IPL 2026 : ಕೆಕೆಆರ್‌ ತಂಡಕ್ಕೆ ಕೆಎಲ್‌ ರಾಹುಲ್‌ ನಾಯಕ

ಕನ್ನಡಿಗ ಕೆಎಲ್‌ ರಾಹುಲ್‌ (KL Rahul) ಸದ್ಯ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಐಪಿಎಲ್‌ 2026 (IPL 2026) ರಲ್ಲಿ ಕೆಎಲ್ ರಾಹುಲ್ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದ ನಾಯಕರಾಗಲಿದ್ದಾರೆ. ಕೆಕೆಆರ್‌ ರಾಹುಲ್‌ ಅವರನ್ನು ಟ್ರೇಡ್‌ ಮಾಡಲು ಸಿದ್ದವಾಗಿದೆ.

ಕೆಕೆಆರ್‌ ತಂಡ ಐಪಿಎಲ್‌ 2025ರಲ್ಲಿ ಕಳಪೆ ಪ್ರದರ್ಶನ ನೀಡಿತ್ತು. ಅಂಕಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ಕುಸಿದಿರೋದು ನಿರಾಸೆ ಮೂಡಿಸಿತ್ತು. ಇದೇ ಕಾರಣದಿಂದಲೇ ತಂಡವನ್ನು ಪುನರಚಿಸಲು ಆಡಳಿತ ಮಂಡಳಿ ಮುಂದಾಗಿದೆ.

ದೆಹಲಿ ಕ್ಯಾಪಿಟಲ್ಸ್ (DC) ತಂಡದಲ್ಲಿದ್ದ ಕೆಎಲ್ ರಾಹುಲ್ ಅವರನ್ನು ಟ್ರೇಡ್ ಡೀಲ್ ಮೂಲಕ ತಮ್ಮ ತಂಡಕ್ಕೆ ಕರೆತರುವ ಯೋಜನೆ ಸಿದ್ದಮಾಡಿದೆ. ಈ ಹಿಂದೆ ಹಲವು ತಂಡಗಳನ್ನು ಮುನ್ನೆಡೆಸಿರುವ ಅನುಭವ ಹೊಂದಿರುವ ರಾಹುಲ್‌ ಸದ್ಯ ಡೆಲ್ಲಿ ತಂಡದ ಆಟಗಾರನಾಗಿದ್ದಾರೆ.

ಕೆಎಲ್‌ ರಾಹುಲ್‌ ಮೇಲೆ ಕಣ್ಣಿಟ್ಟಿದ್ಯಾಕೆ ಕೆಕೆಆರ್‌ ?

ಕೆಎಲ್ ರಾಹುಲ್ ‌ಓರ್ವ ಸರ್ವ ಶ್ರೇಷ್ಟ ಆಟಗಾರ. ಯಾವುದೇ ಕ್ರಮಾಂಕದಲ್ಲಿಯೂ ಆಡುವ ಸಾಮರ್ಥ್ಯ ಹೊಂದಿದ್ದಾರೆ. ಬ್ಯಾಟಿಂಗ್‌ ಜೊತೆಗೆ ವಿಕೆಟ್‌ ಕೀಪರ್‌ ಆಗಿ ಗುರುತಿಸಿಕೊಂಡಿದ್ದಾರೆ.

ಈಗಾಗಲೇ ಟೀಂ ಇಂಡಿಯಾವನ್ನು ಮುನ್ನೆಡೆಸಿದ ಅನುಭವ ರಾಹುಲ್‌ಗೆ ಇದೆ. ಅಷ್ಟೇ ಅಲ್ಲದೇ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಪಂಜಾನ್‌, ಲಕ್ನೋ ತಂಡಗಳ ನಾಯಕರಾಗಿ ತಂಡವನ್ನು ಮುನ್ನೆಡೆಸಿದ ಅನುಭವ ಹೊಂದಿದ್ದಾರೆ.

ಕೆಕೆಆರ್ ತಂಡದ ಸಹಾಯಕ ಕೋಚ್ ಅಭಿಷೇಕ್ ನಾಯರ್ ಅವರೊಂದಿಗೆ ರಾಹುಲ್ ಉತ್ತಮ ಸಂಬಂಧ ಹೊಂದಿದ್ದು, ಇದು ರಾಹುಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಪ್ರಮುಖ ಕಾರಣ ಎನ್ನಲಾಗುತ್ತಿದೆ.

ಕೆಎಲ್‌ ರಾಹುಲ್ ಈ ಹಿಂದೆ ಪಂಜಾಬ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. IPL 2025 ಸೀಸನ್‌ನಲ್ಲಿ ಅವರು 14 ಕೋಟಿ ರೂಪಾಯಿಗೆ ದೆಹಲಿ ಕ್ಯಾಪಿಟಲ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದರು.

ಇದನ್ನೂ ಓದಿ : ಮುಂದಿನ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಪರ ವಿರಾಟ್‌ ಕೊಹ್ಲಿ ಬೆಂಗಳೂರಲ್ಲಿ ಆಡೋದಿಲ್ಲ

ರಾಹುಲ್‌ ಕೆಕೆಆರ್‌ – ಐಯ್ಯರ್‌ ಡೆಲ್ಲಿಗೆ

ದೆಹಲಿ ಕ್ಯಾಪಿಟಲ್ಸ್ ತಂಡಕ್ಕೆ ಬದಲಿ ಆಟಗಾರನನ್ನು ನೀಡುವುದೇ ದೊಡ್ಡ ಸವಾಲು. ಕೋಲ್ಕತ್ತಾ ತಂಡವು ರಾಹುಲ್‌ ಖರೀದಿಗಾಗಿ 25 ಕೋಟಿ ರೂ.ಗಳವರೆಗೆ ಖರ್ಚು ಮಾಡಲು ಸಿದ್ಧವಿದೆ ಎಂದು ಹೇಳಿವೆ.

ಕೇವಲ ಕೋಲ್ಕತ್ತಾ ನೈಟ್‌ ರೈಡರ್ಸ್‌ ಮಾತ್ರವಲ್ಲ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಕೂಡ ರಾಹುಲ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಆಸಕ್ತಿ ತೋರಿಸಿವೆ.

ಕೆಎಲ್ ರಾಹುಲ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಸೇರಿಸಿಕೊಳ್ಳುವುದು ದೊಡ್ಡ ಸವಾಲು. ದೆಹಲಿ ಕ್ಯಾಪಿಟಲ್ಸ್ ತಂಡಕ್ಕೆ ರಾಹುಲ್ ಅವರಿಗೆ ಸರಿಸಮಾನವಾದ ಆಟಗಾರರನ್ನು ನೀಡುವುದು.

ಕಳೆದ ಐಪಿಎಲ್‌ 2025ರಲ್ಲಿ ಕಳಪೆ ಪ್ರದರ್ಶನ ನೀಡಿದ್ದು. ಅದರಲ್ಲೂ 23.75 ಕೋಟಿ ನೀಡಿ ಖರೀದಿ ಮಾಡಿದ್ದ ವೆಂಕಟೇಶ್ ಅಯ್ಯರ್ ಅವರನ್ನು ವಿನಿಮಯ ಮಾಡಿಕೊಳ್ಳಲು ಕೆಕೆಆರ್ ಸಿದ್ಧವಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ಇಂಡೋನೇಷ್ಯಾ ರಾಷ್ಟ್ರೀಯ ಕ್ರಿಕೆಟ್‌ ತಂಡಕ್ಕೆ ಕುಂದಾಪುರದ ಸಂಪತ್‌ ಖಾರ್ವಿ

ವೆಂಕಟೇಶ್ ಅಯ್ಯರ್ ಅವರ ಪ್ರದರ್ಶನವನ್ನು ಗಮನಿಸಿದರೆ, ದೆಹಲಿ ಕ್ಯಾಪಿಟಲ್ಸ್ ತಂಡ ಈ ಡೀಲ್‌ಗೆ ಒಪ್ಪುವುದು ಕಷ್ಟ ಎನ್ನಲಾಗುತ್ತಿದೆ. ಕೆಎಲ್ ರಾಹುಲ್ ಕೆಕೆಆರ್‌ ತಂಡ ಆಟಗಾರರ ಬದಲಿಗೆ, ಹೆಚ್ಚುವರಿ ಹಣವನ್ನು ನೀಡುವ ಮೂಲಕ ರಾಹುಲ್ ಅವರನ್ನು ಕರೆತರಲು ಯತ್ನಿಸಬಹುದು.

KKR KL Rahul Captain IPL 2026 Trade Kannada News

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories