ಬೆನ್ನು ನೋವಿಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಎಂಐಟಿ ವಿದ್ಯಾರ್ಥಿನಿ ಸಾವು

MIT Student Death : ಉಡುಪಿ: ಹಠಾತ್‌ ತೀವ್ರ ಬೆನ್ನು ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿನಿಯೋರ್ವಳು ದುರಂತ ಸಾವನ್ನಪ್ಪಿದ ಘಟನೆ ಮಣಿಪಾಲದಲ್ಲಿ ನಡೆದಿದೆ.

ಒಡಿಶಾ ಮೂಲದ ಆಕಾಂಕ್ಷಾ ಮೋಹಾಂತಿ (25 ವರ್ಷ) ಎಂಬಾಕೆಯೇ ಮೃತ ವಿದ್ಯಾರ್ಥಿನಿಯಾಗಿದ್ದಾಳೆ. ಆಕಾಂಕ್ಷಾ ಮೋಹಾಂತಿ ಅವರು ಮಣಿಪಾಲದ ಎಂಐಟಿಯಲ್ಲಿ ಅಂತಿಮ ವರ್ಷದ ಇಂಜಿನಿಯರಿಂಗ್‌ ಪದವಿಯನ್ನು ಪಡೆಯುತ್ತಿದ್ದರು.

ನವೆಂಬರ್‌ 29ರ ರಾತ್ರಿ ಮಣಿಪಾಲದ ಹೋಟೆಲ್‌ವೊಂದರಲ್ಲಿ ಆಕಾಂಕ್ಷಾ ಮೋಹಾಂತಿ ಊಟ ಮಾಡಿ, ತಾನು ವಾಸ್ತವ್ಯವಿದ್ದ ಕೊಠಡಿಗೆ ವಾಪಾಸಾಗಿದ್ದಳು. ರೂಮಿಗೆ ಮರಳುತ್ತಿದ್ದಂತೆಯೇ ಆಕಾಂಕ್ಷಗೆ ಹಠಾತ್‌ ಬೆನ್ನು ನೋವು ಕಾಣಿಸಿಕೊಂಡಿದೆ.

ಬೆನ್ನು ನೋವು ಅತಿಯಾಗಿ ನಡೆಯೋದಕ್ಕೆ ಸಾಧ್ಯವಾಗದ ಪರಿಸ್ಥಿತಿ ಉಂಟಾದ ಹಿನ್ನೆಲೆಯಲ್ಲಿ ಆಕೆಯನ್ನು ಅಂಬ್ಯುಲೆನ್ಸ್‌ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆಸ್ಪತ್ರೆ ತಲುಪುವಷ್ಟರಲ್ಲಿ ಆಕಾಂಕ್ಷಾ ಮೃತಪಟ್ಟಿದ್ದರು ಎಂದು ಪರೀಕ್ಷಿಸಿದ ವೈದ್ಯರು ತಿಳಿಸಿದ್ದಾರೆ.

ವಿದ್ಯಾರ್ಥಿನಿಯ ಸಾವಿಗೆ ಹೃದಯಾಘಾತ ಕಾರಣವೆಂದು ವೈದ್ಯರು ಮತ್ತು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

MIT Student Death for Back Pain Dies Manipal News

Ashwath Acharya | ಅಶ್ವಥ್ ಆಚಾರ್ಯ

ನ್ಯೂಸ್‌ ನೆಕ್ಸ್ಟ್‌ನ ಹಿರಿಯ ವರದಿಗಾರರಾಗಿರುವ ಅಶ್ವಥ್‌ ಆಚಾರ್ಯ ಅವರು ಪತ್ರಕರ್ತರಾಗಿ ಸುಮಾರು 20 ವರ್ಷಗಳ ಅನುಭವ ಹೊಂದಿದ್ದಾರೆ. ಕರ್ನಾಟಕದ ಪ್ರಖ್ಯಾತ ಸುದ್ದಿವಾಹಿನಿ, ಕನ್ನಡ ಪ್ರತಿಷ್ಠಿತ ದಿನ ಪತ್ರಿಕೆಗಳಲ್ಲಿ ಹಾಗೂ ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. More »

Related Stories