Asia Cup 2025 IND vs PAK : ಪಾಕ್‌ ವಿರುದ್ದ ಗೆದ್ದ ಭಾರತ : ಹ್ಯಾಂಡ್‌ಶೇರ್‌ ಮಾಡದೆ ಪಾಕ್‌ ಅವಮಾನಿಸಿದ ಸೂರ್ಯ ಕುಮಾರ್‌ ಯಾದವ್

Asia Cup 2025, IND vs PAK : ಏಷ್ಯಾಕಪ್‌ನಲ್ಲಿ ಪಾಕಿಸ್ತಾನದ ವಿರುದ್ದ ಪಂದ್ಯದಲ್ಲಿ ಭಾರತ ಸೇಡು ತೀರಿಸಿಕೊಂಡಿದೆ. ಪಾಕ್‌ ವಿರುದ್ದದ ಪಂದ್ಯವನ್ನು ಜಯಿಸಿದ ಬಳಿಕವೂ ಸೂರ್ಯಕುಮಾರ್‌ ಯಾದವ್‌ ಪಾಕ್‌ ನಾಯಕನ ಕೈ ಕುಲುಕದೇ ಅವಮಾನಿಸಿದ್ದಾರೆ. ಸೋಲಿನ ಬೆನ್ನಲ್ಲೇ ಅವಮಾನದ ಶಾಕ್‌ ಕೊಟ್ಟಿದ್ದಾರೆ.

ಪಾಕಿಸ್ತಾನ ವಿರುದ್ದ ಭಾರತ ಕ್ರಿಕೆಟ್‌ ಪಂದ್ಯವನ್ನಾಡುವುದಕ್ಕೆ ಭಾರತದ ಕೋಟ್ಯಾಂತರ ಕ್ರಿಕೆಟ್‌ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದ್ದರು. ಆದರೂ ಏಷ್ಯಾಕಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಪರಸ್ಪರ ಮುಖಾಮುಖಿಯಾಗಿದ್ದವು.

ಯುಎಇ ವಿರುದ್ದ ಭರ್ಜರಿ ಗೆಲುವು ದಾಖಿಸಿದ್ದ ಭಾರತ ಪಾಕಿಸ್ತಾನಕ್ಕೆ ಹೀನಾಯ ಸೋಲಿನ ರುಚಿ ತೋರಿಸಿದೆ. ಭಾರತದ ಚುಟುಕು ಕ್ರಿಕೆಟ್‌ ತಂಡದ ನಾಯಕ ಸೂರ್ಯಕುಮಾರ್‌ ಯಾದವ್‌, ಇದೀಗ ವೃತ್ತಿ ಜೀವನದ ಅತ್ಯಂತ ಪ್ರಮುಖ ಪಂದ್ಯದಲ್ಲಿ ಭಾರತ ಕ್ರಿಕೆಟ್‌ ತಂಡವನ್ನು ಮುನ್ನೆಡೆಸಿದ್ದರು.

ಪಾಕ್‌ ವಿರುದ್ದದ ಪಂದ್ಯದಲ್ಲಿ ಯಾದವ್‌ ಕೈಗೊಂಡ ಕೆಲವು ನಿರ್ಧಾರಗಳಿಂದಾಗಿಯೇ ಭಾರತ ಭರ್ಜರಿ ಗೆಲುವು ದಾಖಲಿಸಿದೆ. ಭಾರತೀಯ ಬೌಲರ್‌ ಗಳನ್ನು ಪಾಕಿಸ್ತಾನ ತಂಡವನ್ನು ಅತ್ಯಂತ ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಯಶಸ್ವಿ ಆಗಿದ್ದಾರೆ.

ಪಾಕಿಸ್ತಾನ ವಿರುದ್ದ ಭಾರತ ತಂಡ ಗೆಲುವು ಸಾಧಿಸಿದ ನಂತರ ಸೂರ್ಯಕುಮಾರ್‌ ಯಾದವ್‌ ಪಾಕಿಸ್ತಾನ ತಂಡ ನಾಯಕನಿಗೆ ಹಸ್ತಲಾಘವ ಮಾಡುವುದು ಪದ್ದತಿ. ಆದರೆ ಸೂರ್ಯಕುಮಾರ್‌ ಯಾದವ್‌ ಹ್ಯಾಂಡ್‌ ಶೇಕ್‌ ಮಾಡದೇ ಪಾಕ್‌ ಕ್ರಿಕೆಟಿಗರಿಗೆ ಸೋಲಿನ ಜೊತೆಗೆ ಶಾಕ್‌ ಕೊಟ್ಟಿದ್ದಾರೆ.

ಇದನ್ನೂ ಓದಿ : ಆಸ್ಟ್ರೇಲಿಯಾಕ್ಕೆ 282ರನ್‌ ಸವಾಲು ನೀಡಿದ ಭಾರತದ ವನಿತೆಯರು

ಕ್ರಿಕೆಟ್‌ ಗಿಂತ ದೇಶದ ದೊಡ್ಡದು ಎಂದ ಸೂರ್ಯಕುಮಾರ್‌ ಯಾದವ್‌

ಏಷ್ಯಾಕಪ್‌ ನಲ್ಲಿ ಭಾರತ ವಿರುದ್ದ ಪಂದ್ಯದ ಗೆಲುವನ್ನು ಪಹಲ್ಗಾಮ್‌ ದಾಳಿಯಲ್ಲಿ ಮೃತಪಟ್ಟವರಿಗೆ ಹಾಗೂ ಭಾರತೀಯ ವೀರ ಯೋಧರಿಗೆ ಸಮರ್ಪಣೆ ಮಾಡಿದ್ದಾರೆ. ಪಂದ್ಯದ ನಂತರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಜೀವನದ ಕೆಲವು ವಿಷಯಗಳು ಕ್ರೀಡಾ ಮನೋಭಾವವನ್ನು ಮೀರುತ್ತದೆ ಎಂದಿದ್ದಾರೆ.

“ನಮ್ಮ ಸರ್ಕಾರ ಮತ್ತು ಬಿಸಿಸಿಐ, ನಾವು ಒಟ್ಟಿಗೆ ಇದ್ದೇವೆ.ಉಳಿದವರು, ನಾವು ಇಲ್ಲಿಗೆ ಬಂದಿದ್ದೇವೆ, ನಾವು ನಿರ್ಧಾರ ತೆಗೆದುಕೊಂಡಿದ್ದೇವೆ. ನಾವು ಇಲ್ಲಿಗೆ ಬಂದಿರುವುದು ಕೇವಲ ಆಟವನ್ನು ಆಡಲು ಎಂದು ನಾನು ಭಾವಿಸುತ್ತೇನೆ. ನಾವು ಅವರಿಗೆ ಸರಿಯಾದ ಉತ್ತರ ನೀಡಿದ್ದೇವೆ ಎಂದು ನಾನು ಭಾವಿಸುತ್ತೇನೆ.

ಇದನ್ನೂ ಓದಿ : ಶ್ರೀಶಾಂತ್‌ಗೆ ಹರ್ಭಜನ್‌ ಸಿಂಗ್‌ ಕಪಾಳಮೋಕ್ಷ ವಿಡಿಯೋ ವೈರಲ್‌

ಜೀವನದಲ್ಲಿ ಕೆಲವೇ ವಿಷಯಗಳು ಕ್ರೀಡಾ ಮನೋಭಾವಕ್ಕಿಂತ ಮುಂದಿವೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಎಲ್ಲಾ ಬಲಿಪಶುಗಳೊಂದಿಗೆ ನಾವು ನಿಲ್ಲುತ್ತೇವೆ ಮತ್ತು ಅವರ ಕುಟುಂಬಗಳೊಂದಿಗೆ ನಾವು ನಿಲ್ಲುತ್ತೇವೆ. ನಾನು ಹೇಳಿದಂತೆ, ಈ ಗೆಲುವನ್ನು ಆಪರೇಷನ್ ಸಿಂಧೂರ್‌ನಲ್ಲಿ ಭಾಗವಹಿಸಿದ ನಮ್ಮ ಧೈರ್ಯಶಾಲಿ ಸಶಸ್ತ್ರ ಪಡೆಗಳಿಗೆ ಅರ್ಪಿಸುತ್ತೇವೆ ಎಂದಿದ್ದಾರೆ.

ಮುಖ್ಯ ತರಬೇತುದಾರ ಗೌತಮ್ ಗಂಭೀರ್, ಸೂರ್ಯಕುಮಾರ್ ಅವರ ಹೇಳಿಕೆಯನ್ನು ಪ್ರತಿಧ್ವನಿಸಿದರು, ಭಾರತವು ಗೆಲುವನ್ನು ಸಶಸ್ತ್ರ ಪಡೆಗೆ ಅರ್ಪಿಸಲು ಉತ್ಸುಕವಾಗಿದೆ ಎಂದು ಹೇಳಿದರು.

Asia Cup 2025 india vs Pakisthan Suryakumar Yadav handshake snub stung Pakistan

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories