MS Dhoni : ಐಪಿಎಲ್ 2027 : ಚೆನ್ನೈ ತಂಡಕ್ಕೆ ಧೋನಿ ಕೋಚ್‌..! ಸ್ಟಿಫನ್ ಫ್ಲೆಮಿಂಗ್ ಕೈಬಿಟ್ಟ ಸಿಎಸ್‌ಕೆ

csk new coach ipl 2027 stephen fleming steps down : ಇಂಡಿಯನ್‌ ಪ್ರೀಮಿಯರ್‌ ಲೀಗ್‌ 2027ಕ್ಕೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಹೊಸ ಕೋಚ್‌ ಜೊತೆಗೆ ಕಣಕ್ಕೆ ಇಳಿಯುವುದು ಖಚಿತವಾಗಿದೆ ಬರೋಬ್ಬರಿ 18 ವರ್ಷಗಳ ಬಳಿಕ ತಂಡ ಕೋಚ್‌ ಆಗಿದ್ದ ನ್ಯೂಜಿಲೆಂಡ್‌ ಲೆಜೆಂಡರಿ ಆಟಗಾರ ಸ್ಟೀಫನ್‌ ಪ್ಲೆಮಿಂಗ್‌ ಅವರಿಗೆ ಕೋಕ್‌ ನೀಡಿದ್ದು, ಪ್ಲೆಮಿಂಗ್‌ ಸ್ಥಾನದಲ್ಲಿ ಎಂಎಸ್‌ ಧೋನಿ ಕಾಣಿಸಿಕೊಳ್ಳುವುದು ಖಚಿತವಾಗಿದೆ.

MS Dhoni :  ಐಪಿಎಲ್ 2027 ಕ್ಕಿಂತ ಮೊದಲು ಸಿಎಸ್‌ಕೆ ಹೊಸ ಕೋಚ್‌ ಹುಡುಕಾಟದಲ್ಲಿದೆ. ಅದ್ರಲ್ಲೂ ಸ್ಟಿಫನ್ ಫ್ಲೆಮಿಂಗ್ ಉತ್ತರಾಧಿಕಾರಿಯಾಗಿ ಎಂಎಸ್‌ ಧೋನಿ ಮುಂದುವರಿಯಲಿದ್ದಾರೆ ಅನ್ನೋದು ಬಹುತೇಕ ಖಚಿತವಾಗಿದೆ. ಧೋನಿ ಮುಂದಿನ ಐಪಿಎಲ್‌ನಲ್ಲಿ ಆಟಗಾರನಾಗಿ ಇರ್ತಾರಾ ಅಥವಾ ಕೋಚ್‌ ಆಗಿ ಕಾಣಿಸಿಕೊಳ್ತಾರಾ ಅನ್ನೋದು ಕುತೂಹಲ ಮೂಡಿಸಿದೆ.

ಇಂಡಿಯನ್‌ ಪ್ರೀಮಿಯರ್‌ ಲೀಗ್‌ 2027ಕ್ಕೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಹೊಸ ಕೋಚ್‌ ಜೊತೆಗೆ ಕಣಕ್ಕೆ ಇಳಿಯುವುದು ಖಚಿತವಾಗಿದೆ ಬರೋಬ್ಬರಿ 18 ವರ್ಷಗಳ ಬಳಿಕ ತಂಡ ಕೋಚ್‌ ಆಗಿದ್ದ ನ್ಯೂಜಿಲೆಂಡ್‌ ಲೆಜೆಂಡರಿ ಆಟಗಾರ ಸ್ಟೀಫನ್‌ ಪ್ಲೆಮಿಂಗ್‌ ಅವರಿಗೆ ಕೋಕ್‌ ನೀಡಿದ್ದು, ಪ್ಲೆಮಿಂಗ್‌ ಸ್ಥಾನದಲ್ಲಿ ಎಂಎಸ್‌ ಧೋನಿ ಕಾಣಿಸಿಕೊಳ್ಳುವುದು ಖಚಿತವಾಗಿದೆ.

ಐದು ಬಾರಿಯ ಐಪಿಎಲ್‌ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಲ್ಲಿ ಕಳೆದ 18 ವರ್ಷಗಳಿಂದಲೂ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದು ಸ್ಟೀಫನ್‌ ಪ್ಲೆಮಿಂಗ್.‌ ಆದರೆ ಈ ಬಾರಿ ಅವರನ್ನು ಕೋಚ್‌ ಹುದ್ದೆಯಿಂದ ವಜಾ ಮಾಡಲಾಗಿತ್ತು. ಸ್ಟಿಫನ್‌ ಪ್ಲೆಮಿಂಗ್‌ ನಂತರದಲ್ಲಿ ಯಾರು ಸಿಎಸ್‌ಕೆ ಕೋಚ್‌ ಆಗ್ತಾರೆ ಅನ್ನೋದು ಕುತೂಹಲ ಮೂಡಿಸಿದೆ.

ಕೋಚ್‌ ಆಗ್ತಾರಾ ಎಂಎಸ್‌ ಧೋನಿ ..?

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಲ್ಲಿ ಐಪಿಎಲ್‌ ಆರಂಭದಿಂದಲೂ ನಾಯಕನಾಗಿ, ತಂಡವನ್ನು ಮುನ್ನೆಡೆಸಿದ್ದು ಮಹೇಂದ್ರ ಸಿಂಗ್‌ ಧೋನಿ. ಭಾರತ ಕ್ರಿಕೆಟ್‌ ತಂಡ ಮಾತ್ರವಲ್ಲದೇ ಸಿಎಸ್‌ಕೆ ಎರಡನ್ನೂ ನಾಯಕನಾಗಿ ಯಶಸ್ಸು ಕಂಡಿದ್ದಾರೆ. ಧೋನಿ ನಾಯಕತ್ವದಲ್ಲಿಯೇ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಐದು ಬಾರಿ ಚಾಂಪಿಯನ್ಸ್‌ ಮಾಡುವಲ್ಲಿಯೂ ಮಹತ್ವದ ಹೆಜ್ಜೆ ಇಟ್ಟಿದ್ದಾರೆ.

ಆದರೆ ಕಳೆದೆರಡು ಐಪಿಎಲ್‌ ಋತುವಿನಲ್ಲಿ ಮಹೇಂದ್ರ ಸಿಂಗ್‌ ಧೋನಿ ತಂಡದ ಆಟಗಾರನಾಗಿ ನ್ಯಾಯ ಒದಗಿಸೋದಕ್ಕೆ ಸಾಧ್ಯವಾಗಿಲ್ಲ. 2027ರ ಐಪಿಎಲ್‌ನಲ್ಲಿ ಮಹೇಂದ್ರ ಸಿಂಗ್‌ ಧೋನಿ ಆಟಗಾರನಾಗಿ ಕಣಕ್ಕೆ ಇಳಿಯೋದು ದೌಟ್.‌ ಇದಕ್ಕೆ ಕಾರಣವಾಗಿರೋದು ಎಂಎಸ್‌ ಧೋನಿ ಅವರಿಗೆ ಗಾಯದ ಸಮಸ್ಯೆ.

ಐಪಿಎಲ್‌ 2025ರಲ್ಲಿ ಮಹೇಂದ್ರ ಸಿಂಗ್‌ ಧೋನಿ ಅವರು ಕೆಲವೇ ಕೆಲವು ಪಂದ್ಯಗಳನ್ನು ಮಾತ್ರವೇ ಆಡಿದ್ದರು. ಆದರೆ ಐಪಿಎಲ್‌ 2026ರಲ್ಲಿ ಧೋನಿ ಒಂದೇ ಒಂದು ಪಂದ್ಯಗಳನ್ನೂ ಆಡಿಲ್ಲ. ಕಳೆದ ಐಪಿಎಲ್‌ ಅವಧಿಯಲ್ಲಿಯೇ ಧೋನಿ ಕ್ರಿಕೆಟ್‌ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸುತ್ತಾರೆ ಅಂತಾ ಹೇಳಲಾಗ್ತಿತ್ತು. ಆದರೆ ಸಿಎಸ್‌ಕೆ ತಂಡದ ಬ್ರ್ಯಾಂಡ್‌ ವ್ಯಾಲ್ಯೂ ಕಾರಣದಿಂದಲೇ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗ್ತಿದೆ.

ಸಿಎಸ್‌ಕೆ ತಂಡದ ಹೆಡ್‌ ಕೋಚ್‌ ಸ್ಟಿಫನ್‌ ಪ್ಲೆಮಿಂಗ್‌ ಅವರನ್ನು ತಂಡದಿಂದ ಕೈ ಬಿಟ್ಟ ಬೆನ್ನಲ್ಲೇ ಸಿಎಸ್‌ಕೆ ತಂಡ ಎಂಡಿ ವಿಶ್ವನಾಥನ್‌ ಅವರು, ನಮ್ಮ ತಂಡ ಭವಿಷ್ಯದಲ್ಲಿ ಯಾವುದೇ ಹುದ್ದೆಯಲ್ಲಿ ಮಹೇಂದ್ರ ಸಿಂಗ್‌ ಧೋನಿ ಅವರ ಜೊತೆಗೆ ಸಂಬಂಧ ಹೊಂದಲು ಸಂತೋಷ ಪಡುತ್ತದೆ ಎಂದಿದ್ದಾರೆ.

ಹೀಗಾಗಿ ಎಂಎಸ್‌ ಧೋನಿ ಅವರು ಮುಂದಿನ ಐಪಿಎಲ್‌ ಋತುವಿನಿಂದಲೇ ತಂಡದ ಕೋಚ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ ಅನ್ನೋ ಮಾತುಗಳು ಕ್ರಿಕೆಟ್‌ ವಲಯದಲ್ಲಿ ಕೇಳಿಬರುತ್ತಿದೆ. ಆದರೆ ಸಿಎಸ್‌ಕೆ ತಂಡ ಈ ಕುರಿತು ಇದುವರೆಗೂ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ.

ಸ್ಟೀಫನ್ ಫ್ಲೆಮಿಂಗ್ ಅವರನ್ನು ವಜಾಗೊಳಿಸಿದ್ಯಾಕೆ ?

ಇನ್ನು ಸ್ಟೀಫನ್ ಫ್ಲೆಮಿಂಗ್ ಅವರನ್ನು ಸಿಎಸ್‌ಕೆ ತಂಡ ಕೈಬಿಟ್ಟಿರುವ ವಿಚಾರ ಇದೀಗ ಎಲ್ಲೆಡೆಯಲ್ಲಿಯೂ ಬಾರೀ ವೈರಲ್‌ ಆಗಿದೆ. ತಂಡದ ಮೌಲ್ಯಮಾಪನ ನಡೆಯುತ್ತಿದ್ದು, ಈ ಬಾರಿಯ ಐಪಿಎಲ್‌ನಲ್ಲಿ ಸಿಎಸ್‌ಕೆ ತಂಡ ಬಲಿಷ್ಠ ಆಟಗಾರರನ್ನು ಹೊಂದಿದ್ದರೂ ಕೂಡ ಗೆಲುವು ಕಾಣುವುದಕ್ಕೆ ಸಾಧ್ಯವಾಗಿರಲಿಲ್ಲ.

ಫ್ಲೆಮಿಂಗ್ ಐಪಿಎಲ್‌ನಲ್ಲಿ ಅತ್ಯಂತ ದೀರ್ಘ ಅವಧಿಯವರೆಗೆ ತರಬೇತುದಾರಾಗಿ ಇದ್ದವರು. ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಆರಂಭದಿಂದಲೂ ಅವರು ತಂಡದ ಭಾಗವಾಗಿದ್ದರು. ಐದು ಟ್ರೋಫಿ ಮಾತ್ರವಲ್ಲ ಮೂರು ಬಾರಿ ಪ್ಲೇ ಆಪ್‌ ಹಂತಕ್ಕೂ ತಂಡವನ್ನು ಕೊಂಡೊಯ್ಯುವಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ಆದರೆ ನಂತರದಲ್ಲಿ ತಂಡದ ಸತತ ಸೋಲಿನ ಒತ್ತಡದ ಕಾರಣದಿಂದಲೇ ಅವರು ತಂಡದಿಂದ ಹೊರನಡೆದಿದ್ದಾರೆ.

ms dhoni csk new coach ipl 2027 stephen fleming steps down

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »