ಧರ್ಮಸ್ಥಳದಲ್ಲಿ ಕೆಲಸ ಮಾಡಿದ್ದ ಪೊಲೀಸರ ಲಿಸ್ಟ್ ಕೇಳಿದ ಎಸ್‌ಐಟಿ
ಮಂಗಳೂರು : ಧರ್ಮಸ್ಥಳದಲ್ಲಿ ಸಾಮೂಹಿಕ ಅಂತ್ಯಕ್ರೀಯೆ (Dharmasthala Mass Burial Case) ಪ್ರಕರಣದ ತನಿಖೆಯನ್ನು ಎಸ್‌ಐಟಿ ಚುರುಕುಗೊಳಿಸಿದೆ. ಒಂದೆಡೆ ಶವಗಳನ್ನು ಹೂತಿದ್ದ ಸ್ಥಳವನ್ನು ಅಗೆಯುತ್ತಿದ್ರೆ, ಮತ್ತೊಂದೆಡೆಯಲ್ಲಿ ಎಸ್‌ಐಟಿ ಧರ್ಮಸ್ಥಳದಲ್ಲಿ ಕೆಲಸ ಮಾಡಿದ್ದ ಅಧಿಕಾರಿಗಳ ಲಿಸ್ಟ್ ಕೇಳಿದೆ.
ಅನಾಮಿಕ ವ್ಯಕ್ತಿ ನೀಡದ ದೂರಿನ ಆಧಾರದ ಮೇಲೆ ಒಟ್ಟು 13 ಕಡೆಗಳಲ್ಲಿ ಶವಗಳನ್ನು ಹೂತಿರುವ ಜಾಗ ಗುರುತು ಮಾಡಲಾಗಿದೆ. ಶವಗಳ ಶೋಧ ಕಾರ್ಯವನ್ನು ನಡೆಸಲಾಗುತ್ತಿದೆ. ನಿನ್ನೆ ಮೊದಲ ಗುರುತಿನಲ್ಲಿ ಉತ್ಕನನ ಕಾರ್ಯ ನಡೆಸಲಾಗಿತ್ತು.
ಇಂದು ಎರಡನೇ ಪಾಯಿಂಟ್‌ನಲ್ಲಿ ಉತ್ಕನನ ಕಾರ್ಯವನ್ನು ನಡೆಸಲಾಗುತ್ತಿದೆ. ಎಸ್‌ಐಟಿ ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ. ಈ ನಡುವಲ್ಲೇ ಎಸ್‌ಐಟಿ ಅಧಿಕಾರಿಗಳು ಈ ಹಿಂದೆ ಧರ್ಮಸ್ಥಳದಲ್ಲಿ ಕೆಲಸ ಮಾಡಿರುವ ಅಧಿಕಾರಿಗಳ ಲಿಸ್ಟ್ ಕೇಳಿದೆ.
ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳ ಮಾಹಿತಿಯನ್ನು ಪಡೆದು, ಅಧಿಕಾರಿಗಳನ್ನೇ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.
ಕಂದಾಯ ಅಧಿಕಾರಿಗಳ ವಿಚಾರಣೆ ?
ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ವ್ಯಾಪ್ತಿಯಲ್ಲಿ ಶವಗಳ ಅಂತ್ಯಕ್ರೀಯೆ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಈಗಾಗಲೇ ಎಸ್‌ಐಟಿ ಅಧಿಕಾರಿಗಳು ಈಗಾಗಲೇ ಪೊಲೀಸರ ಲಿಸ್ಟ್ ಕೇಳಿದ್ದಾರೆ.
ʼ
ಪೊಲೀಸರಷ್ಟೇ ಅಲ್ಲಾ ಕಂದಾಯ ಇಲಾಖೆಯ ಅಧಿಕಾರಿಗಳ ಮಾಹಿತಿಯನ್ನೂ ಕೂಡ ಎಸ್‌ಐಟಿ ಅಧಿಕಾರಿಗಳು ಕೇಳುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಈ ಹಿಂದೆ ಕೆಲಸ ಮಾಡಿದ್ದ ಅಧಿಕಾರಿಗಳಿಗೆ ನಡುಕ ಶುರುವಾಗಿದೆ.
ಮೀಸಲು ಅರಣ್ಯದಲ್ಲಿ ಜೆಸಿಬಿ ಕಾರ್ಯಾಚರಣೆಗೆ ಅಡ್ಡಿ: ಏನು ಹೇಳುತ್ತೆ ಸುಪ್ರೀಂ ಕೋರ್ಟ್ ?
ಧರ್ಮಸ್ಥಳದಲ್ಲಿ ತಲೆ ಬುರುಡೆ ರಹಸ್ಯ ಬೇಧಿಸಲು ಎಸ್ಐಟಿ ತಂಡ ಹಗಲಿರುಳು ಶ್ರಮಿಸುತ್ತಿದೆ. ಆದರೆ ಮೀಸಲು ಅರಣ್ಯ ಅನ್ನೋ ಕಾರಣಕ್ಕೆ ಜೆಸಿಬಿ ಕಾರ್ಯಾಚರಣೆಗೆ ಅರಣ್ಯ ಇಲಾಖೆ ತಡೆಯೊಡ್ಡಿದೆ.
Also Read : ಕಾರ್ಕಳ ಪರಶುರಾಮ ಪ್ರತಿಮೆ ಪ್ರಕರಣ : ನ್ಯಾಯಾಲಯಕ್ಕೆ ಮುನಿಯಾಲು ಪಿಐಎಲ್ ಸಲ್ಲಿಕೆ
ಆದರೆ ಕೊಲೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶವನ್ನು ನೀಡಿದೆ. ಹಾಗಾದ್ರೆ ಸುಪ್ರೀಂ ಕೋರ್ಟ್ ಆದೇಶದಲ್ಲಿ ಏನಿದೆ ಅನ್ನೋದನ್ನು ನೋಡೋದಾದ್ರೆ.
ಮೀಸಲು ಅರಣ್ಯ, ಧಾರ್ಮಿಕ ಸ್ಥಳಗಳಲ್ಲಿ ಕ್ರೈಮ್ ಇನ್ವೆಸ್ಟಿಗೇಷನ್ ಮಾಡಲು ಸಂವಿಧಾನದಲ್ಲಿಯೇ ಅವಕಾಶವಿದೆ. ದೇಶದ ಸಂವಿಧಾನ, ಕಾನೂನುಗಳು ಆಗ ಸುಪ್ರೀಂ ಕೋರ್ಟ್ ಒತ್ತಿ ಹೇಳಿದೆ.
ಅಪರಾಧ ಪ್ರಕರಣಗಳ ತನಿಖೆ ಮಾಡುವಾಗ ಯಾವ ಕಾನೂನುಗಳು ಅನ್ವಯ ಆಗುವುದಿಲ್ಲ. ಕೇವಲ ಅಪರಾಧ ತನಿಖೆ ಸುಪ್ರೀಂ ಎಂದು ಸುಪ್ರೀಂ ಕೋರ್ಟ್ ಪದೇ ಪದೇ ಸ್ಪಷ್ಟಪಡಿಸಿದೆ.
Also Read :Pranav Mohanty : ಧರ್ಮಸ್ಥಳ ಎಸ್‌ಐಟಿ ತನಿಖೆಗೆ ಹಿನ್ನೆಡೆ ..? ಕೇಂದ್ರ ಸೇವೆಗೆ ಪ್ರಣವ್ ಮೊಹಾಂತಿ..!
ಹಿಂದೆ ಇಮೇರಿಕ ರಿಕೋ ಡಿಸೋಜಾ v/s ಡಿಪಿ ಟು ಕನ್ಸರ್ವೇಟರ್ ಆಫ್ ಫಾರೆಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು.
ಸುಪ್ರೀಂ ಕೋರ್ಟ್ ಕ್ರೈಂ ಇನ್ವೆಸ್ಟಿಗೇಷನ್ ಮಾಡಲು ಪೊಲೀಸರಿಗೆ ಮುಕ್ತ ಅವಕಾಶವಿದೆ. ಅದನ್ನು ಯಾವ ಕಾನೂನುಗಳು ಪ್ರಶ್ನಿಸಲು ಸಾಧ್ಯವಿಲ್ಲ ಎಂದು ಕ್ರೈಂ ಇನ್ವೆಸ್ಟಿಗೇಷನ್ ಪರವಾಗಿ ತೀರ್ಪಿತ್ತಿದೆ.
Dharmasthala Mass Burial Case Updates



