ಆರ್​ಸಿಬಿ ತಂಡದ ಮಾಲೀಕತ್ವ ಹೊಂದಲಿದ್ಯಾ ಹೊಂಬಾಳೆ ಫಿಲ್ಮ್ಸ್​ ?

RCB Hombale Films: ಐಪಿಎಲ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಯಾವ ರೀತಿಯ ಕ್ರೇಜ್​ ಇದೆಯೋ ಅದೇ ರೀತಿ ಸಿನಿಮಾ ರಂಗದಲ್ಲಿ ಹೊಂಬಾಳೆ ಫಿಲ್ಮ್ಸ್​ಗೆ ಇದೆ. ಐಪಿಎಲ್​ನ ಚಿನ್ನದ ಮೊಟ್ಟೆ ಇಡುವ ಕೋಳಿ ಆರ್​ಸಿಬಿಯಾದರೆ, ಚಿತ್ರರಂಗದಲ್ಲಿ ಚಿನ್ನದಂತಾ ಸಿನಿಮಾಗಳನ್ನು ತೆಗೆಯುವ ಸಂಸ್ಥೆ ಹೊಂಬಾಳೆ. ಕಾಂತಾರ ಹಾಗೂ ಕೆಜಿಎಫ್​ ಚಿತ್ರಗಳ ಭರ್ಜರಿ ಯಶಸ್ಸನ್ನು ದಾಖಲಿಸಿರುವ ಹೊಂಬಾಳೆ ಫಿಲ್ಮ್ಸ್​ ಇದೀಗ ಬಾಲಿವುಡ್​ ಅಂಗಳಕ್ಕೂ ಕಾಲಿಟ್ಟಿದೆ. ಈ ಎಲ್ಲದರ ನಡುವೆ ಐಪಿಎಲ್​ ಜಗತ್ತಿಗೂ ಹೊಂಬಾಳೆ ಸಂಸ್ಥೆ ಪಾದಾರ್ಪಣೆ ಮಾಡಲಿದ್ಯಾ ಎಂಬ ಕುತೂಹಲ ಮನೆ ಮಾಡಿದೆ.

ಸದ್ಯ ಆರ್​ಸಿಬಿ ತಂಡವು ಹೊಸ ಮಾಲೀಕನ ಹುಡುಕಾಟದಲ್ಲಿದೆ. ಮೂಲಗಳ ಪ್ರಕಾರ ಈ ರೇಸ್​ನಲ್ಲಿ ಹೊಂಬಾಳೆ ಫಿಲ್ಸಂ ಕೂಡ ಇದೆ ಎಂಬ ಮಾಹಿತಿ ಹೊರಬಿದ್ದಿದೆ. ಸಿನಿಮಾ ಇಂಡಸ್ಟ್ರಿಯಲ್ಲಿ ಗಣನೀಯ ಸಾಧನೆಗೈದು ಗೆಲ್ಲುವ ಕುದುರೆ ಎನಿಸಿರುವ ಹೊಂಬಾಳೆ ಸಂಸ್ಥೆ ಇದೀಗ ಕ್ರಿಕೆಟ್​ ಅಂಗಳಕ್ಕೂ ಕಾಲಿಡುವ ಪ್ರಯತ್ನದಲ್ಲಿದೆ ಎನ್ನಲಾಗಿದೆ.

2026ರ ಮಾರ್ಚ್ 31ರ ಒಳಗೆ ಆರ್​ಸಿಬಿ ತಂಡದ ಮಾಲೀಕ ಯಾರು ಎಂಬುದು ತಿಳಿಯಲಿದೆ. ಈಗಾಗಲೇ ಸಾಕಷ್ಟು ಪ್ರತಿಷ್ಠಿತ ಉದ್ಯಮಿಗಳು ಆರ್​ಸಿಬಿ ಖರೀದಿಗೆ ಮುಗಿಬಿದ್ದಿದ್ದು ಹೊಂಬಾಳೆ ಸಂಸ್ಥೆ ಕೂಡ ಈ ಪಟ್ಟಿಗೆ ಸೇರಿಕೊಂಡಿದೆ.

ಇದನ್ನೂ ಓದಿ: csk retained players 2026 : ಐಪಿಎಲ್‌ 2026 – ಖ್ಯಾತ ಆಟಗಾರರನ್ನೇ ಕೈಬಿಟ್ಟ ಚೆನ್ನೈ ಸೂಪರ್ ಕಿಂಗ್ಸ್

ಅಂದಹಾಗೆ ಆರ್​ಸಿಬಿ ತಂಡದ ಎಲ್ಲಾ ಅಧಿಕೃತ ವಿಡಿಯೋ ನಿರ್ಮಾಣ ಹಾಗೂ ಪ್ರಸಾರದ ಜವಾಬ್ದಾರಿಯನ್ನು ಹೊಂಬಾಳೆ ಸಂಸ್ಥೆಯೇ ನೋಡಿಕೊಳ್ತಿದೆ. ಆರ್​ಸಿಬಿ ತಂಡದ ಆಟಗಾರರಿಗೆ ಹೊಂಬಾಳೆ ಫಿಲ್ಮ್ಸ್​ನಿಂದ ಕಾಂತಾರ ಹಾಗೂ ಕೆಜಿಎಫ್​ -2 ತೋರಿಸಲಾಗಿತ್ತು. ಆರ್​ಸಿಬಿ ತಂಡದ ಸಾಕಷ್ಟು ಪ್ರೊಮೋ ವಿಡಿಯೋಗಳನ್ನು ನಿರ್ಮಿಸಿರುವ ಹೊಂಬಾಳೆ ಇನ್ನು ಆರ್​ಸಿಬಿಯ ಮಾಲೀಕನ ಪಟ್ಟವನ್ನೂ ಅಲಂಕರಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories