ಎಷ್ಟೇ ದೇಹ ದಂಡಿಸಿದ್ರೂ ತೂಕ ಇಳಿಕೆಯಾಗ್ತಿಲ್ವಾ : ನೀವು ಮಾಡುತ್ತಿರುವ ಈ ಮೂರು ತಪ್ಪುಗಳೇ ಇದಕ್ಕೆ ಕಾರಣ

weight losing : ತೂಕ ಇಳಿಕೆ ಎನ್ನುವುದು ಸುಲಭದ ಮಾತಲ್ಲ. ಶಿಸ್ತು, ಶಕ್ತಿ, ಸಹಿಷ್ಣುತೆ, ಬದ್ಧತೆ ಎಲ್ಲವೂ ಇದ್ದಾಗ ಮಾತ್ರ ತೂಕ ಇಳಿಕೆ ಸಾಧ್ಯವಾಗುತ್ತದೆ. ದೇಹವನ್ನು ನಾವೆಂದುಕೊಂಡ ಆಕಾರಕ್ಕೆ ತರಲು ಸಾಧ್ಯವಿದೆ.
ಹ ದಂಡನೆ ಮಾಡುವುದರಿಂದ ದೇಹಕ್ಕೆ ಆಕಾರ ಬರುವುದು ಮಾತ್ರವಲ್ಲದೇ ಒತ್ತಡ ಹಾಗೂ ಆತಂಕಗಳು ದೂರವಾಗುತ್ತವೆ. ಆದರೆ ವ್ಯಾಯಾಮದ ಸರಿಯಾದ ಫಲಿತಾಂಶ ಕಾಣಬೇಕು ಎಂದರೆ ಕೆಲವು ಮಹತ್ವದ ವಿಚಾರಗಳು ತಲೆಯಲ್ಲಿರಬೇಕು.
ಖ್ಯಾತ ನಟಿ ತಮನ್ನಾ ಭಾಟಿಯಾ ಅವರ ಫಿಟ್ನೆಸ್ ತರಬೇತುದಾರರಾಗಿರುವ ಸಿದ್ಧಾರ್ಥ ಸಿಂಗ್ ಇನ್ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿದ್ದು ಜಿಮ್ನಲ್ಲಿ ಬೆವರಿಳಿಸುವ ಮಹಿಳೆಯರು ಮಾಡುವ ಮೂರು ಸಾಮಾನ್ಯ ತಪ್ಪುಗಳ ಬಗ್ಗೆ ಮಾತನಾಡಿದ್ದಾರೆ.
ಜಿಮ್ನಲ್ಲಿ ದೇಹದಂಡಿಸುವ ಮಹಿಳೆಯರು ಮಾಡುವ ಸಾಮಾನ್ಯ ಮೂರು ತಪ್ಪುಗಳಿವು :
ಪ್ರತಿ ವಾರ ವ್ಯಾಯಾಮದ ಪ್ರಕಾರದಲ್ಲಿ ಬದಲಾವಣೆ : ನೀವು ಒಂದು ವಾರ ಒಂದೇ ವಿಧಾನದಲ್ಲಿ ದೇಹ ದಂಡಿಸಿರುತ್ತೀರಿ. ಕನ್ನಡಿಯಲ್ಲಿ ನೋಡಿದಾಗ ನಿಮಗೆ ದೇಹದಲ್ಲಿ ಯಾವುದೇ ಬದಲಾವಣೆ ಕಾಣುವುದಿಲ್ಲ. ಆಗ ನಿಮ್ಮ ವ್ಯಾಯಾಮ ಬದಲಾವಣೆಗೆ ಮುಂದಾಗುತ್ತೀರಿ. ಈ ರೀತಿ ಮಾಡಿದರೆ ನೀವು ಖಂಡಿತ ಸಪೂರವಾಗಲು ಸಾಧ್ಯವಿಲ್ಲ. ಏನನ್ನೇ ಆದರೂ ನಿರಂತರವಾಗಿ ಮಾಡಿದಾಗ ಮಾತ್ರ ಉತ್ತಮ ಫಲಿತಾಂಶ ದೊರೆಯಲು ಸಾಧ್ಯವಿದೆ..
ಮತ್ತೊಬ್ಬರು ಮಾಡಿದಂತೆ ಮಾಡುವುದು : ಜಿಮ್ನಲ್ಲಿ ಇದೊಂದು ಅಭ್ಯಾಸ ಬಹುತೇಕ ಮಹಿಳೆಯರಿಗಿದೆ. ಅವರು ಅವರ ದೇಹಕ್ಕೆ ಬೇಕಾದ ಕೆಲಸ ಮಾಡುತ್ತಿಲ್ಲ. ಬದಲಾಗಿ ಬೇರೆ ಮಹಿಳೆಯರು ಮಾಡುತ್ತಿರುವ ವ್ಯಾಯಾಮವನ್ನೇ ಇವರಿಗೆ ಮಾಡಬೇಕು ಎನಿಸುತ್ತದೆ. ಈ ರೀತಿ ಮಾಡುವುದರಿಂದ ಖಂಡಿತ ತೂಕ ಇಳಿಕೆ ಸಾಧ್ಯವಿಲ್ಲ.
ಸಿಕ್ಕಾಪಟ್ಟೆ ಕಡಿಮೆ ತೂಕವನ್ನು ಎತ್ತುವುದು : ಮಹಿಳೆಯರು ಸಾಮಾನ್ಯವಾಗಿ ಮಾಡುವ ತಪ್ಪುಗಳಲ್ಲಿ ಇದೂ ಒಂದಾಗಿದೆ. ಕೆಲ ಮಹಿಳೆಯರು ತೀರಾ ಕಡಿಮೆ ತೂಕವನ್ನು ಎತ್ತುವ ಮೂಲಕ ಬಾಡಿ ಟೋನಿಂಗ್ ಮಾಡುವ ಪ್ರಯತ್ನದಲ್ಲಿರುತ್ತಾರೆ. ಆದರೆ ಇದು ಅಸಾಧ್ಯ ಮಾತು. ದೇಹಕ್ಕೆ ಒತ್ತಡ ಬಿದ್ದಾಗ ಮಾತ್ರ ಟೋನಿಂಗ್ ಆಗಲು ಸಾಧ್ಯ. ದೇಹಕ್ಕೆ ಸರಿಯಾದ ಆಕಾರ ಬರಲು ಸಾಧ್ಯವಿದೆ.
ಹೀಗಾಗಿ ಮಹಿಳೆಯರು ಮೊದಲು ತಾನು ಜಿಮ್ಗೆ ಹೋದಾಕ್ಷಣ ಸಪೂರ ಆಗುತ್ತೇನೆ ಎಂಬ ಮನೋಭಾವ ಬಿಡಬೇಕು. ಪ್ರಯತ್ನಂ ಸರ್ವತ್ರ ಸಾಧನಂ ಎಂಬಂತೆ. ಎಲ್ಲಿಯವರೆಗೆ ನಾವು ಮನಸು ಬಿಚ್ಚಿ ಪ್ರಯತ್ನಿಸುವುದಿಲ್ಲವೋ ಅಲ್ಲಿಯವೆರೆಗೆ ದೇಹದ ತೂಕ ಇಳಿಸುವಿಕೆ ಸಾಧ್ಯವಿಲ್ಲ. ಇನ್ನೊಬ್ಬರನ್ನು ನೋಡದೇ, ತಾಳ್ಮೆ ಕಳೆದುಕೊಳ್ಳದೇ ದೃಢ ಮನಸ್ಸಿನಿಂದ ಪ್ರಯತ್ನಿಸಿದಾಗ ಖಂಡಿತ ದೇಹಕ್ಕೆ ಸೂಕ್ತ ಆಕಾರ ಕೊಡಲು ಸಾಧ್ಯವಿದೆ.
weight losing physical exercise These three mistakes



