RCB SOLD : 17000 ಕೋಟಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇಲ್

RCB SOLD : ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕನ್ನಡಿಗರ ನೆಚ್ಚಿನ ತಂಡವಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇನ್ಮುಂದೆ ಕನ್ನಡಿಗರ ತಂಡವಾಗಿ ಇರೋದಿಲ್ಲ.
ಆರ್‌ಸಿಬಿ ತಂಡವನ್ನು ಸೇಲ್ ಮಾಡೋದಕ್ಕೆ ವಿಜಯ್ ಮಲ್ಯ ಮಾಲೀಕತ್ವದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಮುಂದಾಗಿದೆ. ಮುಂಬೈ ಶೇರು ಮಾರುಕಟ್ಟೆಯಲ್ಲಿ ತಂಡವನ್ನು ಮಾರಾಟ ಅಥವಾ ಹೂಡಿಕೆಗೆ ಅವಕಾಶ ನೀಡುವುದಾಗಿ ಘೋಷಿಸಿದೆ.
2026ರ ಮಾರ್ಚ್31ರ ಒಳಗಾಗಿ ಆರ್‌ಸಿಬಿ ತಂಡದ ಮಾರಾಟದ ಪ್ರಕ್ರಿಯೆಗಳು ಪೂರ್ಣಗೊಳ್ಳಲಿದೆ. ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಜೊತೆಗೆ ಆರ್‌ಸಿಬಿ ತಂಡದ ಮಾಲೀಕತ್ವ ಹೊಂದಿರುವ ಡೈನಿಯೋ ಕಂಪೆನಿ ಆರ್‌ಸಿಜಿ ಪ್ರಾಂಚೈಸಿಗೆ ಸುಮಾರು 2 ಬಿಲಿಯನ್ ಡಾಲರ್ ಬೆಲೆಯನ್ನು ನಿಗದಿ ಮಾಡಿದೆ.
ಅಂದ್ರೆ ಬರೋಬ್ಬರಿ 17,762 ಕೋಟಿ ರೂಪಾಯಿಗೆ ಆರ್‌ಸಿಬಿ ಸೇಲ್ ಆಗಲಿದ್ದು, ಒಂದೊಮ್ಮೆ ಆರ್‌ಸಿಬಿ ಮಾರಾಟವಾದ್ರೆ ಐಪಿಎಲ್ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ಮೊತ್ತಕ್ಕೆ ಸೇಲ್ ಆದ ತಂಡ ಎನಿಸಿಕೊಳ್ಳಲಿದೆ.
Also Read : ರಾಹುಲ್ ದ್ರಾವಿಡ್ ಪುತ್ರ ಅನ್ವಯ್ ದ್ರಾವಿಡ್ ಭಾರತ ತಂಡಕ್ಕೆ ಆಯ್ಕೆ
ಆರ್‌ಸಿಬಿ ತಂಡವನ್ನು ಖರೀದಿಸಲು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಅದರ್ ಪೂನವಾಲಾ, JSW ಗ್ರೂಪ್‌ನ ಜಿಂದಾಲ್ ಜೊತೆಗೆ ಅದಾನಿ ಗ್ರೂಪ್ ಮಾತ್ರವಲ್ಲದೇ ಕೆಲವು ಅಂತರಾಷ್ಟ್ರೀಯ ಕಂಪೆನಿಗಳು ಮುಂದೆ ಬಂದಿವೆ.
2008ರಲ್ಲಿ ವಿಜಯ್ ಮಲ್ಯ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 112 ಮಿಲಿಯನ್ ಡಾಲರ್ ಅಂದ್ರೆ 476 ಕೋಟಿ ರೂಪಾಯಿ ತಂಡ ಖರೀದಿಸಿದ್ದರು. ಚೊಚ್ಚಲ ಬಾರಿಗೆ ಐಪಿಎಲ್ ಟ್ರೋಫಿಯಲ್ಲಿ ಗೆಲುವು ಸಾಧಿಸುತ್ತಲೇ ಆರ್‌ಸಿಬಿ ಬ್ರ್ಯಾಂಡ್ ಮೌಲ್ಯದಲ್ಲಿ ಬಾರೀ ಏರಿಕೆ ಕಂಡು ಬಂದಿದೆ.
Also Read : ಐಪಿಎಲ್ ನಲ್ಲಿ ಮಹತ್ವದ ಬದಲಾವಣೆ : ಅಭಿಮಾನಿಗಳಿಗೆ ಗುಡ್ ನ್ಯೂಸ್
ಇಂಡಿಯನ್ ಪ್ರೀಮಿಯರ್ ಲೀಗ್ ಅತ್ಯಂತ ಲಾಭದಾಯಕ ಕ್ರೀಡಾ ಸಂಸ್ಥೆಯಾಗಿ ಬೆಳೆದು ನಿಂತಿದೆ. ಮದ್ಯದ ದೊರೆ ವಿಜಯ್ ಮಲ್ಯ ಸಾವಿರಾರು ಕೋಟಿ ರೂಪಾಯಿ ಲಾಭ ಮಾಡಿಕೊಂಡ್ರೆ, ಇತ್ತ ತಂಡ ಸೇಲ್ ಆಗ್ತಾ ಇರೋದ್ರಿಂದಾಗಿ ಕನ್ನಡಿಗರು ನಿರಾಸೆಗೆ ಒಳಗಾಗಿದ್ದಾರೆ.
RCB Royal Challengers Bangalore sold for 17000 crores



