ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಎಲ್‌ಬಿಒ ನೇಮಕಾತಿ: ಪದವೀಧರರು ಇಂದೇ ಅರ್ಜಿ ಸಲ್ಲಿಸಿ
PNB LBO Recruitment 2025: ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) JMGS – I ನೇ ದರ್ಜೆಯ ಅಡಿಯಲ್ಲಿ ಸ್ಥಳೀಯ ಬ್ಯಾಂಕ್ ಅಧಿಕಾರಿ (LBO) ಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಅಧಿಕೃತವಾಗಿ ಘೋಷಿಸಿದೆ.
ಈ ಅಧಿಸೂಚನೆಯ ಪ್ರಕಾರ ಭಾರತದಾದ್ಯಂತ ಒಟ್ಟು 750 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ನವೆಂಬರ್ 3 ರಿಂದ ಪ್ರಾರಂಭವಾಗಿದೆ.
ಆಸಕ್ತ ಅರ್ಹ ಅಭ್ಯರ್ಥಿಗಳು ನವೆಂಬರ್ 23 ರ ಒಳಗೆ ಪಿಎನ್‌ಬಿಯ ಅಧಿಕೃತ ವೆಬ್‌ಸೈಟ್‌ಗೆ ತೆರಳಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗೆ ಅಗತ್ಯವಿರುವ ಅರ್ಹತಾ ಮಾನದಂಡಗಳೇನು ಎಂದು ತಿಳಿಯೋಣ.
ಹುದ್ದೆಯ ಹೆಸರು
ಲೋಕಲ್ ಬ್ಯಾಂಕ್ ಆಫೀಸರ್ (LBO)
ಒಟ್ಟು ಹುದ್ದೆಗಳು
ಈ ನೇಮಕಾತಿ ಮೂಲಕ ಪಿಎನ್‌ಬಿಯು ಒಟ್ಟು 750 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಿದೆ.
ವಯೋಮಿತಿ
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 20 ವರ್ಷಗಳು ಹಾಗೂ ಗರಿಷ್ಠ ವಯಸ್ಸು 30 ವರ್ಷಗಳು. ಮೀಸಲು ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆಯಿರುತ್ತದೆ.
ಶೈಕ್ಷಣಿಕ ಅರ್ಹತೆ
ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.
ಜೊತೆಗೆ ಅರ್ಜಿ ಸಲ್ಲಿಸುತ್ತಿರುವ ಪ್ರದೇಶದ ಸ್ಥಳೀಯ ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು. ಕನಿಷ್ಠ ಒಂದು ವರ್ಷದ ಅನುಭವವಿರಬೇಕು.
ಇದನ್ನೂ ಓದಿ: ಡಿಪ್ಲೊಮಾ ಆದವರಿಗೆ ಗುಡ್ ನ್ಯೂಸ್! ರೈಲ್ವೆ ಇಲಾಖೆಯಲ್ಲಿ ಜೂನಿಯರ್ ಎಂಜಿನಿಯರ್ ಆಗುವ ಸುವರ್ಣಾವಕಾಶ
ಅರ್ಜಿ ಶುಲ್ಕ
ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳು 1,180 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಆದರೆ ಎಸ್‌ಸಿ, ಎಸ್‌ಟಿ ಮತ್ತು ದಿವ್ಯಾಂಗ ವರ್ಗಗಳ ಅಭ್ಯರ್ಥಿಗಳು 59 ರೂ. ಪಾವತಿಸಬೇಕಾಗುತ್ತದೆ.
ಪಿಎನ್‌ಬಿ ಎಲ್‌ಬಿಒ ನೇಮಕಾತಿ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ.
ಅರ್ಜಿ ಸಲ್ಲಿಕೆ ಹೇಗೆ?
ಎಲ್‌ಬಿಒ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮೊದಲಿಗೆ ಪಿಎನ್‌ಬಿ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.
ನಂತರ ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್ ನೀಡಿ ಹೆಸರನ್ನು ನೋಂದಾಯಿಸಿಕೊಂಡು ಲಾಗಿನ್ ಆಗಿ.
ಬಳಿಕ ಎಚ್ಚರಿಕೆಯಿಂದ ಅರ್ಜಿ ನಮೂನೆಯನ್ನು ಭರ್ತಿ ಮಾಡಿ. ಅಗತ್ಯವಿರುವ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
ಇದಾದ ಮೇಲೆ ನಿಮಗೆ ಅನ್ವಯವಾಗುವ ಅರ್ಜಿ ಶುಲ್ಕವನ್ನು ಪಾವತಿಸಿ.
ಇನ್ನೊಮ್ಮೆ ಅರ್ಜಿಯನ್ನು ಸಂಪೂರ್ಣವಾಗಿ ಓದಿ, ಅರ್ಜಿಯನ್ನು ಸಲ್ಲಿಸಿ.
ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿಯ ಧೃಡೀಕರಣ ಪುಟವನ್ನು ಪ್ರಿಂಟ್‌ಔಟ್ ತೆಗೆದುಕೊಳ್ಳಿ.
ಇದನ್ನೂ ಓದಿ: ಎಸ್‌ಬಿಐನಲ್ಲಿ ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಆಗುವ ಸುವರ್ಣಾವಕಾಶ: ನವೆಂಬರ್ 17 ರ ಒಳಗೆ ಅರ್ಜಿ ಸಲ್ಲಿಸಿ



