ಭಾರತದಲ್ಲಿ 7 ಲಕ್ಷ ಟನ್ ಕಾಫಿ ಉತ್ಪಾದನೆ ಗುರಿ : ನಾಗಾಲ್ಯಾಂಡ್‌ಗೆ ಕಾಫಿ ಮಂಡಳಿ ನಿಯೋಗ

ಭಾರತದಲ್ಲಿ ಕಾಫಿ ಉತ್ಪಾದನೆಯ ಪ್ರಮಾಣವನ್ನು ಏರಿಕೆ ಮಾಡುವ ಸಲುವಾಗಿ ಭಾರತೀಯ ಕಾಫಿ ಮಂಡಳಿ (Coffee Board ) ಯ ಸದಸ್ಯರ ನಿಯೋಗ ನಾಗಾಲ್ಯಂಡ್‌ಗೆ ಪ್ರವಾಸ ಕೈಗೊಂಡಿದೆ. ಭಾರತದಲ್ಲಿ ಕಾಫಿ ಉತ್ಪಾದನೆ ಹೆಚ್ಚಳದ ಕುರಿತು ನಿಯೋಗ ಅಧ್ಯಯನ ನಡೆಸಲಿದೆ.
ಭಾರತದಲ್ಲಿ ಕಾಫಿ ಉತ್ಪಾದನೆಯ ಗುರಿಯನ್ನು 7ಲಕ್ಷ ಟನ್‌ಗೆ ಏರಿಕೆ ಮಾಡಲು ಭಾರತ ಸರಕಾರ ಕಾಫಿ ಮಂಡಳಿ ಯೋಜನೆ ರೂಪಿಸಿದೆ ಇದೇ ಕಾರಣದಿಂದಲೇ ಹಲವು ಪ್ರಯತ್ನಗನ್ನು ನಡೆಸಲಾಗುತ್ತಿದೆ. ಇದರ ಭಾಗವಾಗಿಯೇ ಅಧ್ಯಯನ ಪ್ರವಾಸ ಕೈಗೊಳ್ಳಲಾಗಿದೆ.
ಸೆಪ್ಟೆಂಬರ್ 3ರಂದು ಕಾಫಿ ಮಂಡಳಿಯ ಸದಸ್ಯರ ನಿಯೋಗ ನಾಗಾಲ್ಯಾಂಡ್ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಿದೆ. ಈ ವೇಳೆಯಲ್ಲಿ ಅಧಿಕಾರಿಗಳ ಜೊತೆಗೆ ಸಮಾಲೋಚನೆ ನಡೆಸಲಿದೆ. ನಾಗಾಲ್ಯಾಂಡ್‌ನಲ್ಲಿ ಕಾಫಿ ಬೆಳೆಯುವ ಕುರಿತು ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಲಾಗುತ್ತದೆ ಎಂದು ಕಾಫಿ ಮಂಡಳಿಯ ಸದಸ್ಯರಾದ ಎನ್‌ಬಿ ಉದಯ್ ಕುಮಾರ್ ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಜಾತಿ ಸಮೀಕ್ಷೆ : ಹೊಸ ಜಾತಿಯ ನಾಮಕರಣ ಬೇಡ : ಸುನಿಲ್ ಕುಮಾರ್
ಕಾಫಿ ಮಂಡಳಿಯ ಅಧ್ಯಕ್ಷರಾದ ಎಂಜೆ ದಿನೇಶ್, ಸಿಇಓ ಡಾ. ಕೂರ್ಮರಾವ್ ಹಾಗೂ ಕಾಫಿ ಮಂಡಳಿಯ ಸದಸ್ಯರು ಈ ನಿಯೋಗದಲ್ಲಿ ಇರಲಿದ್ದಾರೆ. ಈ ನಿಯೋಗ ಅಧ್ಯಯನ ನಡೆಸಿ, ಭಾರತದಾದ್ಯಂತ ಕಾಫಿ ಬೆಳೆಗಾರರಿಗೆ ಉತ್ತೇಜನ ನೀಡಲಿದೆ.
ಭಾರತ ಸರ್ಕಾರದ ಕಾಫಿ ಮಂಡಳಿಯು ಕಾಫಿ ಉಧ್ಯಮದ ಶ್ರೇಯೋಭಿವೃದ್ದಿಗೆ ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ. ಅಲ್ಲದೇ ಸೇವೆ- ಸೌಲಭ್ಯಗಳನ್ನು ನೀಡುತ್ತಲೇ ಬಂದಿದೆ.
ಪಶ್ಚಿಮ ಘಟ್ಟ ಪ್ರದೇಶಗಳ ಸಾಫ್ರದಾಯಿಕ ಪ್ರದೇಶಗಳ ಜೊತೆಯಲ್ಲಿಯೇ ಇತರೆ ಅಸಂಪ್ರದಾಯಿಕ ಪ್ರದೇಶಗಳಲ್ಲೂ ಕಾಫಿ ಬೆಳೆಯುವ ಪ್ರಯತ್ನದತ್ತ ರೈತರು ಮುಖಮಾಡಿದ್ದಾರೆ. ಈ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ನೀರು ಇಲ್ಲದ ಪ್ರದೇಶದಲ್ಲಿ ವಾಸಿಸುವ ಈ ಹಕ್ಕಿಯ ವಿಶೇಷತೆ ಏನು ಗೊತ್ತಾ ?
India aims to produce 7 lakh tonnes of coffee: Coffee Board delegation to Nagaland



