ಕುಂದಾಪುರ : ಸ್ನಾನಕ್ಕೆ ತೆರಳುತ್ತಿದ್ದ 25 ವರ್ಷದ ಯುವಕ ಹಠಾತ್ ಕುಸಿದು ಬಿದ್ದು ಸಾವು
ಬಿಬಿಎ ಪದವೀಧರರಾಗಿದ್ದ ಶಶಿಧರ ಅವರು ಬೆಂಗಳೂರಿನ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಆದರೆ, ಕಳೆದ ನಾಲ್ಕು ವರ್ಷಗಳಿಂದ ಕೋವಿಡ್ ನಂತರದ 'ವರ್ಕ್ ಫ್ರಮ್ ಹೋಮ್' (ಮನೆಯಿಂದಲೇ ಕೆಲಸ) ವ್ಯವಸ್ಥೆಯಡಿ ಹರ್ಕೂರಿನ ಸ್ವಗೃಹದಲ್ಲೇ ಇದ್ದು ಕೆಲಸ ನಿರ್ವಹಿಸುತ್ತಿದ್ದರು.

ಕುಂದಾಪುರ : ವರ್ಕ್‌ಫ್ರಂ ಹೋಮ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವಕನೋರ್ವ ಮನೆಯಲ್ಲಿ ಸ್ನಾನಕ್ಕೆ ತೆರಳುತ್ತಿದ್ದ ವೇಳೆಯಲ್ಲಿ ಹಠಾತ್ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹರ್ಕೂರು ಎಂಬಲ್ಲಿ ನಡೆದಿದೆ.
ಏನಿದು ಘಟನೆ ?
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿ ಸಮೀಪದ ಹರ್ಕೂರು ಕಟ್ಟಿನಮಕ್ಕಿ ನಿವಾಸಿಯಾದ ಶಶಿಧರ ದೇವಾಡಿಗ (25) (Shashidhar devadiga harkur) ಎಂಬ ಯುವಕನೇ ಮೃತಪಟ್ಟ ದುರ್ದೈವಿ. ಬಿಬಿಎ ಪದವೀಧರರಾಗಿದ್ದ ಶಶಿಧರ ಅವರು ಬೆಂಗಳೂರಿನ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಆದರೆ, ಕಳೆದ ನಾಲ್ಕು ವರ್ಷಗಳಿಂದ ಕೋವಿಡ್ ನಂತರದ ‘ವರ್ಕ್ ಫ್ರಮ್ ಹೋಮ್’ (ಮನೆಯಿಂದಲೇ ಕೆಲಸ) ವ್ಯವಸ್ಥೆಯಡಿ ಹರ್ಕೂರಿನ ಸ್ವಗೃಹದಲ್ಲೇ ಇದ್ದು ಕೆಲಸ ನಿರ್ವಹಿಸುತ್ತಿದ್ದರು.
ಇದನ್ನೂ ಓದಿ : ಉಡುಪಿಯ ಮೀನುಗಾರರಿಗೂ ತಟ್ಟಿದ ಗ್ಯಾಸ್ ಟ್ರಬಲ್ : ಆಳಸಮುದ್ರ ಮೀನುಗಾರಿಕೆಗೆ ಸಂಕಷ್ಟ
ಸದಾ ಲವಲವಿಕೆಯಿಂದ ಇರುತ್ತಿದ್ದ ಶಶಿಧರ ಅವರು, ಎಂದಿನಂತೆ ಸ್ನಾನಗೃಹಕ್ಕೆ ತೆರಳುತ್ತಿದ್ದಾಗ ಈ ಅನಾಹುತ ಸಂಭವಿಸಿದೆ. ಮನೆಯ ಹಿಂಭಾಗಕ್ಕೆ ಹೋಗುತ್ತಿದ್ದಂತೆಯೇ ಹಠಾತ್ ಕುಸಿದು ಬಿದ್ದಿದ್ದಾರೆ. ಇದನ್ನು ಗಮನಿಸಿದ ಅವರ ಅಜ್ಜಿ ಅಕ್ಕಯ್ಯ ಅವರು ತಕ್ಷಣ ಓಡಿ ಬಂದು ಮೊಮ್ಮಗನ ಆರೈಕೆ ಮಾಡಲು ಪ್ರಯತ್ನಿಸಿದ್ದಾರೆ. ಈ ವೇಳೆ ಶಶಿಧರ ಅವರು ತಮಗೆ ಉಸಿರಾಟಕ್ಕೆ ತೊಂದರೆಯಾಗುತ್ತಿದೆ ಎಂದು ಎದೆ ಹಿಡಿದುಕೊಂಡು ತೀವ್ರವಾಗಿ ನರಳಾಡಿದ್ದಾರೆ ಎನ್ನಲಾಗಿದೆ.
ಶಶಿಧರ ದೇವಾಡಿಗ ಚಿಕಿತ್ಸೆ ಫಲಕಾರಿಯಾಗದ ಸಾವು
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಕುಟುಂಬಸ್ಥರು ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದರಾದರೂ, ಶಶಿಧರ ಅವರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ. ಕಿರಿಯ ವಯಸ್ಸಿನಲ್ಲೇ ಹೃದಯಾಘಾತ ಸಂಭವಿಸಿರುವ ಸಾಧ್ಯತೆಯ ಬಗ್ಗೆ ವೈದ್ಯಕೀಯ ವಲಯದಲ್ಲಿ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ : ಕರ್ನಾಟಕ ಬಜೆಟ್ 2026: ಸಿದ್ದರಾಮಯ್ಯ ಬಜೆಟ್ ನಲ್ಲಿ ಕರಾವಳಿಗೆ ಕೊಟ್ಟಿದ್ದೇನು ?
ಈ ಸಂಬಂಧ ಮೃತರ ತಂದೆ ನೀಡಿದ ದೂರಿನ ಮೇರೆಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿ.
Shashidhar devadiga harkur kundapura sudden death case



