ಗೃಹಲಕ್ಷ್ಮೀ ಫಲಾನುಭವಿಗಳಿಗೆ ಗುಡ್ ನ್ಯೂಸ್ : 4000 ರೂ. ಖಾತೆಗೆ ಜಮೆ

Gruhalakshmi : ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಗುಡ್ನ್ಯೂಸ್ ಸಿಕ್ಕಿದೆ. ಬಾಕಿ ಇರುವ ಎರಡು ಕಂತಿನ ಹಣ ಗೃಹಿಣಿಯರ ಖಾತೆಗೆ ಒಟ್ಟಿಗೆ ಜಮೆ ಆಗಿದೆ. ಹಬ್ಬದ ಖುಷಿಯಲ್ಲಿದ್ದ ಮಹಿಳೆಯರಿಗೆ ಇದೀಗ ಡಬ್ಬಲ್ ಧಮಾಕಾ ಸಿಕ್ಕಿದೆ.
ಎರಡು ತಿಂಗಳ ಗೃಹಲಕ್ಷ್ಮೀ ಹಣ ಒಟ್ಟಿಗೆ ಜಮೆ ..!
ಗೃಹಲಕ್ಷ್ಮೀ ಫಲಾನುಭವಿಗಳಿಗೆ ಕಳೆದ ಜುಲೈ ಮತ್ತು ಅಗಸ್ಟ್ ತಿಂಗಳಿನ ಹಣ ಜಮೆ ಆಗೋದಕ್ಕೆ ಬಾಕಿ ಇದೆ. ಹೀಗಾಗಿ ಎರಡೂ ಹಣವನ್ನು ಇದೀಗ ಒಟ್ಟಿಗೆ ಜಮೆ ಆಗಲಿದೆ. ಈ ಬಾರಿ ಗೃಹಿಣಿಯರು 4000 ರೂಪಾಯಿ ಹಣವನ್ನು ಪಡೆಯಲಿದ್ದಾರೆ.
ಹಣ ನಿಮ್ಮ ಖಾತೆಗೆ ಜಮಾ ಆಗಿದೆಯೇ ಎಂದು ಪರಿಶೀಲಿಸಲು, ನೀವು ನಿಮ್ಮ ಬ್ಯಾಂಕ್ ಖಾತೆ ಅಥವಾ DBT ಕರ್ನಾಟಕ ಆ್ಯಪ್ ಮೂಲಕ ಪರಿಶೀಲಿಸಬಹುದು.
ಅಲ್ಲದೇ ಸೇವಾ ಸಿಂಧು ಪೋರ್ಟಲ್ ಮೂಲಕವೂ ನೀವು ಖಾತೆಗೆ ಹಣ ಜಮೆ ಆಗಿರುವ ಮಾಹಿತಿಯನ್ನು ಪಡೆಯಬಹುದಾಗಿದೆ. ಒಂದೊಮ್ಮೆ ಹಣ ಜಮೆ ಆಗದೇ ಇದ್ದಲ್ಲಿ ಟೋಲ್ಪ್ರೀ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.
ಗೃಹಲಕ್ಷ್ಮೀ ಯೋಜನೆಯ ಹಣ ನಿಮ್ಮ ಖಾತೆಗೆ ಜಮಾ ಆಗಿದೆಯೇ ಎಂದು ಪರಿಶೀಲಿಸಿ
- ಮೊಬೈಲ್ ಬ್ಯಾಂಕಿಂಗ್ ಅಥವಾ SMS
ನಿಮ್ಮ ಬ್ಯಾಂಕ್ ಖಾತೆಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿದ್ದರೆ, ಹಣ ಜಮಾ ಆದ ತಕ್ಷಣವೇ ನಿಮಗೆ SMS ಸಂದೇಶ ಬರುತ್ತದೆ. ಹಣ ಜಮೆಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ನಿಮ್ಮ ಬ್ಯಾಂಕ್ಗೆ ಅಥವಾ ATMಗೆ ಭೇಟಿ ನೀಡಿ - ಸೇವಾ ಸಿಂಧು ಪೋರ್ಟಲ್
ಸೇವಾ ಸಿಂಧು ಪೋರ್ಟಲ್ನಲ್ಲಿ ನಿಮ್ಮ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸುವ ಮೂಲಕವೂ ಹಣ ಜಮೆಯಾಗಿದೆಯೇ ಎಂದು ತಿಳಿಯಬಹುದು.
ಸೇವಾ ಸಿಂಧು ವೆಬ್ಸೈಟ್ಗೆ ಭೇಟಿ ನೀಡಿ.
‘ನಿಮ್ಮ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಿ’ ಆಯ್ಕೆ ಮಾಡಿ.
ಅಲ್ಲಿ ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ಅಥವಾ ಅರ್ಜಿಯ ಸಂಖ್ಯೆಯನ್ನು ನಮೂದಿಸಿ.
ಆಗ ನಿಮ್ಮ ಅರ್ಜಿಯ ಸ್ಥಿತಿ ಮತ್ತು ಹಣ ಜಮೆಯಾದ ದಿನಾಂಕದ ಮಾಹಿತಿ ದೊರೆಯುತ್ತದೆ.
ಇದನ್ನೂ ಓದಿ : ಕರ್ನಾಟಕದ 5 ಲಕ್ಷ ರೈತರಿಗೆ ಸಿಗಲ್ಲ ಪಿಎಂ ಕಿಸಾನ್ ಯೋಜನೆಯ ಹಣ ..!
- DBT ಕರ್ನಾಟಕ ಆ್ಯಪ್
DBT ಕರ್ನಾಟಕ ಮೊಬೈಲ್ ಅಪ್ಲಿಕೇಶನ್ನಲ್ಲಿಯೂ ಹಣ ಜಮೆಯಾಗಿರುವ ಕುರಿತು ಪರಿಶೀಲಿಸಬಹುದು. ಇದು ನೇರ ನಗದು ವರ್ಗಾವಣೆ (Direct Benefit Transfer) ಯೋಜನೆಯ ಅಡಿಯಲ್ಲಿ ಮಾಹಿತಿ ನೀಡುತ್ತದೆ. - SMS ಸೇವೆ
ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು (RC number) 8147500500 ಅಥವಾ 8277000555 ಸಂಖ್ಯೆಗೆ SMS ಕಳುಹಿಸಿ, ನಿಮ್ಮ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಮತ್ತು ಹಣ ಜಮೆಯ ಸ್ಥಿತಿಯನ್ನು ಪರಿಶೀಲಿಸಬಹುದು.
ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದೆಯೇ ಮತ್ತು ನಿಮ್ಮ ಬ್ಯಾಂಕ್ ಖಾತೆ ಸಕ್ರಿಯವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯ.
ಇದನ್ನೂ ಓದಿ : ವಾರ್ಷಿಕ 20 ರೂಪಾಯಿ ಕಟ್ಟಿದ್ರೆ ಸಿಗುತ್ತೆ 2 ಲಕ್ಷ ರೂಪಾಯಿ
Good news for Gruhalakshmi beneficiaries Rs. 4000 deposited in the account Kannada News



