ಮಂಗಳವಾರ, ಏಪ್ರಿಲ್ 29, 2025
Homehoroscopeನಿತ್ಯಭವಿಷ್ಯ: 11-08-2020

ನಿತ್ಯಭವಿಷ್ಯ: 11-08-2020

- Advertisement -

ಮೇಷರಾಶಿ
ಸ್ತ್ರೀ ಲಾಭ, ಉದ್ಯೋಗದಲ್ಲಿ ಹೆಚ್ಚಿನ ವರಮಾನ, ವೃತ್ತಿರಂಗದಲ್ಲಿ ಮೇಲಧಿಕಾರಿಗಳ ಮೆಚ್ಚುಗೆ ದೊರಕಲಿದೆ. ಲೇವಾದೇವಿಯಲ್ಲಿ ಅಸಮಾಧಾನ ಕಂಡು ಬರಲಿದೆ. ಹಿತಬಂಧುಗಳು ನಿಮ್ಮಿಂದ ಸಹಾಯ ಅಪೇಕ್ಷಿಸಿ ಬಂದಾರು. ವಿದ್ಯಾರ್ಥಿಗಳ ಅಭ್ಯಾಸದ ಬಗ್ಗೆ ಚಿಂತೆಯು ಹತ್ತಲಿದೆ. ಆರ್ಥಿಕ ಸ್ಥಿತಿ ಉತ್ತಮ, ಹಿರಿಯರ ಸಲಹೆ ಮಾತು.

ವೃಷಭರಾಶಿ
ಧನ ವಿನಿಯೋಗದಲ್ಲಿ ಎಚ್ಚರವಿರಲಿ. ಸಮುಷ್ಟಿ ವೃತ್ತಿಯಲ್ಲಿ ವಂಚನೆ ಕಂಡು ಬಂದೀತು. ವಾಹನಗಳಿಂದ ಖರ್ಚು ಬರಲಿದೆ. ಕಚೇರಿಯಲ್ಲಿ ಮುಂಭಡ್ತಿಗೆ ತಡೆಯು ಬಂದೀತು. ಯತ್ನ ಕಾರ್ಯಗಳಲ್ಲಿ ತೊಂದರೆ, ಸ್ತ್ರೀಯರಿಗೆ ಜವಾಬ್ದಾರಿಯ ದಿನ, ಬಂಧು ಸಮಾಗಮದಿಂದ ಹರುಷ ತರಲಿದೆ. ಮನಃಕ್ಲೇಷ, ವಾಹನ ಅಪಘಾತ ಸಾಧ್ಯತೆ ಎಚ್ಚರದಿಂದಿರಿ.

ಮಿಥುನರಾಶಿ
ವಿರೋಧಿಗಳ ಕುತಂತ್ರಕ್ಕೆ ಬಲಿಯಾಗುವಿರಿ, ಆಸ್ತಿ ವಿಚಾರದಲ್ಲಿ ಮನಸ್ತಾಪಕ್ಕೆ ಕಾರಣವಾಗಲಿದೆ. ಮನೆಯ ವಿಸ್ತರಣೆಯೂ ರಿಪೇರಿ ಕೆಲಸಕ್ಕೆ ಧನ ವಿನಿಯೋಗವಾದೀತು. ದುಡುಕಿ ಮಾಡಿದ ಕಾರ್ಯದಲ್ಲಿ ಆಶಾಭಂಗವಾದೀತು. ದಿನಸಿ ವ್ಯಾಪಾರದಲ್ಲಿ ಲಾಭವಿದೆ. ಕುಲದೇವರ ಅನುಗ್ರಹದಿಂದ ಅನುಕೂಲ, ಮನೆಯಲ್ಲಿ ಧಾರ್ಮಿಕ ಸಮಾರಂಭ.

ಕಟಕರಾಶಿ
ಋಣಭಾದೆ, ಸರಕಾರಿ ಉದ್ಯೋಗಸ್ಥರಿಗೆ ಸ್ಥಾನ ಪ್ರಾಪ್ತಿಯಾದರೂ ಕಿರಿಕಿರಿ ಹೆಚ್ಚಲಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದೇ ಹೋದೀತು. ಉದರವ್ಯಾಧಿಯಿಂದ ಆರೋಗ್ಯ ಸರಿ ಇರದು. ಮನೆಯಲ್ಲಿ ದೇವತಾ ಕಾರ್ಯಗಳ ಚಿಂತನೆ ನಡೆದೀತು. ಸ್ನೇಹಿತನ ದುಃಖಕ್ಕೆ ಹಿತವಚನ ಹೇಳುವಿರಿ, ಹೊಸ ಉದ್ಯೋಗ ಲಾಭ, ಸಂತೋಷದಿಂದ ಕುಟುಂಬದವರೊಡನೆ ದೇವಾಲಯಕ್ಕೆ ಭೇಟಿ.

ಸಿಂಹರಾಶಿ
ತರಕಾರಿ ವ್ಯವಹಾರದಲ್ಲಿ ಪ್ರಗತಿ ಕಡಿಮೆ. ಚಿನ್ನ, ಬೆಳ್ಳಿ ಖರೀದಿಗಳು ನಡೆದಾವು. ಎಂದೋ ಆಗಬೇಕಾಗಿದ್ದ ಕೆಲಸವೊಂದು ಸಲೀಸಾಗಿ ಆಗಲಿದೆ. ನಿರುದ್ಯೋಗಿಗಳಿಗೆ ಸಂದರ್ಶನದ ಅವಕಾಶವಿದೆ. ವಿದ್ಯಾರ್ಜನೆಯಲ್ಲಿ ಯಶಸ್ಸು ಇದೆ. ಬಹಳ ಶ್ರಮಪಟ್ಟರು ಕಾರ್ಯ ಫಲಿಸುವುದಿಲ್ಲ, ನಾನಾ ರೀತಿಯ ಆದಾಯ ಪ್ರಾಪ್ತಿ, ನಿಮ್ಮ ಮನೋಭಾವನೆ ಈಡೇರುವುದು.

ಕನ್ಯಾರಾಶಿ
ಕೃಷಿಯಲ್ಲಿ ನಷ್ಟ, ಅನಾರೋಗ್ಯ, ಶತ್ರು ಬಾಧೆ, ನೂತನ ಕಾರ್ಯಾರಂಭಕ್ಕೆ ವಿಘ್ನ ಭೀತಿ ತಂದೀತು. ಹಿರಿಯರಿಗೆ ಪುಣ್ಯಕ್ಷೇತ್ರಕ್ಕೆ ಸಂದರ್ಶನ ತಂದೀತು. ಪ್ರಯಾಣದಲ್ಲಿ ವಂಚನೆ, ಕಳ್ಳಕಾಕರ ಭೀತಿ ಇದೆ. ಜಲ ಪದಾರ್ಥದ ಮಾರಾಟಗಾರರು ನಷ್ಟವನ್ನು ಅನುಭವಿಸಿ ಬವಣೆ ಪಟ್ಟಾರು. ವಿದ್ಯಾರ್ಥಿಗಳಲ್ಲಿ ಗೊಂದಲ, ದಾಂಪತ್ಯ ವಿರಸ, ಸ್ಥಳ ಬದಲಾವಣೆ.

ತುಲಾರಾಶಿ
ನಿರುದ್ಯೋಗಿಗಳಿಗೆ ಉದ್ಯೋಗ ಲಾಭ, ಅನಿರೀಕ್ಷಿತ ರೂಪದಲ್ಲಿ ಹಣ ನೀರಿನಂತೆ ಖರ್ಚಾದೀತು. ಆಗಾಗ ಆಹಾರದಿಂದ ಆರೋಗ್ಯವು ಕೆಡಬಹುದು. ವೃತ್ತಿರಂಗದಲ್ಲಿ ಮುಂಭಡ್ತಿ ಇದೆ. ರಾಜಕೀಯ ವರ್ಗದವರಿಗೆ ಆಲ್ಲೋಲ ಕಲ್ಲೋಲ ಪರಿಸ್ಥಿತಿ ಉಂಟಾಗಲಿದೆ. ಅಕಾಲ ಭೋಜನ, ಇಕ್ಕಟ್ಟಿನ ಪರಿಸ್ಥಿತಿ, ವಿವಾಹ ಯೋಗ, ಹಿರಿಯರಿಂದ ಬೋಧನೆ.

ವೃಶ್ಚಿಕರಾಶಿ
ಚಂಚಲ ಮನಸ್ಸು, ಆದಾಯ ಕಡಿಮೆ ಖರ್ಚು ಜಾಸ್ತಿ, ಹಿತ ಶತ್ರು ಕಾಟದಿಂದ ಬಂದ ಅವಕಾಶವು ತಪ್ಪಿ ಹೋದೀತು. ಹಣ ಹೂಡಿಕೆಗೆ ಅವಸರ ಮಾಡದಿರಿ. ಸಾಂಸಾರಿಕವಾಗಿ ಆದಾಯಕ್ಕಿಂತ ವ್ಯಯವೇ ಹೆಚ್ಚಾದೀತು. ಸೇವಕರ ಹಠ ಸ್ವಭಾವಕ್ಕೆ ತಲೆ ಭಾಗಿಸುವಂತಾಗಲಿದೆ. ಪರಸ್ಥಳ ವಾಸ, ವಾದ ವಿವಾದದಲ್ಲಿ ಸೋಲು.

ಧನಸ್ಸುರಾಶಿ
ದುಃಖದಾಯಕ ಪ್ರಸಂಗಗಳು, ಅನ್ಯ ಜನರಲ್ಲಿ ದ್ವೇಷ, ಮನೆಯಲ್ಲಿ ಸ್ತ್ರೀ ಸೌಖ್ಯ ಉತ್ತಮ. ದೇವತಾ ಸಂದರ್ಶನದಿಂದ ಸಂತೃಪ್ತಿ. ಮಕ್ಕಳ ಶಿಕ್ಷಣದಲ್ಲಿ ಉತ್ತಮ ಪ್ರಗತಿ. ಯೋಗ್ಯ ವಯಸ್ಕರಿಗೆ ವಿವಾಹ ಭಾಗ್ಯವಿದೆ. ಕ್ರೀಡಾಪಟುಗಳಿಗೆ ಯಶಸ್ಸಿನ ಕಾಲವಿದು. ಮುನ್ನಡೆಯಿರಿ. ಗುರು ಹಿರಿಯರಲ್ಲಿ ಭಕ್ತಿ, ಆರ್ಥಿಕ ಪರಿಸ್ಥಿತಿ ಉತ್ತಮವಾಗುವುದು.

ಮಕರರಾಶಿ
ರಿಯಲ್ ಎಸ್ಟೇಟ್‍ನವರಿಗೆ ಅಧಿಕ ಲಾಭ, ಉನ್ನತ ಸ್ಥಾನಮಾನ ಗೌರವ, ಯಶಸ್ಸಿನ ಹಿಂದೆ ಓಡುವ ನಿಮಗೆ ಹಣದ ಅಪವ್ಯಯ ಕಣ್ಣಿಗೆ ಕಾಣದಂತಾದೀತು. ಮಡದಿಯ ಹಿತವಚನಕ್ಕೆ ಅಲಕ್ಷ್ಯ ಮಾಡದಿರಿ. ಹೊಸತನದ ಕಾರ್ಯಕ್ಕೆ ಪ್ರಚೋದನೆ ನೀಡಲಿದೆ. ರಾಜಕೀಯದವರಿಗೆ ಉತ್ತಮವಿದೆ. ಮನಃ ಶಾಂತಿ, ಶೀತ ಸಂಬಂಧಿ ರೋಗಗಳ ಸಾಧ್ಯತೆ.

ಕುಂಭರಾಶಿ
ಭಯ ಭೀತಿ ನಿವಾರಣೆ, ದಾನ ಧರ್ಮಗಳಲ್ಲಿ ಆಸಕ್ತಿ, ಕೆಲಸ ನಿಧಾನಗತಿಯಿದ್ದರೂ ಚೊಕ್ಕದಾಗಿ ಮುಗಿಸುವಿರಿ. ಕೋರ್ಟು ವ್ಯವಹಾರದಲ್ಲಿ ತುಂಬಾ ವಿಳಂಬವಾಗಲಿದೆ. ವಿದ್ಯಾರ್ಥಿಗಳ ಪ್ರತಿಭೆಗೆ ಉತ್ತಮ ಪುರಸ್ಕಾವಿದೆ. ಬ್ರಹ್ಮಚಾರಿಗಳಿಗೆ ದಾಂಪತ್ಯ ಯೋಗವು ಕೂಡಿ ಬಂದು ಸಂತಸ. ಭೂಲಾಭ, ವಾಹನ ಪ್ರಾಪ್ತಿ, ಹಣದ ತೊಂದರೆ, ಯತ್ನ ಕಾರ್ಯ ಭಂಗ.

ಮೀನರಾಶಿ
ವಿಪರೀತ ವ್ಯಸನ, ಶತ್ರು ಬಾದೆ, ಕುಟುಂಬದಲ್ಲಿ ಅಸೌಖ್ಯ, ಸ್ತ್ರೀಯರಿಗೆ ವಸ್ತು ಪ್ರಾಪ್ತಿ, ಅಧಿಕಾರಿಗಳಲ್ಲಿ ಕಲಹ, ಮಾನಸಿಕ ಒತ್ತಡ. ವಾಹನ ಮನೆಗೆ ಬರಲಿದೆ. ವಿವಾಹಿತರಿಗೆ ಸಂತಸದ ವಾರ್ತೆ. ಪ್ರತಿಕೋದ್ಯಮದವರಿಗೆ ನಿರೀಕ್ಷೆಗೆ ಮೀರಿ ಯಶೋಭಿವೃದ್ಧಿ ಇದೆ. ಆಹಾರ ಪದಾರ್ಥ ತಯಾರಿಕೆಯಲ್ಲಿ ಲಾಭಾಂಶ ಹೆಚ್ಚು. ದಾಂಪತ್ಯದಲ್ಲಿ ಮುನಿಸು ತೋರಿ ಬರಲಿದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular