ಆಪರೇಷನ್ ಬಿಪಿಎಲ್ ಸಕ್ಸಸ್… 4.09 ಲಕ್ಷ ಕುಟುಂಬಗಳಿಗೆ ಬಿಪಿಎಲ್ ರದ್ದು
Operation BPL Card: ಬಡವರಿಗೆ ಪಡಿತರ ಪೂರೈಕೆಯಲ್ಲಿ ಹಾಗೂ ಸಮಾಜದಲ್ಲಿ ಜೀವನ ನಡೆಸಲು ಅನಾನುಕೂಲವಾಗಬಾರದು ಎಂಬ ನಿಟ್ಟಿನಲ್ಲಿ ನಡೆಸಲಾಗುತ್ತಿರುವ ಬಿಪಿಎಲ್ ಕಾರ್ಡ್ಗಳನ್ನು ದುರುಪಯೋಗ ಪಡೆದುಕೊಳ್ಳುತ್ತಿರುವ ಅನೇಕರು ನಮ್ಮ ನಡುವೆ ಇದ್ದಾರೆ.
ಬಡವರು ಬಿಪಿಎಲ್ ಹೊಂದಿರುವುದಕ್ಕಿಂತಲೂ ಹೆಚ್ಚಾಗಿ ಎಲ್ಲಾ ಸವಲತ್ತುಗಳಿದ್ದೂ ಸರ್ಕಾರದ ಸೌಲಭ್ಯಗಳನ್ನು ಪಡೆಯುವ ಸಲುವಾಗಿ ಅನರ್ಹತೆ ಹೊಂದಿದ್ದರೂ ಬಿಪಿಎಲ್ ಕಾರ್ಡ್ಗಳನ್ನು ಅನೇಕ ಕುಟುಂಬಗಳು ಹೊಂದಿವೆ.
ಈ ಸಂಬಂದ ಆಪರೇಷನ್ ಬಿಪಿಎಲ್ (Operation BPL Card) ನಡೆಸಿದ ರಾಜ್ಯ ಸರ್ಕಾರವು ರಾಜ್ಯಾದ್ಯಂತ 4.09 ಲಕ್ಷ ಬಿಪಿಎಲ್ ಕಾರ್ಡ್ಗಳನ್ನು ರದ್ದುಗೊಳಿಸಿದೆ.
ತೆರಿಗೆ ಪಾವತಿ, ಕೃಷಿ ಭೂಮಿಗಳನ್ನು ಹೊಂದಿದ್ದರೂ ಸಹ ಬಿಪಿಎಲ್ ಕಾರ್ಡ್ಗಳನ್ನು ಹೊಂದಿದ್ದ ನಾಗರಿಕರನ್ನು ಅನರ್ಹರೆಂದು ಪರಿಗಣಿಸಿ ಅವರ ಪಡಿತರ ಚೀಟಿಯನ್ನು ಎಪಿಎಲ್ ಕಾರ್ಡ್ಗಳನ್ನಾಗಿ ಅಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪರಿವರ್ತಿಸಿದೆ.
ಬಿಪಿಎಲ್ ಕಾರ್ಡ್ ಮೂಲಕ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದ ಲಕ್ಷಾಂತರ ಕುಟುಂಬಗಳು ಸರ್ಕಾರದ ಈ ಕ್ರಮದಿಂದ ನಿರಾಶೆಗೆ ಒಳಗಾಗಿವೆ. ಆದರೆ ಸರ್ಕಾರದ ಈ ಕಾರ್ಯಾಚರಣೆಯಿಂದ ಒಳ್ಳೆಯ ಲಾಭ ಪಡೆದುಕೊಂಡಿದೆ.
ಇದನ್ನೂ ಓದಿ: ಪಡಿತರ ಕಾರ್ಡ್ ತಿದ್ದುಪಡಿಗೆ ಮತ್ತೆ ಅವಕಾಶ
ಸರ್ಕಾರದ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿದ ಆಹಾರ ಮತ್ತು ನಾಗರಿಕ ಪೂರೈಕೆ ಸರಬರಾಜು ಇಲಾಖೆಯು ಹಲವು ಮಾನದಂಡಗಳನ್ನು ಪರಿಗಣಿಸಿ 4 ಲಕ್ಷಕ್ಕೂ ಅಧಿಕ ಕುಟುಂಬಗಳನ್ನು ಅನರ್ಹ ಎಂದು ಗುರುತಿಸಿದೆ.
ಕಾರ್ಯಾಚರಣೆಯ ಸಂದರ್ಭದಲ್ಲಿ ಪಡಿತರಕ್ಕಿಂತ ಹೆಚ್ಚಾಗಿ ಜನರು ವೈದ್ಯಕೀಯ ಚಿಕಿತ್ಸಾ ಸೌಲಭ್ಯಗಳನ್ನು ಪಡೆಯಲು ಬಿಪಿಎಲ್ ಕಾರ್ಡ್ ಹೊಂದಿದ್ದರು ಎಂದು ತಿಳಿದು ಬಂದಿದೆ.
ಇನ್ನು ಸರ್ಕಾರಕ್ಕೆ ವಂಚಿಸಿ ಎಪಿಎಲ್ ಅರ್ಹತೆ ಹೊಂದಿದ್ದರೂ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಭಾರೀ ಮೊತ್ತದ ದಂಡ ವಿಧಿಸಲು ಸರ್ಕಾರ ಪ್ಲಾನ್ ಮಾಡಿಕೊಂಡಿದೆ ಎನ್ನಲಾಗಿದೆ.
ಇದನ್ನೂ ಓದಿ: ಅವಿವಾಹಿತರಿಗೆ ಗುಡ್ನ್ಯೂಸ್ : ಸರಳ ಸಾಮೂಹಿಕ ವಿವಾಹ ಯೋಜನೆಯಡಿ ಸಿಗಲಿದೆ 50 ಸಾವಿರ ರೂಪಾಯಿ
ಶೀಘ್ರದಲ್ಲಿಯೇ ಇದಕ್ಕಾಗಿ ಹೊಸ ನೀತಿ ಕೂಡ ಜಾರಿಗೆ ಬರಲಿದ್ದು ಈ ಬಗ್ಗೆ ನಿಯಮಾವಳಿಗಳನ್ನು ನಿಗದಿಪಡಿಸಲು ರಾಜ್ಯ ನಾಗರಿಕ ಮತ್ತು ಆಹಾರ ಸರಬರಾಜು ಪೂರೈಕೆ ಇಲಾಖೆ ಚಿಂತನೆ ನಡೆಸಿದೆ



