Anvay Dravid : ರಾಹುಲ್​ ದ್ರಾವಿಡ್​ ಪುತ್ರ ಅನ್ವಯ್​ ದ್ರಾವಿಡ್ ಭಾರತ ತಂಡಕ್ಕೆ ಆಯ್ಕೆ

Anvay Dravid : ಕ್ರಿಕೆಟ್​ ಲೋಕದಲ್ಲಿ ‘‘ದಿ ವಾಲ್​’’ ಎಂದೇ ಖ್ಯಾತಿ ಪಡೆದ ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಮಾಜಿ ಮುಖ್ಯ ಕೋಚ್​ ರಾಹುಲ್​ ದ್ರಾವಿಡ್​ ಅವರ ಆಟದ ವೈಖರಿ ಎಂದರೆ ಇಂದಿಗೂ ಕ್ರಿಕೆಟ್ ಅಭಿಮಾನಿಗಳ ಮೊಗದಲ್ಲಿ ಮಂದಹಾಸ ಮೂಡುತ್ತದೆ.

ಇದೀಗ ರಾಹುಲ್​ ದ್ರಾವಿಡ್​ ಅವರ ಪುತ್ರ ಕೂಡ ಇದೇ ಮಾರ್ಗದಲ್ಲಿ ಸಾಗುವ ಲಕ್ಷಣ ಕಾಣುತ್ತಿದೆ. ಹೌದು..! ದ್ರಾವಿಡ್​ರ ಕಿರಿಯ ಪುತ್ರ ಅನ್ವಯ್​ ದ್ರಾವಿಡ್​​ ಭಾರತ ಅಂಡರ್​ 19 ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದರು .

ಕರ್ನಾಟಕ ರಾಜ್ಯ ಕ್ರಿಕೆಟ್​ ಅಸೋಸಿಯೇಷನ್​​ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅನ್ವಯ್​ ದ್ರಾವಿಡ್​ರನ್ನು ಸನ್ಮಾನಿಸಲಾಗಿತ್ತು. ಕರ್ನಾಟಕ ಕ್ರಿಕೆಟ್​​ ತಂಡದ ನಾಯಕರಾಗಿದ್ದ ಅನ್ವಯ್​ ಇದೀಗ ಭಾರತದ ತಂಡದಲ್ಲಿ ಆಡುವ ಅರ್ಹತೆ ಪಡೆದುಕೊಂಡಿದ್ದಾರೆ.

ಹೈದರಾಬಾದ್​ನಲ್ಲಿ ನಡೆಯಲಿರುವ ಅಂಡರ್​ 19 ಏಕದಿನ ಚಾಲೆಂಜರ್​ ಟ್ರೋಫಿ ಪಂದ್ಯಾವಳಿಯಲ್ಲಿ ಅನ್ವಯ್​ ದ್ರಾವಿಡ್​ ಭಾರತ ತಂಡದಿಂದ ಆಟಲಿದ್ದಾರೆ. ನಾಲ್ಕು ತಂಡಗಳ ನಡುವೆ ಈ ಪಂದ್ಯಾವಳಿ ನಡೆಯಲಿದ್ದು ಅನ್ವಯ್​ ಸಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ : ಐಪಿಎಲ್‌ನಲ್ಲಿ ಬಿಸಿಸಿಐ ಮಹತ್ವದ ಬದಲಾವಣೆ : ಅಭಿಮಾನಿಗಳಿಗೆ ಗುಡ್‌ ನ್ಯೂಸ್‌

ಆಕ್ರಮಣಕಾರಿ ಬ್ಯಾಟಿಂಗ್ ಹಾಗೂ ವಿಕೇಟ್​ ಕೀಪಿಂಗ್​ ಅನ್ವಯ್​ ಅವರ ಬಲವಾಗಿದೆ. ಅಗ್ರ ಕ್ರಮಾಂಕದ ಬ್ಯಾಟ್ಸಮನ್​ ಆಗಿರುವ ಅನ್ವಯ್​ ದ್ರಾವಿಡ್​ ಈ ಪಂದ್ಯಾವಳಿಗಳಲ್ಲಿ ಯಾವ ರೀತಿ ಪ್ರದರ್ಶನ ನೀಡಬಹುದು ಎಂಬ ಕುತೂಹಲ ಎಲ್ಲರಲ್ಲಿ ಮನೆ ಮಾಡಿದೆ.

ನವೆಂಬರ್​ 5ರಿಂದ ಈ ಪಂದ್ಯಾವಳಿ ಆರಂಭಗೊಳ್ಳಲಿದ್ದು 11ರವರೆಗೂ ಇರಲಿದೆ. ಶುಕ್ರವಾರದಂದು ಅನ್ವಯ್​ ಸ್ಥಾನ ಪಡೆದಿರುವ ಸಿ ತಂಡವು ವೇದಾಂತ್​ ತ್ರಿವೇದಿ ನಾಯಕತ್ವದ ಬಿ ತಂಡದ ವಿರುದ್ಧ ಸೆಣೆಸಲಿದೆ. ಅನ್ವಯ್​ ದ್ರಾವಿಡ್​​ ಆಡುತ್ತಿರುವ ಸಿ ತಂಡಕ್ಕೆ ಆರನ್​ ಜಾರ್ಜ್ ನಾಯಕ ಹಾಗೂ ಆರ್ಯನ್​ ಯಾದವ್​ ಉಪನಾಯಕರಾಗಿ ಅಯ್ಕೆಯಾಗಿದ್ದಾರೆ.

ಇದನ್ನೂ ಓದಿ : ಕಾಪು ಮಾರಿಯಮ್ ದೇಗುಲಕ್ಕೆ ಕ್ರಿಕೆಟಿಗ ಸೂರ್ಯಕುಮಾರ್‌ ಯಾದವ್‌ ಪತ್ನಿ ದೇವಿಶಾ ಭೇಟಿ

Rahul Dravid son Anvay Dravid was selected for the Indian team

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories