School Holiday: 2025 ನವೆಂಬರ್‌ ತಿಂಗಳ ಶಾಲೆ ರಜೆಯ ಪಟ್ಟಿ ಇಲ್ಲಿದೆ ನೋಡಿ

ನವೆಂಬರ್‌ನಲ್ಲಿ ಶಾಲೆಗಳಿಗೆ ಹಲವಾರು ದಿನಗಳವರೆಗೆ ರಜೆ ಇದೆ. ಮಕ್ಕಳು ಶಾಲಾ ರಜೆಗಾಗಿ ಕಾತರದಿಂದ ಕಾಯುತ್ತಿರುತ್ತಾರೆ. ನವೆಂಬರ್‌ 4 ರಂದು ಅನೇಕ ರಾಜ್ಯಗಳಲ್ಲಿ ಶಾಲೆಗಳಿಗೆ ರಜೆ ನೀಡಲಾಗಿತ್ತು. ಇದರ ನಂತರ ಗುರುನಾನಕರ ಜನ್ಮ ದಿನಾಚರಣೆಯನ್ನು ನವೆಂಬರ್‌ 5 ರಂದು ದೇಶಾದ್ಯಂತ ಆಚರಿಸಲಾಗುತ್ತದೆ. ಹಲವು ಕಡೆ ಗುರುನಾನಕ್‌ ಅವರ ಜನ್ಮ ದಿನಾಚರಣೆಯಂದು ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗುವುದು.

ಈ ತಿಂಗಳಿನಲ್ಲಿ ಇನ್ನೂ ಹಲವಾರು ದಿನ ಶಾಲಾ – ಕಾಲೇಜು ರಜೆ ಇರುವುದರಿಂದ ಯಾವ ಯಾವ ದಿನ ನಂವೆಬರ್‌ನಲ್ಲಿ ಶಾಲೆ ರಜೆ ಇರುತ್ತದೆ ಎಂಬುದನ್ನು ಗಮನಿಸೋಣ.

ನವೆಂಬರ್‌ 5 ಶಾಲೆ ರಜೆ?

ಗುರುನಾನಕರ ಜನ್ಮ ದಿನದ ಪ್ರಯುಕ್ತ ನವೆಂಬರ್‌ 5 ರಂದು ಹಲವೆಡೆ ರಜೆ ನೀಡಲಾಗುತ್ತದೆ. ಇದಲ್ಲದೇ ನವೆಂಬರ್‌ 9, ನವೆಂಬರ್‌ 16, ನವೆಂಬರ್‌ 23 ಮತ್ತು ನವೆಂಬರ್‌ 30 ಭಾನುವಾರ ಬಂದಿರುವುದರಿಂದ ಶಾಲಾ ಕಾಲೇಜುಗಳಿಗೆ ರಜೆ ಇರುತ್ತದೆ.

ನವೆಂಬರ್‌ 4 ರಂದು ಹವಾಮಾನ ಇಲಾಖೆಯು ಮಳೆಯ ಕಾರಣ ಆಂಧ್ರಪ್ರದೇಶ, ಒಡಿಶಾ, ತೆಲಂಗಾಣ ಮತ್ತು ತಮಿಳುನಾಡಿನಂತಹ ರಾಜ್ಯಗಳಲ್ಲಿ ಶಾಲೆಗಳಿಗೆ ಅಧಿಕೃತ ರಜೆ ಘೋಷಿಸಿತ್ತು.

ಕೆಟ್ಟ ಹವಾಮಾನದಿಂದಾಗಿ ಕೆಲವೇ ರಾಜ್ಯಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಯಿತು. ಮೋಥಾ ಚಂಡಮಾರುತದ ಕಾರಣ ಶಾಲೆಗಳಿಗೆ ರಜೆ ನೀಡಲಾಗಿತ್ತು.

ನವೆಂಬರ್‌ 2025 ರ ರಜಾದಿನದ ಪಟ್ಟಿ :

ನವೆಂಬರ್‌ 5 – ಗುರುನಾನಕ್ ಜಯಂತಿ

ನವೆಂಬರ್‌ 8 – ಎರಡನೇ ಶನಿವಾರ (ಕೆಲವು ಶಾಲೆಗಳಿ ರಜೆ ನೀಡಲಾಗುತ್ತದೆ)

ನವೆಂಬರ್‌ 9 – ವಾರದ ರಜೆ

ನವೆಂಬರ್‌ 14 – ಮಕ್ಕಳ ದಿನಾಚರಣೆ

ನವೆಂಬರ್‌ 16 – ವಾರದ ರಜೆ

ನವೆಂಬರ್‌ 23 – ವಾರದ ರಜೆ

ನವೆಂಬರ್‌ 24 – ಗುರು ತೇಜ ಬಹದ್ದೂರ್‌ ಹುತಾತ್ಮ ದಿನ (ಕೆಲವು ಶಾಲೆಗಳಿಗೆ ರಜೆ)

ನವೆಂಬರ್‌ 30 – ವಾರದ ರಜೆ

ಗುರುನಾನಕ್ ಜಯಂತಿ – ಸಿಖ್‌ ಧರ್ಮದ ಸ್ಥಾಪಕ ಗುರನಾಕ್‌ ಅವರು ಹುಟ್ಟಿದ ದಿನವನ್ನು ಗೌರವಾರ್ಥವಾಗಿ ಗುರುನಾನಕ್ ಜಯಂತಿ ಎಂದು ಆಚರಿಸಲಾಗುತ್ತದೆ.

ಮಕ್ಕಳ ದಿನ – ನವೆಂಬರ್‌ 14 ಪಂಡಿತ್‌ ಜವಹರ್‌ಲಾಲ್‌ ನೆಹರು ಅವರ ಜನ್ಮ ದಿನಾಚರಣೆ. ಅವರಿಗಿದ್ದ ಮಕ್ಕಳ ಮೇಲಿನ ಪ್ರೀತಿಯಿಂದಾಗಿ ಅವರ ಜನ್ಮದಿನದಂದು ಮಕ್ಕಳ ದಿನಾಯಚರಣೆಯನ್ನು ಆಚರಿಸಲಾಗುತ್ತದೆ.

ಇನ್ನು ಕೆಲವು ಶಾಲೆಗಳಲ್ಲಿ ಈ ರೀತಿಯ ಪಟ್ಟಿಯ ಕ್ರಮದಂತೆ ರಜೆ ನೀಡಲಾಗುತ್ತದೆ. ಇನ್ನು ಕೆಲವೆಡೆ ರಜೆ ಇರುವುದಿಲ್ಲ. ನಿಖರ ಮಾಹಿತಿಗಾಗಿ ನಿಮ್ಮ ಶಾಲಾ / ಕಾಲೇಜಿನ ಆಡಳಿತ ಮಂಡಳಿಯನ್ನು ಸಂಪರ್ಕಿಸುವುದು ಉತ್ತಮ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories