2 ರೂಪದಲ್ಲಿ ಒಂದೇ ಬಾರಿ ದರ್ಶನ ನೀಡುತ್ತಾನೆ ಭಗವಂತ – ವರ್ಗಾವಣೆ ಪ್ರಾಬ್ಮೆಮ್ ಇದ್ರೆ ತಕ್ಷಣ ಪರಿಹಾರ

Jaganmohini Kesava Gopala Swamy Temple Ryali : ಮೋಹಿನಿ ಮಹಾವಿಷ್ಣುವಿನ ಸುಂದರ ಅವತಾರ ಮೋಹಕವಾದ ನಡಿಗೆ ಸುಂದರವಾದ ವದನ ಎಲ್ಲರನ್ನೂ ಆಕರ್ಷಿಸುವ ದೇಹ ಪ್ರಕೃತಿ. ಹೀಗೆ ಅಂದು ದಾನವರನ್ನು ತಡೆದು ನಿಲ್ಲಿಸಿತು ಇದು ವಿಷ್ಣುವಿನ ಪೂರ್ಣ ಅವತಾರವಲ್ಲದೇ ಹೋದರೂ ಪುರಾಣದಲ್ಲಿ ಈ ಅವತಾರಕ್ಕೆ ಅದರದೇ ಆದ ಮಹತ್ವವಿದೆ.
ಇನ್ನು ಈ ವಿಷ್ಣುವಿನ ಅವತಾರದ ಕುರಿತು ಸಾಕ್ಷಿ ಎಂಬಂತೆ ಈ ದೇವಾಲಯವಿದೆ. ಇಲ್ಲಿ ವಿಷ್ಣು ಗಂಡು ಹೆಣ್ಣು ಎರಡು ರೂಪದಲ್ಲಿ ಭಕ್ತರಿಗೆ ದರ್ಶನ ಕೊಡುತ್ತಾನೆ. ಹಾಗೆಂದ ಮಾತ್ರಕ್ಕೆ ಇಲ್ಲಿ ವಿಷ್ಣುವಿನ ಎರಡು ವಿಗ್ರಹಗಳಿವೆ ಅಂತ ನೀವು ಅಂದುಕೊಂಡ್ರಾ? ಖಂಡಿತಾ ಇಲ್ಲಿ ಪರಮಾತ್ಮ ವಿಷ್ಟು ಹಾಗೂ ಮೋಹಿನಿಯಾಗಿ ಒಂದೇ ವಿಗ್ರಹದಲ್ಲಿ ಕಾಣಿಸಿಕೊಂಡಿದ್ದಾನೆ.
. ಹೌದು ಇಲ್ಲಿ ಮಹಾವಿಷ್ಣು ಹಾಗೂ ಮೋಹಿನಿಯ ರೂಪ ಎರಡು ಒಂದೇ ವಿಗ್ರಹದಲ್ಲಿ ನೆಲೆಯಾಗಿರುವ ಕ್ಷೇತ್ರವಿದು. ಈ ದೇವಾಲಯದಲ್ಲಿನ ಮೂರ್ತಿಯ ಮುಂಭಾಗವನ್ನು ಗಂಡು ದೇವರಾಗಿ ವಿಗ್ರಹದ ಹಿಂಭಾಗದಲ್ಲಿ ಸುಂದರ ಯುವತಿ ನಿಂತಂತೆ ಕಾಣುತ್ತದೆ. ಹೀಗಾಗಿ ಇದನ್ನು ಜಗನ್ಮೋಹಿನಿ ಕೇಶವಸ್ವಾಮಿ ದೇವಾಲಯ ಅಂತ ಕರೆಯುತ್ತಾರೆ.
ಇಲ್ಲಿ ಮಹಾವಿಷ್ಣು ಕೇಶವ ಹಾಗೂ ಮೋಹಿನಿ ಆಗಿ ದರ್ಶನ ನೀಡುತ್ತಾನೆ. ಈ ವಿಗ್ರಹವು ಐದು ಅಡಿ ಎತ್ತರವಿದು ಏಕಶಿಲಾ ಸಾಲಿಗ್ರಾಮ ವಿಗ್ರಹವಾಗಿದೆ. ಮಹಾವಿಷ್ಣು ಎದುರು ಭಾಗದಲ್ಲಿ ಶಂಕ ಚಕ್ರ, ಅಭಯ ಮುದ್ರಿಯಲ್ಲಿ ದರ್ಶನ ನೀಡಿದರೆ ಹಿಂಭಾಗದಲ್ಲಿ ಬೆನ್ನಿನ ಭಾಗದಿಂದ ಕಾಣುವ ಮೋಹಿನಿಯ ತೋಳು ಉದ್ದ ಜಡೆ ಸುಂದರವಾದ ಮೈಕಟ್ಟು ನಮಗೆ ಗೋಚರಿಸುತ್ತೆ.
ಈ ವಿಗ್ರಹವು ಪ್ರಭಾವಳಿಯನ್ನು ಹೊಂದಿದ್ದು, ಪ್ರಭಾವಳಿಯಲ್ಲಿ ಶ್ರೀದೇವಿ ಭೂದೇವಿ ಗರುಡ ಕೃಷ್ಣ ಹೀಗೆ ಹಲವು ಪುಟ್ಟ ಕಲಾಕೃತಿಯನ್ನು ಕೆತ್ತಲಾಗಿದೆ. ಇಷ್ಟೇಲ್ಲಾ ಕಾಲಾಕಥರಿಗಳಿದ್ದರೂ ಇದು ಯಾವುದೇ ಮಾನವ ನಿರ್ಮಿತ ಅಲ್ಲ . ಬದಲಾಗಿ ಸ್ವಯಂಭೂ ವಗ್ರಹ ಅಂತ ಇಲ್ಲಿ ನಂಬಲಾಗುತ್ತೆ.
ಇನ್ನು ಈ ದೇವಾಲಯದ ಆಚಾರ ವಿಚಾರಕ್ಕೆ ಬರೋದಾದ್ರೆ ., ವಿಗ್ರಹದ ಎರಡು ಭಾಗಕ್ಕೆ ಪೂಜೆ ಮಾಡಲಾಗುತ್ತದೆ ಅನ್ನೋದೆ ವಿಶೇಷ. ಮೊದಲು ಮಹಾವಿಷ್ಣುವಿಗೆ ಅಂದರೆ ಎದುರಿನ ಭಾಗಕ್ಕೆ ಪೂಜೆ ನೈವೇದ್ಯ ಸಲ್ಲಿಸಿ,ಮತ್ತೆ ಹಿಂದಿನ ಮೋಹಿನಿಯ ಭಾಗಕ್ಕೆ ಪೂಜೆ ನೈವೇದ್ಯವನ್ನ ನೆರವೇರಿಸಲಾಗುತ್ತದೆ..
ಈ ಕುರಿತಂತೆ ವಿಸ್ಮಯವಾದ ಕಥೆ ಇಲ್ಲಿನ ಸ್ಥಳ ಪುರಾಣದಲ್ಲಿದೆ . ಎಲ್ಲರಿಘೂ ಗೊತ್ತಿರುವಂತೆ ಮೋಹಿನಿ ಅವತಾರ ಸಮುದ್ರ ಮಥನ ಕಾಲಕ್ಕೆ ತಳುಕು ಹಾಕಿಕೊಂಡಿದೆ. ಅದೇ ವೇಳೆ ಸಮುದ್ರ ಮಥನದಲ್ಲಿ ವಿಷವನ್ನು ಕುಡಿದಿದ್ದ. ವಿಷ ಗಂಟಲಲ್ಲಿ ಇದ್ದಕಾರಣ ಶಿವನಿಗೆ ದಣಿವಾಗಿ ಕೈಲಾಸಕ್ಕೆ ತೆರಳಿದನಂತೆ.
ಹೀಗಾಗಿ ಮೋಹಿನಿ ಅವತಾರವನ್ನು ಶಂಕರನು ನೋಡಲು ಸಾದ್ಯವಾಗಿರಲಿಲ್ಲವಂತೆ . ಆದರೆ ಮೋಹಿನಿಯ ಸೌಂದರ್ಯದ ಕುರಿತು ದೇವಾನುದೇವತೆಗಳೆಲ್ಲ ಮಾತನಾಡುವುದನ್ನು ಕೇಳಿ ಶಿವನಿಗೆ ವಿಷ್ಣುವಿನ ಅವತಾರವನ್ನು ನೋಡಬೇಕೆಂಬ ಬಯಕೆ ಆಯಿತಂತೆ.
ಆಗ ಶಿವ ಪರಮಾತ್ಮನು ವಿಷ್ಣುವಿನಲ್ಲಿ ಮೋಹಿನಿ ಅವತಾರವನ್ನು ಧರಿಸುವಂತೆ ಕೇಳಿದನಂತೆ. ಯಾವಾಗ ವಿಷ್ಣು ಮೋಹಿನಿ ಅವತಾರವಾಗಿ ನಡೆಯಲು ಪ್ರಾರಂಭಿಸಿದನೋ, ಶಿವನು ಮೋಹಿತನಾಗಿ ಮೋಹಿನಿಯನ್ನೇ ಹಿಂಬಾಲಿಸಿದನಂತೆ.
ರಾಲಿ ಹೆಸರು ಬಂದಿದ್ಯಾಕೆ ?
ಈ ಜಾಗಕ್ಕೆ ಬಂದಾಗ ಮೋಹಿನಿಯ ತಲೆಯಿಂದ ಹೂವೊಂದು ಬಿತ್ತಂತೆ ಅದನ್ನು ಆಗ್ರಹಣಿಸಿದ ಶಿವನಿಗೆ ಮೋಹಿನಿಯನಿಂದ ಪರವಶನಾದೆ ಅನ್ನುವ ಅರಿವಾಯಿತು ಎನ್ನುತ್ತೆ ಇಲ್ಲಿಯ ಸ್ಥಳ ಪುರಾಣ.
ಅಂದಿನಿಂದ ಈ ಜಾಗಕ್ಕೆ ರಾಲಿ ಎಂದು ಕರೆಯುತ್ತಾರೆ.
ಇದನ್ನೂ ಓದಿ : ಇದು ಕರ್ನಾಟಕದ ಮೊದಲ ಶ್ರೀರಾಮ ದೇವಾಲಯ : ಇಲ್ಲಿ ಸೀತಾಪತಿಗೆ ನಡೆಯುತ್ತೆ ಕನ್ನಡದಲ್ಲೇ ಪೂಜೆ
ಇಲ್ಲಿ ರಾಲಿ ಎಂದರೆ ತೆಲುಗು ಭಾಷೆಯಲ್ಲ ಬೀಳುವುದು ಎಂದರ್ಥ ಇದೇ ಜಾಗದಲ್ಲಿ ಶಿವನ ದೇವಾಲಯವು ಇದ್ದು ಇದನ್ನು ಬ್ರಹ್ಮ ದೇವರು ನಿರ್ಮಿಸಿದರು ಎನ್ನಲಾಗುತ್ತದೆ. ಇನ್ನು ಇಲ್ಲಿನ ದೇವಾಲಯ ದಲ್ಲಿ ವಿಗ್ರಹ ಪ್ರತಿಷ್ಠಾಪಿಸಿದ ಕುರಿತಂತೆ ಕೂಡ ಒಂದು ಕಥೆ ಇದೆ.
11ನೇ ಶತಮಾನದಲ್ಲಿ ಈ ಜಾಗವು ದಟ್ಟ ಅರಣ್ಯವಾಗಿತ್ತಂತೆ. ಇದನ್ನು ಚೋಳರು ಆಳ್ವಿಕೆ ನಡೆಸುತ್ತಿದ್ದರಂತೆ. ಒಂದು ಬಾರಿ ಚೋಳ ಅರಸು ರಾಜಾ ವಿಕ್ರಮನು ಮರದ ಬಳಿ ಬಂದು ವಿಶ್ರಾಂತಿ ಪಡೆಯುತ್ತಿದ್ದನಂತೆ.
ಆಗ ಕನಸಿನಲ್ಲಿ ಬಂದ ವಿಷ್ಣು ಪರಮಾತ್ಮ ಇಲ್ಲಿ ನೀನು ಮರದ ರಥವನ್ನು ಓಡಿಸಬೇಕು ಅದು ಎಲ್ಲಿ ಬೀಳುತ್ತದೆ. ಅಲ್ಲಿಯ ಭೂಮಿಯ ಆಡಿಯಲ್ಲಿ ತನ್ನ ವಿಗ್ರಹವಿದೆ. ಅದನ್ನು ಅಲ್ಲೇ ಪ್ರತಿಷ್ಠಾಪಿಸಬೇಕು ಎಂದು ಹೇಳುತ್ತಾರೆ.
ವಿಷ್ಣು ಪಾದದಿಂದ ಹರಿಯುತ್ತಾಳೆ ಗಂಗೆ
ಅದರಂತೆ ರಾಜ ವಿಕ್ರಮನಿಗೆ ದೊರೆತ ವಿಗ್ರಹವನ್ನು ಅಲ್ಲೇ ಪ್ರತಿಷ್ಠಾಪಿಸಿದ ಅಂತ ನಂಬಲಾಗುತ್ತದೆ.. ಇನ್ನು ದೇವಾಲಯದಲ್ಲಿ ವಿಷ್ಣುವಿನ ಪಾದದಿಂದ ನೀರು ಹರಿಯುತ್ತದೆ. ಇದನ್ನು ಗಂಗೆ ಅಂತ ನಂಬಲಾಗುತ್ತದೆ.
ಇಲ್ಲಿ ಬರುವ ಭಕ್ತರಿಗೆ ಇದನ್ನೇ ಪ್ರಸಾದದ ರೂಪದಲ್ಲಿ ನೀಡಲಾಗುತ್ತದೆ. ಇದೆಲ್ಲಾ ಐತಿಹಾಸಿಕ ನಂಬಿಕೆಯಾದ್ರೆ. ಈಗಿನ ಕಾಲಕ್ಕೆ ಹೊಂದಿಕೆಯಾಗುವ ವಿಚಾರವೊಂದು ಕೂಡಾ ಇದಲ್ಲಿದೆ. ಹೌದು ಈ ದೇವಾಲಯವನ್ನು ವರ್ಗಾವಣೆ ದೇವಾಲಯ ಅಂತಾನೂ ಕರೆಯಲಾಗುತ್ತೆ.
ಇದನ್ನೂ ಓದಿ : ಕೋಟ ಅಮೃತೇಶ್ವರಿ ದೇವಸ್ಥಾನ : ಮಕ್ಕಳಿಲ್ಲದವರ ಮಡಿಲು ತುಂಬುತ್ತಾಳೆ ಹಲವು ಮಕ್ಕಳ ತಾಯಿ
ಇಲ್ಲಿ ಯಾರಾದ್ರೂ ವರ್ಗಾವಣೆ ವಿಚಾರವಾಗಿ ಬೇಡಿಕೊಂಡರೆ ಈ ಅದು ತಪ್ಪದೇ ನಡೆಯುತ್ತೆ ಅನ್ನೋ ನಂಬಿಕೆ ಭಕ್ತರಲ್ಲಿದೆ. ಇಷ್ಟೇಲ್ಲಾ ವಿಶೇಷವಿರೋ ದೇವಾಲಯವಿರೋದು ಎಲ್ಲಿ ಅಂತ ಹೇಳಿದ್ರೆ ಅದು ಆಂದ್ರ ಪ್ರದೇಶದ ಉತ್ತರ ಗೋದಾವರಿಯ ರಾಲಿ ಎಂಬ ಊರಿನಲ್ಲಿ.
ಗೋದಾವರಿ ನದಿಯ ಉಪನದಿಗಳಾದ ವಶಿಷ್ಠ ಹಾಗೂ ಗೌತಮಿ ನದಿಗಳ ಮಧ್ಯದಲ್ಲಿ ಇದು ಸ್ಥಿತವಾಗಿದೆ. ಇದು ರಾಜಮಂಡ್ರಿಯಿಂದ ೪೦ ಕಿಲೋ ಮೀಟರ್ ದೂರ ಹಾಗೂ ಕಾಕಿನಾಡಿನಿಂದ ೭೦ ಕಿಲೋಮೀಟರ್ ದೂರದಲ್ಲಿದೆ
Sri Jaganmohini Kesava and Gopala Swamy Temple Ryali



