ವೈದ್ಯ, ವಕೀಲರಂತೆಯೇ ಇನ್ಮುಂದೆ ಇಂಜಿನಿಯರ್ಸ್ಗೂ ಪರವಾನಿಗೆ ಕಡ್ಡಾಯ ? ಶೀಘ್ರದಲ್ಲೇ ಬರಲಿದೆ ಹೊಸ ಕಾನೂನು
Professional Engineers Bill: ದೇಶದಲ್ಲಿ ಸುಧಾರಿತ ಮಾನದಂಗಳು ಹಾಗೂ ವೃತ್ತಿಪರ ಪಾರದರ್ಶಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಹೊಸ ಕಾನೂನನ್ನು ಪರಿಚಯಿಸಲು ಮುಂದಾಗಿದೆ. ದೇಶದಲ್ಲಿ ಇಂಜಿನಿಯರಿಂಗ್ ವೃತ್ತಿ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ ಇಂಜಿನಿಯರ್ಗಳಿಗೆ ಪರವಾನಿಗೆ ಪಡೆಯುವುದನ್ನು ಕಡ್ಡಾಯಗೊಳಿಸಾಗಿದೆ.
ವೃತ್ತಿಪರ ಇಂಜಿನಿಯರ್ಗಳ ಮಸೂದೆ 2025ರ ಕರಡು ಬಹುತೇಕ ಸಿದ್ಧಗೊಂಡಿದ್ದು ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಇದನ್ನು ಮಂಡಿಸುವ ನಿರೀಕ್ಷೆಯಿದೆ. ಈ ಕಾನೂನಿಂದಾಗಿ ಇಂಜಿನಿಯರ್ಗಳಿಗೆ ರಾಷ್ಟ್ರೀಯ ನೋಂದಣಿ ವ್ಯವಸ್ಥೆ ಜಾರಿಗೆ ಬರಲಿದೆ.
ಐಐಟಿ ಮದ್ರಾಸ್ನ ಮಾಜಿ ನಿರ್ದೇಶಕ ಎಂ.ಎಸ್. ಅನಂತ್ ನೇತೃತ್ವದ ತಜ್ಞರ ಸಮಿತಿಯು ಈ ಕರಡನ್ನು ಸಿದ್ಧಪಡಿಸಿದೆ. ಶೀಘ್ರದಲ್ಲೇ ಎಐಸಿಟಿಇ ಈ ಮಸೂದೆಯನ್ನು ಅಂತಿಮಗೊಳಿಸಲಿದೆ. ಅಲ್ಲದೇ ಸಲಹೆಗಳನ್ನು ಚರ್ಚಿಸುವ ನಿಟ್ಟಿನಲ್ಲಿ ಮುಂದಿನ ವಾರ ಸಭೆ ಕೂಡ ಕರೆಯಲಾಗಿದೆ. ಕರಡು ಸಂಪೂರ್ಣ ಸಿದ್ಧವಾದ ಬಳಿಕ ಶಿಕ್ಷಣ ಸಚಿವಾಲಯವು ಸಂಸತ್ತಿನ ಮುಂದೆ ಇಡಲಿದೆ. ಡಿಸೆಂಬರ್ 1ರಿಂದ 19ನೇ ತಾರೀಖಿನವರೆಗೆ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಈ ಮಸೂದೆ ಮಂಡನೆಯಾಗುವ ನಿರೀಕ್ಷೆಯಿದೆ.
ಇದನ್ನೂ ಓದಿ: Kisan credit card scheme 2025: ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ, ₹5 ಲಕ್ಷದವರೆಗೆ ಸಾಲ ಪಡೆಯಿರಿ!
ಈ ಮಸೂದೆ ದೇಶದಲ್ಲಿ ಜಾರಿಗೆ ಬಂದರೆ ವೈದ್ಯರು,ವಕೀಲರಂತೆಯೇ ಇಂಜಿನಿಯರ್ಗಳಿಗೂ ಭಾರತೀಯ ವೃತ್ತಿಪರ ಇಂಜಿನಿಯರ್ಗಳ ಮಂಡಳಿ ಆರಂಭಗೊಳ್ಳುತ್ತದೆ. ಈ ಮಂಡಳಿಯಲ್ಲಿ 27 ಸದಸ್ಯರು ಇರಲಿದ್ದಾರೆ. ಇದಾದ ಬಳಿಕ ಇಂಜಿನಿಯರ್ಗಳು ಕೆಲಸ ಮಾಡಲು ಪರವಾನಿಗೆ ಪಡೆಯುವುದು ಕಡ್ಡಾಯವಾಗಲಿದೆ. ಶಿಕ್ಷಕ ವೃತ್ತಿಯಲ್ಲಿ ಮುಂದುವರಿಯಲು ಇಚ್ಛಿಸುವ ಇಂಜಿನಿಯರ್ಗಳಿಗೆ ಈ ಪರವಾನಿಗೆ ಅವಶ್ಯಕತೆ ಇರುವುದಿಲ್ಲ.



