ಗಿಲ್ಲಿ-ರಕ್ಷಿತಾಗೆ ಟಾಂಟ್ ಮಾಡಿದ ಧ್ರುವಂತ್ ಮೇಲೆ ನೆಟ್ಟಿಗರ ಆಕ್ರೋಶ!
ಕಲರ್ಸ್ ಕನ್ನಡಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಶೋ ಬಗ್ಗೆ ಸದ್ಯ ಜನರ ಟಾಕ್ ಹೆಚ್ಚಾಗಿದೆ. ಅದರಲ್ಲೂ ಧ್ರುವಂತ್ ಬಗ್ಗೆ ಪ್ರೇಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೌದು ಧಾರಾವಾಹಿ ನಟ ಧ್ರುವಂತ್ ಬಿಗ್ ಬಾಸ್‍ಗೆ ಬಂದಾಗಿನಿಂದ ಅಷ್ಟೊಂದು ಏನು ಚೆನ್ನಾಗಿ ಆಡಿಲ್ಲ ಅನ್ನುವುದು ಅಭಿಮಾನಿಗಳ ಅಭಿಪ್ರಾಯ. ಮಲ್ಲಮ್ಮ ಎಂದು ಕಾರ್ಡ್ ಯೂಸ್ ಮಾಡಿ ಇಷ್ಟು ದಿನ ಇದ್ರು. ಈಗ ಅವರಿವರ ಮೇಲೆ ಅಪವಾದ ಮಾಡಿ ಕ್ಯಾಮೆರಾಗೆ ಪೋಸ್ ಕೊಡ್ತಾ ಇದ್ದಾರೆ ಎಂದು ಜನ ಹೇಳ್ತಾ ಇದ್ದಾರೆ. ಅದರಲ್ಲೂ ರಕ್ಷಿತಾ ಅವರನ್ನು ಅಣಕಿಸಿದ್ದು ಜನರಿಗೆ ಇಷ್ಟ ಆಗಿಲ್ಲ.
ನಿಮಗೆ ಗೊತ್ತುಂಟಾ?
ಈ ಮನೆಯಲ್ಲಿ ಯಾರು ವಿಷಕಾರಿ ಎಂದು ಅವರಿಗೆ ಒಂದು ಮೆಣಸಿನಕಾಯಿ ತಿನ್ನಲು ಕೊಡಬೇಕಾಗಿರುತ್ತೆ. ಆಗ ಮಾಳು ಅವರು ಧ್ರುವಂತ್ ಅವರಿಗೆ ಕೊಟ್ಟು, ನೀವು ರಕ್ಷಿತಾ ವಿರುದ್ಧ ನಿಂತಿದ್ದೀರಿ ಎಂದು ಹೇಳ್ತಾರೆ. ಅದಕ್ಕೆ ಧ್ರುವಂತ್ ನಾನು ಮಂಗಳೂರಿನವ. ಯಾರು ಈ ರೀತಿ ಮಾಡಲ್ಲ. ನಿಮಗೆ ಗೊತ್ತುಂಟಾ ಗಾಯ್ಸ್ ಎಂದು ನಾಟಕವಾಡ್ತಾರೆ ಎಂದಿದ್ದಾರೆ.
ಗಿಲ್ಲಿಗೂ ಟಾಂಟ್
ನೀನು ಬನಿಯನ್ ಹಾಕಿಕೊಂಡು ನಾಟಕ ಮಾಡಿದ್ರೆ ಇಲ್ಲಿ ಯಾರೂ ನಂಬಲ್ಲ. ನಿನ್ನ ತಮಾಷೆ ಮಿತಿ ಮೀರುತ್ತಿದೆ ಎಂದಿದ್ದಾರೆ. ಅದಕ್ಕೆ ಗಿಲ್ಲಿ, ನೀನು ನಿನ್ನ ಜೊತೆ ಇದ್ದವರನ್ನು ಮನೆಗೆ ಕಳಿಸುತ್ತೀಯಾ. ಹೋದ ವಾರ ಮಲ್ಲಮ್ಮ ಹೋದ್ರು. ಈ ವಾರ ಚಂದ್ರಪ್ರಭಾ ಹೋದ್ರು. ಇವರ ಜೊತೆ ಎಚ್ಚರದಿಂದ ಇರಿ ಎಂದು ಗಿಲ್ಲಿ ಮನೆಯವರಿಗೆ ಹೇಳಿದ್ದಾರೆ.
ಧ್ರುವಂತ್ ವಿರುದ್ಧ ಟೀಕೆ
ಇನ್ನು ರಕ್ಷಿತಾಗೆ ಟಾಂಟ್ ಕೊಟ್ಟಿದ್ದಕ್ಕೆ ಜನ ಧ್ರುವಂತ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆ ಚಿಕ್ಕ ಹುಡುಗಿ ಮೇಲೆ ನಿಮ್ಮ ಪೌರುಷ. ಅವರು ಆ ರೀತಿ ಮಾತನಾಡುವುದೇ ನಮಗೆ ಇಷ್ಟ ಎಂದು ಹೇಳಿದ್ದಾರೆ. ಅಲ್ಲದೇ ಮೊದಲು ಅವರನ್ನು ಬಿಗ್ ಮನೆಯಿಂದ ಆಚೆ ಕಳಿಸಿ ಎಂದು ಹೇಳ್ತಾ ಇದ್ದಾರೆ.
ಅಲ್ಲದೇ ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ಎಲ್ಲರಿಗೂ ಟಾರ್ಗೆಟ್ ಆಗಿದ್ದಾರೆ. ಅವರು ಮಾತನಾಡವ ಕನ್ನಡ ಬಗ್ಗೆ ಎಲ್ಲರೂ ನಾಟಕವಾಡ್ತಾಳೆ ಎಂದು ಹೇಳ್ತಾ ಇದ್ದಾರೆ. ರಕ್ಷಿತಾ ಮಾತನಾಡುವುದೇ ಆ ರೀತಿ ಎಂದು ಹೇಳಿದ್ರು ಎಲಲ್ರೂ ಅವರನ್ನೇ ಟಾರ್ಗೆಟ್ ಮಾಡ್ತಾ ಇದ್ದಾರೆ.



