ಅಮೃತವರ್ಷಿಣಿ ನಟಿ ರಜಿನಿ ಹಾಗೂ ಟ್ರೈನರ್ ಅರುಣ್‌ ಮದುವೆ: ಹೊಸ ಬಾಳಿಗೆ ಕಾಲಿಟ್ಟ ಜೋಡಿ!

ಕಿರುತೆರೆ ನಟಿ ರಜಿನಿ ಅವರು 2025 ನವೆಂಬರ್‌ 10 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜಿಮ್‌ ಟ್ರೈನರ್‌ ಅರುಣ್‌ ಜೊತೆ ನಟಿ ರಜಿನಿ ಇಂದು ಬೆಳಿಗ್ಗೆ ವಿವಾಹವಾಗಿದ್ದಾರೆ. ಬೆಂಗಳೂರಿನಲ್ಲಿ ಮದುವೆ ನಡೆದಿದೆ ಎಂದು ಮಾಹಿತಿ ತಿಳಿದು ಬಂದಿದೆ.

ಸೋಶಿಯಲ್‌ ಮೀಡಿಯಾದಲ್ಲಿ ಜಿಮ್‌ ಟ್ರೈನರ್‌ ಅರುಣ್‌, ನಟಿ ರಜಿನಿಗೆ ತಾಳಿ ಕಟ್ಟುತ್ತಿರುವ ದೃಶ್ಯ ಓಡಾಡುತ್ತಿದೆ. ಈ ಹಿಂದೆ ರಿಜಿನಿ ಅರುಣ್‌ ಜೊತೆಗೆ ರೀಲ್‌ ಮಾಡುವ ಮೂಲಕ ಸೋಶಿಲ್‌ ಮೀಡಿಯಾದಲ್ಲಿ ಫುಲ್‌ ಆಕ್ಟೀವ್‌ ಆಗಿದ್ದರು. ಇದನ್ನು ಕಂಡು ಹಲವರ ಮನಸ್ಸಿನಲ್ಲಿ ಇಬ್ಬರೂ ಜೋಡಿಗಳಾಗಿರಬೇಕು ಎಂಬ ಕುತೂಹಲ ಕೂಡಾ ಮೂಡಿ ಬಂದಿತ್ತು. ಇದೀಗ ಅವರಿಬ್ಬರೂ ಆ ಕುತೂಹಲಕ್ಕೆ ನಾಂದಿ ಹಾಡಿದ್ದಾರೆ.

ಇದನ್ನೂ ಓದಿ: ಉಗ್ರಂ ಮಂಜು ಬಾಳಿಗೆ ಕಾಲಿಟ್ಟ ಸಂಧ್ಯಾ

ಈ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿರುವ ರಜಿನಿ ಮತ್ತು ಅರುಣ್, ತಮ್ಮ ಆಪ್ತರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ಹಸೆಮಣೆ ಏರಿದ್ದಾರೆ. ಮದುವೆ ಶಾಸ್ತ್ರಗಳು ಸಾಂಪ್ರದಾಯಿಕವಾಗಿ ನಡೆದಿದ್ದು, ನವ ದಂಪತಿಯ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಕನ್ನಡದ ಪ್ರಸಿದ್ಧ ಧಾರವಾಹಿಯಲ್ಲೊಂದಾಗಿದ್ದ ಅಮೃತವರ್ಷಿಣಿಯಲ್ಲಿ ರಜಿನಿ ನಟಿಸಿದ್ದರು. ನಂತರ ಹಿಟ್ಲರ್‌ ಕಲ್ಯಾಣ ಧಾರವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.   ಇದೀಗ ನೀ ಇರಲು ಜೊತೆಯಲಿ ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ.

 ಈ ಹಿಂದೆ ಮದುವೆಯ ಬಗ್ಗೆ ಮಾತನಾಡುವಾಗ, ಜಿಮ್‌ ಟ್ರೈನರ್‌ ಅರುಣ್‌ ಮತ್ತು ಅವರ ರಿಲೇಶನ್‌ಶಿಪ್‌ ಬಗೆಗಿನ ಪ್ರಶ್ನೆಗಳಿಗೆ ಉತ್ತರಿಸಿದ್ದ ನಟಿ ರಜಿನಿ, ʼಅರುಣ್‌ ನನ್ನ ಪಾರ್ಟನರ್‌ ಅಷ್ಟೆ, ಅವರ ಜೊತೆ ನನ್ನ ಮದುವೆ ಆಗಿಲ್ಲ. ನಾವಿಬ್ಬರೂ ಒಳ್ಳೆಯ ಸ್ನೇಹಿತರು. ಮದುವೆ ಆದರೂ ತಪ್ಪೇನಿಲ್ಲ. ಅಂದುಕೊಳ್ಳುವುದೆಲ್ಲ ಅವರವರಿಗೆ ಬಿಟ್ಟದ್ದುʼ ಎಂದು ಉತ್ತರಿಸಿದ್ದರು.  

ಕಿರುತೆರೆ ಮತ್ತು ಚಿತ್ರರಂಗದ ಹಲವು ಗಣ್ಯರು ಈ ಹೊಸ ಜೋಡಿಗೆ ಶುಭ ಹಾರೈಸಿದ್ದಾರೆ. ರೀಲ್ಸ್ ಪಾರ್ಟ್‌ನರ್‌ ಆಗಿದ್ದವರು ಈಗ ಲೈಫ್ ಪಾರ್ಟ್‌ನರ್‌ ಆಗಿ ಬದಲಾಗಿರುವುದು ಅವರ ಅಭಿಮಾನಿಗಳಿಗೆ ಸಂತಸ ತಂದಿದೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories