IPL 2026 : ಬೆಂಗಳೂರಲ್ಲಿ ಆಡೋದಿಲ್ಲ ವಿರಾಟ್ ಕೊಹ್ಲಿ : ಆರ್‌ಸಿಬಿ ಅಭಿಮಾನಿಗಳಿಗೆ ನಿರಾಸೆ

IPL 2026 Virat Kohli : ಇಂಡಿಯನ್ ಪ್ರೀಮಿಯರ್ ಲೀಗ್ (Indian Premier Leauge 2026) ಆರ್‌ಸಿಬಿ ಅಭಿಮಾನಿಗಳಿಗೆ ನಿರಾಸೆಯಾಗೋದು ಖಚಿತ.
ಆರ್‌ಸಿಬಿಯ ಸ್ಟಾರ್ ಪ್ಲೇಯರ್ ಮುಂದಿನ ಐಪಿಎಲ್ ನಲ್ಲಿ ಬೆಂಗಳೂರಲ್ಲಿ ಆಡೋದಿಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಐಪಿಎಲ್ ಟ್ರೋಫಿಯ ಸಂಭ್ರಮಾಚರಣೆಯ ವೇಳೆಯಲ್ಲಿ ಕಾಲ್ತುಳಿತ ಪ್ರಕರಣ ನಡೆದಿದೆ.
ಕರ್ನಾಟಕ ಕಂಡ ಘನಘೋರ ಘಟನೆಯಿಂದಾಗಿ ಆರ್‌ಸಿಬಿ ಆಡಳಿತ ಮಂಡಳಿ ಸದ್ಯ ಸಂಕಷ್ಟಕ್ಕೆ ಸಿಲುಕಿದೆ. ಐಪಿಎಲ್ 2025 ರ ಆರ್‌ಸಿಬಿ ವಿಜಯೋತ್ಸವದ ಆಚರಣೆಯ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ನಡೆದ ಕಾಲ್ತುಳಿತ ದುರಂತ ಸಂಭವಿಸಿತ್ತು. ಈ ದುರಂತದಲ್ಲಿ 11 ಜನರು ಮೃತಪಟ್ಟು, 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಘಟನೆಗೆ ಸಂಬಂಧಿಸಿದಂತೆ ಕರ್ನಾಟಕ ಸರಕಾರದ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಅವರ ನೇತೃತ್ವದಲ್ಲಿ ಆಯೋಗವನ್ನು ರಚಿಸಿತ್ತು. ಆಯೋಗವು ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.
ಕಾಲ್ತುಳಿತಕ್ಕೆ ಆರ್‌ಸಿಬಿ, ಅದರ ಕಾರ್ಯಕ್ರಮದ ಪಾಲುದಾರರಾದ ಡಿಎನ್‌ಎ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಯ ನಿರ್ಲಕ್ಷ್ಯವೇ ಕಾರಣ ಎಂದು ಹೇಳಿದೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಪಂದ್ಯಕ್ಕೆ ನಿರ್ಬಂಧ
ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ಪ್ರಕರಣ ಸಂಭವಿಸಿದ ಬೆನ್ನಲ್ಲೇ ದೊಡ್ಡ ಕಾರ್ಯಕ್ರಮ ಆಯೋಜನೆಗೆ ಅಸುರಕ್ಷಿತ ಎಂದು ಘೋಷಿಸಲಾಗಿತ್ತು. ಈ ಕುರಿತು ರಾಜ್ಯ ಸಚಿವ ಸಂಪುಟ ಕೂಡ ಅನುಮೋದಿಸಿದೆ.
ಇದೇ ಕಾರಣದಿಂದಲೇ ಮುಂದಿನ ವರ್ಷದ ಐಪಿಎಲ್ ಪಂದ್ಯಗಳು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯೋದು ಅನುಮಾನ. ಹೀಗಾಗಿ ಆರ್‌ಸಿಬಿ ತಂಡ ತವರು ಕ್ರೀಡಾಂಗಣವಾಗಿ ಇತರ ಸ್ಟೇಡಿಯಂ ಆಯ್ಕೆ ಮಾಡುವ ಸಾಧ್ಯತೆಯಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಾವಳಿಗಳು ನಡೆಯದೇ ಇದ್ರೆ, ಆರ್‌ಸಿಬಿ ಎಲ್ಲಾ ಪಂದ್ಯಗಳನ್ನು ಹೊರ ರಾಜ್ಯಗಳಲ್ಲಿಯೇ ಆಡಬೇಕಾಗುತ್ತದೆ. ಹೀಗಾದ್ರೆ ಬೆಂಗಳೂರು ಅಭಿಮಾನಿಗಳಿಗೆ ತೀವ್ರ ನಿರಾಸೆ ಆಗೋದು ಖಚಿತ.
Also Read : ಇಂಡೋನೇಷ್ಯಾ ಅಂತರಾಷ್ಟ್ರೀಯ ಟಿ20 ತಂಡ : ಕುಂದಾಪುರದ ಸಂಪತ್ ಖಾರ್ವಿ
ವಿರಾಟ್ ಬೆಂಗಳೂರಲ್ಲಿ ಆಡೋದಿಲ್ಲ..!
ಕಾಲ್ತುಳಿತ ಪ್ರಕರಣದ ಹಿನ್ನೆಲೆಯಲ್ಲಿ ಐಪಿಎಲ್ 2026 ರಲ್ಲಿ ಆರ್‌ಸಿಬಿ ತನ್ನ ತವರು ಪಂದ್ಯಗಳನ್ನು ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಲು ಸಾಧ್ಯವಾಗುವುದಿಲ್ಲ.
ವಿರಾಟ್ ಕೊಹ್ಲಿ ಸೇರಿದಂತೆ ಆರ್‌ಸಿಬಿ ಆಟಗಾರರು ಬೆಂಗಳೂರಿನ ಅಭಿಮಾನಿಗಳ ಮುಂದೆ ಆಡುವ ಅವಕಾಶವನ್ನು ಕಳೆದುಕೊಳ್ಳಲಿದ್ದಾರೆ.
ಆಯೋಗದ ವರದಿಯು ಆರ್‌ಸಿಬಿ, ಡಿಎನ್‌ಎ ಎಂಟರ್‌ಟೈನ್‌ಮೆಂಟ್ ಮತ್ತು ಕೆಎಸ್‌ಸಿಎ ಮೇಲೆ ನಿರ್ಲಕ್ಷ್ಯದ ಆರೋಪ ಹೊರಿಸಿದೆ.
ಕರ್ನಾಟಕ ಸರ್ಕಾರವು ಈಗಾಗಲೇ ಆರ್‌ಸಿಬಿ ಮತ್ತು ಕೆಎಸ್‌ಸಿಎ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದೆ. ಹಲವಾರು ಪೊಲೀಸ್ ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆಗಳನ್ನೂ ಪ್ರಾರಂಭಿಸಲಾಗಿದೆ.
ಆರ್‌ಸಿಬಿಗೆ ಯಾವುದು ತವರು ಮೈದಾನ ?
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪರ್ಯಾಯವಾಗಿ ತನ್ನ ತವರು ಮೈದಾನ ಯಾವುದು ಅನ್ನೋದನ್ನು ನಿರ್ಧಾರ ಮಾಡಬೇಕಾಗಿದೆ. ಆರ್‌ಸಿಬಿ 2026 ರಲ್ಲಿ ತನ್ನ ತವರು ಪಂದ್ಯಗಳಿಗಾಗಿ ಕೆಲವು ಸ್ಥಳಗಳನ್ನು ಪ್ಲ್ಯಾನ್ ಮಾಡಿಕೊಂಡಿದೆ.
ಎಂಸಿಎ ಸ್ಟೇಡಿಯಂ, ಪುಣೆ: ಐಪಿಎಲ್ ಪಂದ್ಯಗಳನ್ನು ಆಯೋಜಿಸಿದ ಉತ್ತಮ ಸೌಲಭ್ಯಗಳನ್ನು ಹೊಂದಿರುವ ಕ್ರೀಡಾಂಗಣ.
Also Read : 58 ವರ್ಷದ ಬಳಿಕ ಎಡ್ಜ್‌ಬಾಸ್ಟನನ್ ನಲ್ಲಿ ಗೆದ್ದು ದಾಖಲೆ ಬರೆದ ಶುಭಮನ್ ಗಿಲ್ ಪಡೆ
ಎಚ್‌ಪಿಸಿಎ ಸ್ಟೇಡಿಯಂ, ಧರ್ಮಶಾಲಾ: ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಹೊಸ ಕ್ರೀಡಾಂಗಣ, ಇದನ್ನು ಸಾಮಾನ್ಯವಾಗಿ ತಂಡಗಳು ಎರಡನೇ ತವರು ಸ್ಥಳವಾಗಿ ಬಳಸುತ್ತವೆ.
ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ, ನಾಗ್ಪುರ: ದೊಡ್ಡ ಸಾಮರ್ಥ್ಯದೊಂದಿಗೆ ಐಪಿಎಲ್ ಪಂದ್ಯಗಳನ್ನು ಆಯೋಜಿಸಲು ಸಮರ್ಥವಾದ ಮತ್ತೊಂದು ಕ್ರೀಡಾಂಗಣ.
ಈ ಬೆಳವಣಿಗೆ ಆರ್‌ಸಿಬಿ ಅಭಿಮಾನಿಗಳಿಗೆ ದೊಡ್ಡ ನಿರಾಸೆಯನ್ನುಂಟು ಮಾಡಿದೆ. ಮುಂದಿನ ದಿನಗಳಲ್ಲಿ ಬಿಸಿಸಿಐ ಮತ್ತು ಆರ್‌ಸಿಬಿ ಆಡಳಿತ ಮಂಡಳಿ ಈ ಬಗ್ಗೆ ಯಾವ ನಿರ್ಧಾರಗಳನ್ನು ಕೈಗೊಳ್ಳಲಿವೆ ಎಂಬುದನ್ನು ಕಾದು ನೋಡಬೇಕು.
IPL 2026 Virat Kohli will not play in Bengaluru Kannada News



