ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಗುಡ್‌ನ್ಯೂಸ್‌: 25,487 SSC GD ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

SSC GD Constable Recruitment: ಸ್ಟಾಫ್‌ ಸೆಲೆಕ್ಷನ್‌ ಕಮೀಷನ್‌ನ, ಜನರಲ್‌ ಡ್ಯೂಟಿ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಗುಡ್‌ ನ್ಯೂಸ್‌. ಎಸ್‌ಎಸ್‌ಸಿ 2026 ನೇ ಸಾಲಿನ, GD ಕಾನ್ಸ್‌ಟೇಬಲ್‌ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ನೇಮಕಾತಿ ಪ್ರಕಟಣೆಯ ಪ್ರಕಾರ ಅರ್ಜಿ ಪ್ರಕ್ರಿಯೆಯು ಡಿಸೆಂಬರ್‌ 1 ರಿಂದ ಡಿಸೆಂಬರ್‌ 31, 2025 ರವರೆಗೆ ನಡೆಯಲಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು ಎಸ್‌ಎಸ್‌ಸಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಈ ನೇಮಕಾತಿಯಲ್ಲಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತಾ ಮಾನದಂಡಗಳೇನು ಎಂದು ತಿಳಿಯೋಣ.

ನೇಮಕಾತಿ ವಿವರ

ಎಸ್‌ಎಸ್‌ಸಿ ಹೊರಡಿಸಿದೆ ಅಧಿಸೂಚನೆಯ ಪ್ರಕಾರ ಈ ನೇಮಕಾತಿ ಪ್ರಕ್ರಿಯೆಯಲ್ಲಿ ಒಟ್ಟು 25,487 ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು. ಹುದ್ದೆವಾರು ನೇಮಕಾತಿ ವಿವರ ಹೀಗಿದೆ…

ಬಿಎಸ್ಎಫ್‌: 616 ಪೋಸ್ಟ್‌ಗಳು
ಸಿಐಎಸ್ಎಫ್: 14,595 ಪೋಸ್ಟ್‌ಗಳು
ಸಿಆರ್‌ಪಿಎಫ್: 5,490 ಪೋಸ್ಟ್‌ಗಳು
ಎಸ್‌ಎಸ್‌ಬಿ: 1,764 ಪೋಸ್ಟ್‌ಗಳು
ಐಟಿಬಿಪಿ: 1,293 ಪೋಸ್ಟ್‌ಗಳು
ಎ.ಆರ್.: 1,706 ಪೋಸ್ಟ್‌ಗಳು ಮತ್ತು
ಎಸ್‌ಎಸ್‌ಎಫ್: 23 ಪೋಸ್ಟ್‌ಗಳು

ಎಸ್‌ಎಸ್‌ಸಿ ಜಿಡಿ ಕಾನ್ಸ್‌ಟೇಬಲ್ ನೇಮಕಾತಿ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ.

ವಿದ್ಯಾರ್ಹತೆ

ಎಸ್‌ಎಸ್‌ಸಿ ಜಿಡಿ ಕಾನ್ಸ್‌ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಅಥವಾ ಮೆಟ್ರಿಕ್ಯುಲೇಷನ್‌ನಲ್ಲಿ ಉತ್ತೀರ್ಣರಾಗಿರಬೇಕು.

ವಯೋಮಿತಿ

ಈ ನೇಮಕಾತಿಯಲ್ಲಿ ಪಾಲ್ಗೊಳ್ಳಲು ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷಗಳು ಮತ್ತು ಗರಿಷ್ಠ ವಯಸ್ಸು 23 ವರ್ಷಗಳು. ಮೀಸಲು ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ಗರಿಷ್ಠ ವಯಸ್ಸಿನಲ್ಲಿ ಸಡಿಲಿಕೆಯಿರುತ್ತದೆ.

ಅರ್ಜಿ ಶುಲ್ಕ ಎಷ್ಟು?

ಈ ನೇಮಕಾತಿ ಪ್ರಕ್ರಿಯೆಯಲ್ಲಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಭರಿಸಬೇಕಾಗುತ್ತದೆ. ಸಾಮಾನ್ಯ, ಒಬಿಸಿ ಹಾಗೂ ಇಡಬ್ಲ್ಯೂ ಎಸ್ ವರ್ಗಗಳ ಅಭ್ಯರ್ಥಿಗಳು 100 ಅರ್ಜಿ ಶುಲ್ಕ ಭರಿಸಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಎಸ್‌ಸಿ, ಎಸ್‌ಟಿ, ಮಾಜಿ ಸೈನಿಕರು ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿಯನ್ನು ಸಂಪೂರ್ಣ ಉಚಿತವಾಗಿ ಭರ್ತಿ ಮಾಡಬಹುದಾಗಿದೆ.

ಇದನ್ನೂ ಓದಿ: New Labour codes : ಯುವಜನತೆಗೆ ಶುಭ ಸುದ್ದಿ! ಸೃಷ್ಟಿಯಾಗಲಿದೆ ಬರೋಬ್ಬರಿ 77 ಲಕ್ಷ ಉದ್ಯೋಗ

ಅರ್ಜಿ ಪ್ರಕ್ರಿಯೆ ಹೇಗೆ?

ಎಸ್‌ಎಸ್‌ಸಿ GD ಅರ್ಜಿ ನಮೂನೆ 2026 ಅನ್ನು ಭರ್ತಿ ಮಾಡಲು, ಅಭ್ಯರ್ಥಿಗಳು ಮೊದಲು ಎಸ್‌ಎಸ್‌ಸಿಯ ಅಧಿಕೃತ ವೆಬ್‌ಸೈಟ್ ssc.gov.in ಗೆ ಭೇಟಿ ನೀಡಿ.

ವೆಬ್‌ಸೈಟ್‌ನ ಮುಖಪುಟದಲ್ಲಿರುವ ‘ಅಪ್ಲೈ’ ಲಿಂಕ್ ಮೇಲೆ ಕ್ಲಿಕ್ ಮಾಡಿ.

ನಂತರ ನೇಮಕಾತಿಗೆ ಸಂಬಂಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಅಲ್ಲಿ ಮೊದಲು “New User? Now Register Now” ಲಿಂಕ್ ಮೇಲೆ ಕ್ಲಿಕ್ ಮಾಡಿ ಮತ್ತು ಅಲ್ಲಿ ಕೇಳಿರುವ ಮಾಹಿತಿಯನ್ನು ಸರಿಯಾಗಿ ನಮೂದಿಸುವ ಮೂಲಕ ನಿಮ್ಮ ಹೆಸರನ್ನು ನೋಂದಾಯಿಸಿ.

ಇದಾದನಂತರ, ಲಾಗಿನ್ ಮೂಲಕ ಇತರ ವಿವರಗಳನ್ನು ಭರ್ತಿ ಮಾಡಿ.

ಬಳಿಕ ನಿಗದಿತ ಅರ್ಜಿ ಶುಲ್ಕವನ್ನು ಪಾವತಿಸಿದ ನಂತರ, ಇನ್ನೊಮ್ಮೆ ಅರ್ಜಿಯನ್ನು ಸರಿಯಾಗಿ ಪರಿಶೀಲಿಸಿ ಅರ್ಜಿಯನ್ನು ಸಲ್ಲಿಸಿ.

ಅಂತಿಮವಾಗಿ ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿ ನಮೂನೆಯ ಪ್ರಿಂಟ್‌ಔಟ್‌ ತೆಗೆದುಕೊಳ್ಳಿ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories