Ind vs sa odi kl rahul : ಕನ್ನಡಿಗ ಕೆಎಲ್‌ ರಾಹುಲ್‌ ಟೀಂ ಇಂಡಿಯಾ ನಾಯಕ

Ind vs sa odi kl rahul : ಬೆಂಗಳೂರು : ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ ಏಕದಿನ ಸರಣಿಗೆ ಬಿಸಿಸಿಐ ಭಾರತೀಯ ಕ್ರಿಕೆಟ್ ತಂಡವನ್ನು ಪ್ರಕಟಿಸಿದೆ. ಈ ತಂಡದ ಪಟ್ಟಿಯಲ್ಲಿ ಕನ್ನಡಿಗ ಕೆ.ಎಲ್​ ರಾಹುಲ್‌ಗೆ ಟೀಂ ಇಂಡಿಯಾ ತಂಡದ ನಾಯಕತ್ವ ನೀಡಲಾಗಿದೆ.

ನವೆಂಬರ್​ 30ರಿಂದ ಆರಂಭಗೊಂಡು ಡಿಸೆಂಬರ್​ 6ರವರೆಗೆ ನಡೆಯಲಿರುವ ಸರಣಿಗೆ ಬಿಸಿಸಿಐ 15 ಆಟಗಾರರ ಪಟ್ಟಿ ಪ್ರಕಟಿಸಿದೆ. ಈ ತಂಡದಲ್ಲಿ ಕೆ.ಎಲ್​ ರಾಹುಲ್​, ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ, ರಿಷಭ್​ ಪಂತ್​, ಯಶಸ್ವಿ ಜೈಸ್ವಾಲ್​, ತಿಲಕ್​ ವರ್ಮಾ, ವಾಷಿಂಗ್ಟನ್​ ಸುಂದರ್, ರವೀಂದ್ರ ಜಡೇಜಾ, ಕುಲದೀಪ್​ ಯಾದವ್​, ನಿತೀಶ್​ ಕುಮಾರ್​ ರೆಡ್ಡಿ, ಹರ್ಷಿತ್​ ರಾಣಾ, ರುತುರಾಜ್​ ಗಾಯಕ್ವಾಡ್​, ಪ್ರಸಿದ್ಧ ಕೃಷ್ಣ, ಹರ್ಷದೀಪ್​ ಸಿಂಗ್​, ಧ್ರುವ್​ ಜುರೇಲ್​ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ : ಟೀಂ ಇಂಡಿಯಾ ಉಪನಾಯಕಿಗೆ ನಿಶ್ಚಿತಾರ್ಥ, ಭಾವೀ ಪತಿ ಹೆಸರು ಬಹಿರಂಗ ..! ಮದುವೆ ಯಾವಾಗ ?

ಕೆ.ಎಲ್​ ರಾಹುಲ್​ ತಂಡದ ನಾಯಕತ್ವದ ಜೊತೆಯಲ್ಲಿ ವಿಕೇಟ್​ ಕೀಪಿಂಗ್​ ಜವಾಬ್ದಾರಿಯನ್ನೂ ಹೊಂದಿದ್ದಾರೆ. ರಿಷಭ್​ ಪಂತ್​ ಕೂಡ ವಿಕೇಟ್​ ಕೀಪರ್​ ಸ್ಥಾನ ಪಡೆದಿದ್ದಾರೆ. ಗಾಯಾಳು ಶುಭಮನ್​ ಗಿಲ್​​ರನ್ನು ಈ ಸರಣಿಯಿಂದ ಹೊರಗಿಡಲಾಗಿದೆ.

ಇನ್ನುಳಿದಂತೆ ಸ್ಪಿನ್ನರ್ ಅಕ್ಷರ್ ಪಟೇಲ್ , ವೇಗಿಗಳಾದ ಜಸ್ ಪ್ರಿತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಈ ಸರಣಿಯು ರಾಂಚಿ, ರಾಯ್‌ಪುರ ಮತ್ತು ವಿಶಾಖಪಟ್ಟಣಂನಲ್ಲಿ ನಡೆಯಲಿದೆ.

ಇದನ್ನೂ ಓದಿ : ಕೇವಲ 32 ಎಸೆತಗಳಲ್ಲಿ ಶತಕ ಬಾರಿಸಿದ ವೈಭವ್‌ ಸೂರ್ಯವಂಶಿ

Ind vs sa odi kl rahul : ಭಾರತ ದಕ್ಷಿಣ ಆಫ್ರಿಕಾ ಸರಣಿ ವೇಳಾಪಟ್ಟಿ

  • ಮೊದಲ ಏಕದಿನ ಪಂದ್ಯ ನವೆಂಬರ್‌ 30 ರಾಂಚಿ
  • ಎರಡನೇ ಏಕದಿನ ಪಂದ್ಯ ಡಿಸೆಂಬರ್‌ 2 ರಾಯ್‌ಪುರ
  • ಮೂರನೇ ಏಕದಿನ ಪಂದ್ಯ ಡಿಸೆಂಬರ್‌ 6 ವಿಶಾಖಪಟ್ಟಣ

ind v s sa odi series KL Rahul Captian

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories