ನೇಪಾಳದಲ್ಲಿ ಹಂಗಾಮಿ ಪ್ರಧಾನಿಯಾಗಿ ಸುಶೀಲಾ ಕರ್ಕಿ ಪ್ರಮಾಣವಚನ

ನೇಪಾಳದಲ್ಲಿ ಅರಾಜಕತೆಯ ನಡುವಲ್ಲೇ ಹಂಗಾಮಿ ಪ್ರಧಾನ ಮಂತ್ರಿಯ ಆಯ್ಕೆ ನಡೆದಿದೆ. ನೇಪಾಳದ ಹಂಗಾಮಿ ಪ್ರಧಾನ ಮಂತ್ರಿಯಾಗಿ ನಿವೃತ್ತ ನ್ಯಾಯ ಮೂರ್ತಿ ಸುಶೀಲಾ ಕರ್ಕಿ (Nepal Intreme Prime Minister Sushila Karki) ಆಯ್ಕೆಯಾಗಿದ್ದಾರೆ.
ಇದೀಗ ರಾಷ್ಟ್ರಪತಿ ರಾಮ ಚಂದ್ರ ಪುದೇಲ್ ಕರ್ಕಿ ಯವರಿಗೆ ಪ್ರಮಾಣ ವಚನ ಭೋಧಿಸಿದ್ರು . ಈ ಮೂಲಕ ಕರ್ಕಿ ನೇಪಾಳ ಮೊದಲ ಮಹಿಳಾ ಪ್ರಧಾನಿ ಅಂತ ಅನ್ನಿಸಿಕೊಂಡಿದ್ದಾರೆ.
ಇದನ್ನೂ ಓದಿ : ಭಾರತದಲ್ಲಿ 7 ಲಕ್ಷ ಟನ್ ಕಾಫಿ ಉತ್ಪಾದನೆ ಗುರಿ : ನಾಗಾಲ್ಯಾಂಡ್‌ಗೆ ಕಾಫಿ ಮಂಡಳಿ ನಿಯೋಗ
ಕಳೆದ ಕೆಲದಿನಗಳಿಂದ ನೇಪಾಳದಲ್ಲಿ ಭಾರಿ ಪ್ರತಿಭಟನೆಗಳು ನಡೆಯುತ್ತಿದ್ದು, ಈ ಪ್ರತಿಭಟನೆಯಲ್ಲಿ ಹಲವಾರು ಮಂದಿ ಪ್ರಾಣ ಕಳೆದು ಕೊಂಡಿದ್ದಾರೆ. ಇನ್ನು ನೇಪಾಳ ದ ಪ್ರಧಾನಿ ಕೂಡಾ ದೇಶ ಬಿಟ್ಟು ಹೋಗಿದ್ದು, ದೇಶದ ಅರಾಜಕತೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕರ್ಕಿಯನ್ನು ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ : India vice President : ಭಾರತದ ಉಪರಾಷ್ಟ್ರಪತಿಯಾಗಿ ಸಿಪಿ ರಾಧಾಕೃಷ್ಣನ್
ಸುಶೀಲಾ ಕರ್ಕಿ ಯವರು ನಿವೃತ್ತ ನಾಯಾಯ ಮೂರ್ತಿಯಾಗಿದ್ದು, 2016 ರಿಂದ 2017 ರವರೆಗೆ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ರು. ಇವರ ಸಂವಿಧಾನಿಕ ಬಿಕ್ಕಟ್ಟು , ಹಾಗೂ ಮಾನವ ಹಕ್ಕುಗಳ ಕುರಿತ ತೀರ್ಪುಗಳು ಜನ ಮೆಚ್ಚುಗೆಯನ್ನು ಗಳಿಸಿದ್ದವು. ಹೀಗಾಗಿ ಇವರ ಆಯ್ಕೆ ಪರಿಸ್ಥಿತಿಯನ್ನು ನಿಭಾಯಿಸಲು ಅನುಕೂಲ ವಾಗಲಿದೆ ಎಂದು ನಂಬಲಾಗಿದೆ .
Nepal Intreme Prime Minister Sushila Karki sworn



