ಸಾವಿರಾರು ವರ್ಷದಿಂದ ಆರದೇ ಉರಿಯುತ್ತಿದೆ ದೀಪ – ಜ್ವಾಲಾ ದೇವಿಯ ಶಕ್ತಿ ಪೀಠಕ್ಕೆ ಬಂದ್ರೆ ಸಮಸ್ಯೆಗಳೆಲ್ಲಾ ಪರಿಹಾರ

jwala ji Temple Jwalamukhi Himachal Pradesh: ಭಾರತದಲ್ಲಿ ಶಿವನನ್ನು ಎಷ್ಟು ಭಕ್ತಿಯಿಂದ ಆರಾಧಿಸಲಾಗುತ್ತೋ ಅಷ್ಟೇ ಭಕ್ತಿ ಶಕ್ತಿ ಅಥವಾ ಜಗನ್ಮಾತೆ ಮೇಲಿದೆ. ಶಿವನನ್ನು ಭಗವಂತನಾಗಿ ನೋಡಿದ್ರೆ ಜಗನ್ಮಾತೆಯನ್ನು ಜಗಜ್ಜನನಿ ಎಂದು ಆರಾಧಿಸಲಾಗುತ್ತದೆ.

ನಮ್ಮ ಸಂಪ್ರದಾಯದಲ್ಲಿ ಪ್ರಕೃತಿ ಹಾಗೂ ಪುರುಷನ ಕಲ್ಪನೆಯಲ್ಲಿ ಶಿವ ಮತ್ತು ಶಕ್ತಿಯ ಆರಾಧನೆ ನಡೆಯುತ್ತೆ. ಗ್ರಂಥಗಳ ಪ್ರಕಾರ ಸ್ತ್ರಿ ಹಾಗೂ ಪುರುಷ ತತ್ವ ಎರಡು ಇಲ್ಲದೆ ಸೃಷ್ಠಿ ಸಾಧ್ಯವಿಲ್ಲ.
ಇದಕ್ಕೆ ಸಾಕ್ಷಿ ಎಂಬಂತಿದೆ ಜಗಜ್ಜನನಿಯನ್ನು ಆರಾಧಿಸುವ 18 ಶಕ್ತಿ ಪೀಠಗಳು.

ಹೌದು ಜಗನ್ಮಾತೆಯ ಶಕ್ತಿಯ ಕೇಂದ್ರಗಳು ಅಂತಾನೆ ಕರೆಸಿಕೊಳ್ಳುವ ಈ ಪೀಠಗಳನ್ನು ನೋಡೋಕೆ ಅಂತಾನೆ ಸಾವಿರಾರು ಭಕ್ತರು ಬಂದು ಸೇರುತ್ತಾರೆ ಭಾರತದಲ್ಲಿ ಐವತ್ತೊಂದು ಶಕ್ತಿ ಪೀಠಗಳನ್ನು ಆರಾಧಿಸಲಾಗುತ್ತದೆ.

ಅದರಲ್ಲೂ 18 ಶಕ್ತಿಪೀಠಗಳನ್ನು ಮಹಾ ಶಕ್ತಿಪೀಠಗಳೆಂದು ಪರಿಗಣಿಸಲಾಗುತ್ತದೆ. ಈ ಪೀಠಗಳಲ್ಲಿ ಜಗನ್ಮಾತೆಯ ಶಕ್ತಿ ಅಪರಿಮಿತವಾಗಿರುತ್ತೆ ಅನ್ನುವ ನಂಬಿಕೆ ಇದೆ.
ಇಂತಹದೇ ಒಂದು ಶಕ್ತಿ ಪೀಠದ ಕುರಿತು ಇಲ್ಲಿದೆ ಮಾಹಿತಿ.

ಇದು ಶಕ್ತಿಪೀಠಗಳ ಪೈಕಿ ಅತ್ಯಂತ ಮಹತ್ವವಾದಂತಹ ಶಕ್ತಿಪೀಠ ಇಲ್ಲಿ ತಾಯಿ ಜ್ವಾಲೆಯ ರೂಪದಲ್ಲಿ ಭಕ್ತರಿಗೆ ದರ್ಶನ ನೀಡುತ್ತಾಳೆ. ಹೌದು ಹಲವಾರು ಸಾವಿರ ವರ್ಷಗಳಿಂದ ಇಲ್ಲಿ ನಿರಂತರವಾಗಿ ಒಂಬತ್ತು ಜ್ವಾಲೆಗಳು ಉರಿಯುತ್ತಿದೆ ಇದನ್ನು ತಾಯಿಯ ಪವಾಡ ಅಂತ ಭಕ್ತರು ನಂಬಿಕೊಂಡು ಬರುತ್ತಿದ್ದಾರೆ.

ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯಲ್ಲಿ ಸ್ಥಿತವಾಗಿರುವ ಪರ್ವತದ ಸಾಲಿನಲ್ಲಿ ನೆಲೆ ನಿಂತಿದೆ ಈ ದೇವಾಲಯ . ಸುಂದರ ಪ್ರಕೃತಿಯ ನಡುವೆ ನೆಲೆನಿಂತಿರುವ ಈ ಆಲಯವನ್ನು ನೋಡಿದ್ರೆ. ನಿಜಕ್ಕೂ ಜಗನ್ಮಾತೆಯೇ ತಾತು ನೆಲೆಸಲು ಮಾಡಿಕೊಂಡಿರುವ ಕ್ಷೇತ್ರ ಎಂದು ಅನ್ನಿಸದೇ ಇರದು.

ಸಾಮಾನ್ಯವಾಗಿ ಎಣ್ಣೆ ಅಥವಾ ಉರಿಯುವ ಸಾಧನವಿಲ್ಲದೆ ದೀಪವು ಉರಿಯಲು ಸಾಧ್ಯವಿಲ್ಲ. ಆದರೆ ಇಲ್ಲಿ ಶಿಲೆಯ ನಡುವಿನಿಂದ 9 ಜ್ವಾಲೆಗಳು ನಿತ್ಯವೂ ಉರಿಯುತ್ತಿರುತ್ತವೆ. ಇಲ್ಲಿ ದೇವಿಯ ವಿಗ್ರಹದ ಜೊತೆಯಲ್ಲಿ ಈ ಜ್ವಾಲೆಗಳಿಗೂ ನಿತ್ಯ ಪೂಜೆಯನ್ನು ಸಲ್ಲಿಸಿ ಆರಾಧಿಸಲಾಗುತ್ತದೆ.

ಈ ಕುರಿತು ಇಲ್ಲಿನ ಸ್ಥಳ ಪುರಾಣ ಹೇಳುವುದೇನೆಂದರೆ, ಶಿವ ಸತಿ ದಾಕ್ಷಣಿಯ ತಂದೆ ಒಂದು ಬಾರಿ ಯಜ್ಞ ನಡೆಸಲು ಬಯಸಿದನಂತೆ ಆದರೆ ಶಿವನ್ನು ಬೇಕೆಂದೇ ದಕ್ಷ ಯಜ್ಞಕ್ಕೆ ಆಹ್ವಾನಿಸಲಿಲ್ಲ.

ಅಳಿಯನಾದರೂ ಶಿವನನ್ನು ಯಾಕೆ ಆಹ್ವಾನಿಸಿಲ್ಲ ಎಂದು ಕೇಳಲು ಬಂದ ದಾಕ್ಷಾಯಿಣಿಗೆ ದಕ್ಷ ಅವಮಾನ ಮಾಡಿದಾಗ ಸತಿ ದೇವಿ ಯಜ್ಞ ಕುಂಡಕ್ಕೆ ಹಾರಿ ದೇಹವನ್ನು ತ್ಯಜಿಸಿದರು. ಇದರಿಂದ ಕುಪಿತನಾದ ಸದಾಶಿವ ದಕ್ಷನ ತಲೆ ಕಡಿದು ಸತಿ ದೇವಿಯ ದೇಹವನ್ನು ಹಿಡಿದು ಬ್ರಹ್ಮಾಂಡವನ್ನು ಶೋಕದಲ್ಲಿ ಸುತ್ತಲೂ ಆರಂಭ ಮಾಡಿದನು

ಹೀಗೆ ಉಳಿದರೆ ಸೃಷ್ಟಿಯ ವಿನಾಶ ಎಂದರೆ ಮಹಾವಿಷ್ಣು ತನ್ನ ಸುದರ್ಶನ ಚಕ್ರದಿಂದ ಸತಿಯ ದೇಹವನ್ನು ತುಂಡರಿಸಿದನಂತೆ.ಈ ದೇಹದ ಭಾಗಗಳು ಬಿದ್ದ ಜಾಗವೇ ಮುಂದೆ ಶಕ್ತಿ ಪೀಠಗಳಾಯಿತು ಎಂಬ ನಂಬಿಕೆ ಇದೆ.

ಇನ್ನು ಈ ದೇವಾಲಯ ಸತಿ ದೇವಿಯ ನಾಲಿಗೆ ಬಿದ್ದ ಜಾಗ ಎಂದು ನಂಬಲಾಗುತ್ತದೆ. ತಾಯಿಯು ಕೋಪದಿಂದ ನಾಲಿಗೆ ಹೊರಚಾಚಿದಾಗ ಅದರಿಂದ ಬರುವ ಅಗ್ನಿಯೇ ಇಲ್ಲಿರುವ ಜ್ವಾಲೆಗಳಾಗಿವೆ ಎಂದು ನಂಬಿ ಆರಾಧಿಸಲಾಗುತ್ತದೆ.

ಮಹಾಕಾಳಿ, ಅನ್ನಪೂರ್ಣ, ಚಂಡಿ, ಹಿಂಗಾಲ. ವಿದ್ಯಾಭಾಸಿನಿ ಮಹಾಲಕ್ಷ್ಮಿ, ಸರಸ್ವತಿ, ಅಂಬಿಕಾ, ಅಂಜಿದೇವಿ ರೂಪದಲ್ಲಿ ಪೂಜೆಯನ್ನು ಮಾಡಲಾಗುತ್ತದೆ. ಇನ್ನು ಈ ಜ್ವಾಲೆಗಳು ಕೆಲವೊಂದು ಬಾರಿ ಹಸಿರು ಹಳದಿ ನೀಲಿ ಕೆಂಪು ಬಣ್ಣದಲ್ಲಿಯೂ ಉರಿಯುತ್ತದೆ.

ಕೆಂಪು ಬಣ್ಣದಿಂದ ಉರಿದರೆ, ಜಗತ್ತಿನಲ್ಲಿ ಏನಾದರೂ ತೊಂದರೆ, ಕೇಡು ಸಂಭವಿಸುತ್ತದೆ ಅನ್ನೋ ನಂಬಿಕೆ ಭಕ್ತರಲ್ಲಿದೆ. ಈ ದೇವಾಲಯಕ್ಕೂ ಪಾಂಡವರಿಗೂ ಕೂಡ ಒಂದು ನಂಟಿದೆ. ಪಾಂಡವರು ತಮ್ಮ ಅಜ್ಞಾತ ವಾಸದಲ್ಲಿ ಇಲ್ಲಿಗೆ ಬಂದು ನೆಲೆಸಿದ್ದರು.

jwala ji Temple Jwalamukhi Himachal Pradesh

ಇಲ್ಲಿ ಉರಿಯುತ್ತಿರುವ ಜ್ವಾಲೆಯನ್ನು ಗಮನಿಸಿ ತಾಯಿಯ ರೂಪವೆಂದು, ದೇವಾಲಯ ನಿರ್ಮಿಸಿ ಪೂಜೆ ನಡೆಸಿದ್ದರಂತೆ. ಮುಂದೆ ಕಾಲಾನುಕ್ರಮದಲ್ಲಿ ಇದು ಮತ್ತೆ ಕಾಡಾಗಿ ಬದಲಾಯಿತು.ಮುಂದೆ ಈ ಪ್ರದೇಶವನ್ನು ಆಳುತ್ತಿದ್ದ ರಾಜನ ಕನಸಿನಲ್ಲಿ ಬಂದ ಸತಿ ದೇವಿಯು ಜ್ವಾಲೆಯ ರೂಪದ ತನ್ನ ಇರುವಿಕೆಯನ್ನು ತಿಳಿಸಿದಳಂತೆ.

ಇದರಂತೆ ಈ ಜಾಗವನ್ನು ಹುಡುಕುತ್ತಾ ಹೊರಟಾಗ ಒಬ್ಬ ಧನಗಾಯಿಯ ಮೂಲಕ ಈ ಜ್ವಾಲೆಗಳು ಉರಿಯುವುದನ್ನು ಉರಿಯುವುದನ್ನು ರಾಜನು ತಿಳಿದುಕೊಂಡನು. ಮುಂದೆ ಇಲ್ಲೇ ದೇವಾಲಯವನ್ನು ನಿರ್ಮಿಸಿದನು .ಅದೇ ದೇವಾಲಯವನ್ನು ಇಂದಿಗೂ ಕಾಣಬಹುದು.

ಇನ್ನು ಮೊಗಲರ ಆಳ್ವಿಕೆಯ ವೇಳೆ ಅಕ್ಬರನು ಈ ಜ್ವಾಲೆಗಳನ್ನು ನಂದಿಸಲು ಯತ್ನಿಸಿದನಂತೆ. ಆದರೆ ಸಫಲವಾಗದ ಕಾರಣ ಸೋತ ಅಕ್ಬರನು ತಾಯಿಗೆ ಬಂಗಾರದ ಚಾದರವನ್ನು ನೀಡಿದಂತೆ. ಆದರೆ ಅದನ್ನು ಸ್ವೀಕರಿಸದ ತಾಯಿ ಬಂಗಾರದ ಚಾದರವನ್ನು ಕಪ್ಪು ಲೋಹವನ್ನಾಗಿ ಮಾಡಿದಳಂತೆ.

ಅದು ಇಂದಿಗೂ ದೇವಾಲಯದ ಆವರಣದಲ್ಲಿ ಕಾಣಬಹುದು. ಇನ್ನು ಇಲ್ಲಿ ವೈಜ್ಞಾನಿಕ ತಪಾಸಣೆಗಳು ಆಗಿದ್ದು, ನೈಸರ್ಗಿಕ ಗ್ಯಾಸ್ ಅಥವಾ ಅನಿಲದಿಂದ ಈ ಜ್ವಾಲೆ ಉರಿಯುತ್ತಿರಬಹುದು ಎಂದು ವಿಜ್ಞಾನಿಗಳು ಪರೀಕ್ಷೆ ನಡೆಸಿದ್ದರು.

ಆದರೆ ಇದರಲ್ಲಿ ಯಾವುದೇ ಯಶಸ್ಸು ಕಂಡಿಲ್ಲ .ಹೀಗಾಗಿ ಉಳಿದಿದೆ ಜ್ವಾಲೆಗಳ ರಹಸ್ಯ ಹಾಗೇ ಉಳಿದಿದೆ. ಇನ್ನು ಈ ದೇವಾಲಯ ಕಾಂಗ್ರಾ ಕಣೆವೆಯಿಂದ 30 ಕಿಲೋ ಮೀಟರ್ ದೂರದಲ್ಲಿದೆ . ಇಲ್ಲಿಗೆ ಹತ್ತಿರದ ರೈಲ್ವೆ ನಿಲ್ದಾಣ ಅಂದ್ರೆ ಅದು ಪಟಾನ್ ಕೋಟ್ ರೈಲ್ವೇ ನಿಲ್ದಾಣ. ಇಲ್ಲಿಂದ ರೈಲ್ವೇ ನಿಲ್ದಾಣಕ್ಕೆ ತೆರಲು ಖಾಸಗಿ ವಾಹನ ಹಾಗೂ ಬಸ್ ಸೌಕರ್ಯವಿದೆ.

lamp has been burning for 1000 of years – if you visit the Shakti Peetha of jwala ji Temple Jwalamukhi Himachal Pradesh all your problems will be solved

Vandana kommunje | ವಂದನಾ ಕೊಮ್ಮುಂಜೆ

Vandana Kommunje Senior Content Writer. Working in more than 10 Years in Kannada Famous News Channesl. Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories