಜನರ ಜೀವ ತೆಗೆದಿದ್ದು ಯಾರು ?
ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಕಲ್ಲು ಕ್ವಾರಿ ಜಾಗದ ಮಾಲೀಕ ಸುಧಾಕರ, ಕೆಎ 20 1737 ನಂಬರಿನ ಲಾರಿ ಮಾಲೀಕ ಮತ್ತು ಲಾರಿ ಚಾಲಕನ ವಿರುದ್ಧ ಅಪರಾಧ ಕ್ರಮಾಂಕ 94/2025 ರಂತೆ ಪ್ರಕರಣ ದಾಖಲಿಸಲಾಗಿದೆ.
ಅಕ್ರಮ ಗಣಿಗಾರಿಕೆಯ ವಿರುದ್ಧ ಪೊಲೀಸರ ಈ ಕಾರ್ಯಾಚರಣೆಯು ಜಿಲ್ಲೆಯಲ್ಲಿ ನಡೆಯುತ್ತಿರುವ ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಪ್ರಯತ್ನದ ಭಾಗವಾಗಿದೆ.
Karkala illegal mining Police raid Case registered in Kannada News



