ಮಡಿಕೇರಿ : ಭಾರೀ ಮಳೆಯಿಂದ ಉಂಟಾಗಿದ್ದ ಭೂ ಕುಸಿತದಲ್ಲಿ ತಲಕಾವೇರಿಯ ಅರ್ಚಕರ ಕುಟುಂಬ ಭೂ ಸಮಾಧಿಯಾಗಿತ್ತು. ಇದೀಗ ಪರಿಹಾರ ವಿತರಣೆಗೆ ಸಂಬಂಧಿಸಿದಂತೆ ಅರ್ಚಕರ ಕುಟುಂಬದಲ್ಲಿ ವಿವಾದವೊಂದು ಸೃಷ್ಟಿಯಾಗಿದೆ.

ಅಗಸ್ಟ್ 5ರಂದು ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಸಂಭವಿಸಿದ್ದ ಗುಡ್ಡ ಕುಸಿತದಿಂದಾಗಿ ಅರ್ಚಕ ನಾರಾಯಣ್ ಆಚಾರ್ ಸೇರಿದಂತೆ 5 ಮಂದಿ ಭೂ ಸಮಾಧಿಯಾಗಿದ್ದರು.

ಈ ಕುರಿತು ಅರ್ಚಕ ನಾರಾಯಣ್ ಆಚಾರ್ ಹಾಗೂ ಅವರ ಸಹೋದರ ಆನಂದ ತೀರ್ಥ ಸ್ವಾಮೀಜಿ ಅವರಿಗೆ ಪರಿಹಾರದ ಚೆಕ್ ವಿತರಿಸಲಾಗಿದೆ.ಭಾಗಮಂಡಲದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಚೆಕ್ ವಿತರಿಸಿದ್ದರು.

ಅರ್ಚಕ ನಾರಾಯಣ್ ಆಚಾರ್ ಅವರ ಇಬ್ಬರು ಮಕ್ಕಳಾದ ನಮಿತಾ ಹಾಗೂ ಶಾರದಾ ಅವರಿಗೆ ತಲಾ ಎರಡೂವರೆ ಲಕ್ಷ ರೂಪಾಯಿ ಪರಿಹಾರದ ಚೆಕ್ ವಿತರಿಸಲಾಗಿದ್ರೆ, ಅರ್ಚಕರ ಅಣ್ಣ ಆನಂದ ತೀರ್ಥ ಸ್ವಾಮೀಜಿ ಅವರು ಬ್ರಹ್ಮಚಾರಿಯಾಗಿದ್ದರಿಂದಾಗಿ ಅವರ ಪರಿಹಾರದ ಹಣವನ್ನು ಅವರ ತಂಗಿ ಶುಶೀಲಾ ಅವರಿಗೆ ವಿತರಿಸಲಾಗಿತ್ತು.

ಪರಿಹಾರ ಹಂಚಿಕೆಯ ಬೆನ್ನಲ್ಲೇ ಹಂಚಿಕೆಯಾದ ಹಣದಲ್ಲಿ ನಮಗೂ ಶೇ.50ರಷ್ಟು ಪಾಲು ಬರಬೇಕೆಂದು ಅರ್ಚಕ ನಾರಾಯಣ್ ಆಚಾರ್ ಅವರ ಸೋದರತ್ತೆ ಸುಶೀಲಾ ಅವರೊಂದಿಗೆ ಮನಸ್ತಾನ ಶುರುವಾಗಿದೆ. ಇತ್ತ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತ ಪರಿಹಾರ ವಿತರಣೆಯಲ್ಲಾಗಿರುವ ಗೊಂದಲವನ್ನು ಅವರ ಕುಟುಂಬದವರೇ ಪರಿಹಾರ ಮಾಡಿಕೊಳ್ಳಬೇಕೆಂದು ಹೇಳಿದ್ದಾರೆ.