ಪಿಎಂ ಕಿಸಾನ್ ಯೋಜನೆ : ಕರ್ನಾಟಕದ 5 ಲಕ್ಷ ರೈತರಿಗೆ ಸಿಗಲ್ಲ ಹಣ

PM Kisan Yojana : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯ 20ನೇ ಕಂತು ಬಿಡುಗಡೆಗೆ ರೈತರು ಕಾಯುತ್ತಿದ್ದಾರೆ. ಆದರೆ ಕರ್ನಾಟಕದ 5 ಲಕ್ಷ ಜನರಿಗೆ ಈ ಯೋಜನೆಯ ಮುಂದಿನ ಕಂತು ಸಿಗೋದಿಲ್ಲ.

ಯಾವ ಕಾರಣಕ್ಕೆ ಈ ರೈತರಿಗೆ ಪಿಎಂ ಕಿಸಾನ್‌ ಯೋಜನೆಯ ಕಂತು ಸಿಗೋದಿಲ್ಲ. ಅಂತಹ ರೈತರು ಹಣ ಪಡೆಯೋದಕ್ಕೆ ಏನು ಮಾಡ್ಬೇಕು ಅನ್ನೋ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಇಂದು ದೇಶದ ಕೋಟ್ಯಾಂತರ ರೈತರಿಗೆ ಆರ್ಥಿಕ ನೆರವು ನೀಡಿದೆ. ವಾರ್ಷಿಕ 6000 ರೂಪಾಯಿ ಹಣವನ್ನು ವರ್ಷದಲ್ಲಿ ಮೂರು ಕಂತುಗಳ ಮೂಲಕ ರೈತರಿಗೆ ನೀಡಲಾಗುತ್ತಿದೆ.

ವಾರ್ಷಿಕವಾಗಿ ಮೂರರಿಂದ ನಾಲ್ಕು ತಿಂಗಳ ಅವಧಿಯಲ್ಲಿ ರೈತರ ಬ್ಯಾಂಕ್‌ ಖಾತೆಗೆ ನೇರವಾಗಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯ ಹಣ ಜಮೆ ಆಗುತ್ತಿದೆ. ಇದೀಗ 20ನೇ ಕಂತಿನ ಹಣಕ್ಕಾಗಿ ರೈತರು ಕಾಯುತ್ತಿದ್ದಾರೆ.

Also Read : 8ನೇ ವೇತನ ಆಯೋಗ ಯಾವಾಗ ಜಾರಿ : ವೇತನ ಎಷ್ಟು ಹೆಚ್ಚಳ ಗೊತ್ತಾ ?

5 ಲಕ್ಷ ರೈತರಿಗಿಲ್ಲ ಪಿಎಂ ಕಿಸಾನ್‌ ಹಣ

ಇ-ಕೆವೈಸಿ (e-KYC) ಕಡ್ಡಾಯ: ಪಿಎಂ ಕಿಸಾನ್ ಯೋಜನೆಯಡಿ ಹಣ ಪಡೆಯಲು ಇ-ಕೆವೈಸಿ ಕಡ್ಡಾಯಗೊಳಿಸಲಾಗಿದೆ. ಇ-ಕೆವೈಸಿ ಪೂರ್ಣಗೊಳಿಸದ ರೈತರಿಗೆ ಮುಂದಿನ ಕಂತು ಸಿಗುವುದಿಲ್ಲ.

ಆಧಾರ್ ಲಿಂಕ್‌ : ರೈತರ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಿರಬೇಕು ಮತ್ತು ಡಿಬಿಟಿ (ನೇರ ಲಾಭ ವರ್ಗಾವಣೆ) ಸಕ್ರಿಯಗೊಳಿಸಿರಬೇಕು. ಈ ಪ್ರಕ್ರಿಯೆಗಳನ್ನು ಪೂರ್ಣಗೊಳಿಸದಿದ್ದರೆ ಹಣ ಜಮೆಯಾಗುವುದಿಲ್ಲ.

ಭೂ ದಾಖಲೆಗಳ ಪರಿಶೀಲನೆ : ರೈತರ ಭೂ ದಾಖಲೆಗಳು ಸರಿಯಾಗಿ ನವೀಕರಣಗೊಂಡಿರಬೇಕು ಮತ್ತು ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ ಪರಿಶೀಲನೆಗೊಂಡಿರಬೇಕು.

ಭೂ ದಾಖಲೆಗಳಲ್ಲಿನ ಅಸಮರ್ಪಕತೆ ಅಥವಾ ತಪ್ಪು ಮಾಹಿತಿ ಇದ್ದರೆ, ಕಂತು ತಡೆಹಿಡಿಯಲಾಗುತ್ತದೆ.

ಅನರ್ಹ ಫಲಾನುಭವಿಗಳು: ಆದಾಯ ತೆರಿಗೆ ಪಾವತಿದಾರರು, ಸರ್ಕಾರಿ ನೌಕರರು, ಪಿಂಚಣಿದಾರರು (ತಿಂಗಳಿಗೆ ₹10,000 ಕ್ಕಿಂತ ಹೆಚ್ಚು ಪಿಂಚಣಿ ಪಡೆಯುವವರು).

ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವವರು ಈ ಯೋಜನೆಗೆ ಅರ್ಹರಲ್ಲ. ಅನರ್ಹರ ಪಟ್ಟಿಯಲ್ಲಿರುವ ರೈತರಿಗೂ ಕಂತು ಸಿಗುವುದಿಲ್ಲ.

Also Read : ಗೃಹಲಕ್ಷ್ಮೀ ಸಂಘದಿಂದ 5000 ರೂ. : ಗೃಹಿಣಿಯರಿಗೆ ಏನಿದು ಗುಡ್‌ನ್ಯೂಸ್‌

ರಾಜ್ಯದ ಅನೇಕ ರೈತರು ಮುಂದಿನ ಕಂತಿನಿಂದ ವಂಚಿತರಾಗುವ ಸಾಧ್ಯತೆ ಇದೆ. ರೈತರು ತಮ್ಮ ಸ್ಥಿತಿಯನ್ನು ಪರಿಶೀಲಿಸಲು PM-KISAN ಅಧಿಕೃತ ವೆಬ್‌ಸೈಟ್‌ಗೆ (pmkisan.gov.in) ಭೇಟಿ ನೀಡಿ.

PM Kisan Yojana 5 lakh farmers will not receive upcoming installment

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories