ಯೂಟ್ಯೂಬ್‌ ‘ಹೈಪ್‌’ ಬಟನ್‌ ವೈಶಿಷ್ಟ್ಯವೇನು ? ಸಣ್ಣ ಕಂಟೆಂಟ್‌ದಾರರಿಗೆ ಗುಡ್‌ನ್ಯೂಸ್‌

ಯೂಟ್ಯೂಬ್‌ ಭಾರತದಲ್ಲಿ ಹೈಪ್‌ (YouTube Hype) ಅನ್ನೋ ವೈಶಿಷ್ಟ್ಯವನ್ನು ಪರಿಚಯಿಸಿದೆ. ಇದು ಸಣ್ಣ ಮತ್ತು ಮಧ್ಯಮ ಕಂಟೆಂಟ್‌ ರಚನಾಕಾರರಿಗೆ ಹಣ ಗಳಿಸಲು ಅವಕಾಶಗಳನ್ನು ಸೃಷ್ಟಿಸುವ ಒಂದ ಹೊಸ ಮಾರ್ಗವಾಗಿದೆ.

500 ರಿಂದ 5ಲಕ್ಷ ಚಂದಾದಾರರನ್ನು ಹೊಂದಿರುವ ರಚನಾಕಾರರನ್ನು ಗುರಿಯಾಗಿಸಿಕೊಂಡು ಪರಿಚಯಿಸಿರುವ ವೈಶಿಷ್ಟ್ಯವಾಗಿದೆ. ಯೂಟ್ಯೂಬ್‌ನ ಹೈಪ್‌ ವೈಶಿಷ್ಟ್ಯವು ವೀಕ್ಷಕರು ತಮ್ಮ ನೆಚ್ಚಿನ ವೀಡಿಯೊಗಳನ್ನು ಹೈಪ್‌ ಮಾಡಲು ಸಹಾಯ ಮಾಡುತ್ತದೆ.

ಇದು ಲೈಕ್‌, ಶೇರ್‌ ಮತ್ತು ಸಬ್‌ಸ್ಕ್ರೈಬ್‌ ಮಾಡುವುದರ ಜೊತೆಗೆ ರಚನಾಕಾರರನ್ನು ಬೆಂಬಲಿಸುವ ಹೊಸ ಮಾರ್ಗವಾಗಿದೆ. ಸಣ್ಣ ಕಂಟೆಂಟ್‌ ರಚನಾಕಾರರು ಹೊಸ ಪ್ರೇಕ್ಷಕರನ್ನು ತಲುಪುವುದು ಇಂದಿನ ದಿನಗಳಲ್ಲಿ ದೊಡ್ಡ ಸವಾಲಾಗಿದೆ.

Also Read : ಅತ್ಯಂತ ಕಡಿಮೆ ಬೆಲೆಯ ಮೊಬೈಲ್‌ ರಿಚಾರ್ಜ್‌ : ಏರ್ಟೆಲ್‌, ಜಿಯೋ, ವಿಐ ಯಾವುದು ಬೆಸ್ಟ್‌ ?

ಅವರು ತಮ್ಮ ಅಭಿಮಾನಿಗಳನ್ನು ಹೊಂದಿದ್ದರೂ ಸಹ ಅಲ್ಗಾರಿದಮ್ ದೊಡ್ಡ ಚಾನೆಲ್‌ಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ಈ ಕಾರಣದಿಂದಾಗಿ ಯೂಟ್ಯೂಬ್‌, ಹೈಪ್‌ ಎಂಬ ವೈಶಿಷ್ಟ್ಯವನ್ನು ಪರಿಚಯಿಸಿದೆ.

YouTube Hype : ಹೈಪ್‌ ವೈಶಿಷ್ಟ್ಯ ಗೇಮ್‌ ಚೇಂಜರ್‌ ಆಗಬಹುದಾ ?

ಹೈಪ್‌ ವೈಶಿಷ್ಟ್ಯವು ಸಣ್ಣ ರಚನಾಕಾರರಿಗೆ ಲೆವಲ್‌ ಪ್ಲೇಯಿಂಗ್‌ ಫೀಲ್ಡ್‌ ಅನ್ನು ಒದಗಿಸುತ್ತದೆ. ಕಂಟೆಂಟ್‌ ಅನ್ನು ವೀಕ್ಷಿಸಿದ ವೀಕ್ಷಕರು ವೀಡಿಯೊವನ್ನು ಹೈಪ್‌ ಮಾಡಿದಾಗ, ಆ ವೀಡಿಯೊಗೆ ಅಂಕಗಳು ಸಿಗುತ್ತವೆ.

ಕಡಿಮೆ ಚಂದಾದಾರನ್ನು ಹೊಂದಿರುವ ರಚನಾಕಾರರ ವೀಡಿಯೊಗಳಿಗೆ ಬೋನಸ್‌ ಅಂಕಗಳು ದೊರೆಯುತ್ತವೆ. ಇದರಿಂದ ಅವರು ಲೀಡರ್‌ಬೋರ್ಡ್‌ನಲ್ಲಿ ಮೇಲಕ್ಕೆ ಬರಲು ಸಹಾಯ ಮಾಡುತ್ತದೆ. ಇದರಿಂದ ಹೆಚ್ಚಿನ ವೀಕ್ಷಣೆ, ಚಂದಾದಾರಿಕೆ ಹಾಗೂ ಹೆಚ್ಚಿನ ಗಳಿಕೆ ಸಾಧ್ಯವಾಗುತ್ತದೆ.

ಯೂಟ್ಯೂಬ್‌ನ ಎಕ್ಸ್‌ಪ್ಲೋರ್‌ ವಿಭಾಗದ ಅಡಿಯಲ್ಲಿ ಟಾಪ್‌ 100 ಹೈಪ್ಡ್‌ ವೀಡಿಯೊಗಳ ಲೀಡರ್‌ಬೋರ್ಡ್‌ನಲ್ಲಿ ಅವರ ವೀಡಿಯೊ ಕಾಣಿಸಿಕೊಂಡಾಗ ಅಥವಾ ಯೂಟ್ಯೂಬ್‌ನ ಹೋಮ್‌ ಫೀಡ್‌ನಲ್ಲಿ ಪ್ರಚಾರ ಪಡೆದಾಗ ಅದು ಹೊಸ ವೀಕ್ಷಕರನ್ನು ತಲುಪುತ್ತದೆ. ಇದರಿಂದಾಗಿ ಅವರ ಚಾನಲ್‌ನ ಬೆಳವಣಿಗೆಯಾಗುತ್ತದೆ.

Also Read : 200MP ಕ್ಯಾಮೆರಾ, 1TB ಸ್ಟೋರೆಜ್‌ : ಸ್ಯಾಮ್‌ಸಂಗ್ ಗ್ಯಾಲಕ್ಸಿ S26 ಅಲ್ಟ್ರಾದಲ್ಲಿ ಏನೇನಿದೆ ?

YouTube Hype : ಯೂಟ್ಯೂಬ್‌ ಹೈಪ್‌ನ ವೈಶಿಷ್ಟ್ಯಗಳು

  • ಯೂಟ್ಯೂಬ್‌ ಹೈಪ್‌ ನ ಅರ್ಹತೆ ಪಡೆಯಲು ರಚನೆಕಾರರು ಯೂಟ್ಯೂಬ್‌ ಪಾಲುದಾರ ಕಾರ್ಯಕ್ರಮದ ಭಾಗವಾಗಿರಬೇಕು.
  • ರಚನಾಕಾರರು ಕನಿಷ್ಠ 500 ರಿಂದ 500,000 ಚಂದಾದಾರರನ್ನು ಹೊಂದಿರಬೇಕು.
  • ಹೈಪ್ ವೈಶಿಷ್ಟ್ಯವು ಅರ್ಹ ಚಾನಲ್‌ಗಳಿಗೆ ಸ್ವಯಂಚಾಲಿತವಾಗಿಯೇ ಲಭ್ಯವಿರುತ್ತದೆ. ಅದಕ್ಕೆ ಯಾವುದೇ ಸೆಟಪ್ ಮಾಡಿಕೊಳ್ಳುವ ಅಗತ್ಯವಿಲ್ಲ.
  • ವೀಕ್ಷಕರು ವೀಡಿಯೊಗಳನ್ನು ಹೈಪ್ ಮಾಡಲು ಆ ವೀಡಿಯೊ ಕಳೆದ ಏಳು ದಿನಗಳಲ್ಲಿ ಪ್ರಕಟಿಸಿರಬೇಕು. ಅಂದರೆ ವೀಕ್ಷಕರು 7 ದಿನಗಳ ಒಳಗೆ ಹೈಪ್‌ ಮಾಡಬಹುದು.
  • ವೀಕ್ಷಕರಿಗೆ ಲೈಕ್ ಬಟನ್ ಪಕ್ಕದಲ್ಲಿ ಹೈಪ್ ಬಟನ್ ಕಾಣಿಸಿಕೊಳ್ಳುತ್ತದೆ ಮತ್ತು ವೀಡಿಯೊ ಅರ್ಹ ಚಾನಲ್‌ನಿಂದ ಬಂದಿರಬೇಕು. ಅದು 7 ದಿನಗಳಿಗಿಂತ ಹಳೆಯದಾಗಿರಬಾರದು.
  • ವೀಕ್ಷಕರು ವೀಡಿಯೊವನ್ನು ಬೆಂಬಲಿಸಲು ಹೈಪ್‌ ಬಟನ್‌ ಅನ್ನು ಟ್ಯಾಪ್‌ ಮಾಡಬಹುದು. ಇದನ್ನು ಬಳಕೆದಾರರು ವಾರಕ್ಕೆ 3 ಬಾರಿ ಉಚಿತವಾಗಿವೀಡಿಯೊಗಳನ್ನು ಹೈಪ್‌ ಮಾಡಬಹುದು.
  • ವೀಕ್ಷಕರಿಂದ ಹೈಪ್ ಮಾಡಲ್ಪಟ್ಟ ವೀಡಿಯೊಗಳು ಅಂಕಗಳನ್ನು ಪಡೆಯುತ್ತವೆ. ಅವು ಲೀಡರ್‌ಬೋರ್ಡ್‌ನಲ್ಲಿ ಮೇಲಕ್ಕೆ ಹೋಗುತ್ತವೆ ಮತ್ತು ಯೂಟ್ಯೂಬ್‌ ಶಿಫಾರಸುಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.
  • ಹೈಪ್‌ ಬಟನ್‌ ಹೆಚ್ಚಿನ ಪ್ರೇಕ್ಷಕರನ್ನು ತಲುಪಲು ರಚನಾಕಾರರಿಗೆ ಸಹಾಯ ಮಾಡುತ್ತದೆ.

YouTube launches new Hype button in India know how it helps small creators in kannada News

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories