UPSC ಅಸಿಸ್ಟೆಂಟ್‌ ಕಮಾಂಡೆಂಟ್ಸ್‌ ನೇಮಕಾತಿ: ಅರ್ಜಿ ಸಲ್ಲಿಕೆ ಹೇಗೆ?

UPSC CISF AC LDCE 2026: ಯೂನಿಯನ್‌ ಪಬ್ಲಿಕ್‌ ಸರ್ವಿಸ್‌ ಕಮಿಷನ್‌ (UPSC) ಲಿಮಿಟೆಡ್‌ ಡಿಪಾರ್ಟಮೆಂಟಲ್‌ ಕಾಂಪಿಟೆಟಿವ್‌ ಎಕ್ಸಾಮ್‌ 2026 ರ ಸಲುವಾಗಿ ಅಧಿಸೂಚನೆಯನ್ನು ಹೊರಡಿಸಿದೆ.

ಅರ್ಜಿ ಸಲ್ಲಿಕೆಯ ಡಿಸೆಂಬರ್‌ 3 ರಿಂದ ಪ್ರಾರಂಭವಾಗಿದ್ದು ಅರ್ಹ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಯುಪಿಎಸ್‌ಸಿಯ ಆನ್‌ಲೈನ್‌ ಪೋರ್ಟಲ್‌ upsconline.nic.in ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಫಾರ್ಮ್‌ ಅನ್ನು ಭರ್ತಿ ಮಾಡಬಹುದು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಡಿಸೆಂಬರ್ 23, 2025 ಆಗಿದೆ. ಈ ನೇಮಕಾತಿಯಲ್ಲಿ ಪಾಲ್ಗೊಳ್ಳಲು ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತೆಗಳೇನು ಎಂಬುದನ್ನು ತಿಳಿಯೋಣ.

ನೇಮಕಾತಿ ವಿವರಗಳು

ಪ್ರಕಟವಾದ ಅಧಿಸೂಚನೆಯ ಪ್ರಕಾರ, ಈ ನೇಮಕಾತಿ ಅಭಿಯಾನದ ಮೂಲಕ ಒಟ್ಟು 20 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಇವುಗಳಲ್ಲಿ 16 ಹುದ್ದೆಗಳು ಸಾಮಾನ್ಯ, 3 ಎಸ್‌ಸಿ ಮತ್ತು 1 ಎಸ್‌ಟಿಗೆ ಮೀಸಲಾಗಿವೆ.

ಯಾರು ಅರ್ಜಿ ಸಲ್ಲಿಸಬಹುದು?

ಈ ನೇಮಕಾತಿಯಲ್ಲಿ ಅರ್ಹತೆ ಪಡೆಯಲು ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಪದವಿ ಪಡೆದಿರಬೇಕು.

ಜೊತೆಗೆ NCC ‘B’ ಅಥವಾ ‘C’ ಪ್ರಮಾಣ ಪತ್ರವನ್ನು ಹೊಂದಿರಬೇಕು. ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು. ವಿವರವಾದ ಅರ್ಹತಾ ವಿವರಗಳಿಗಾಗಿ ಅಧಿಕೃತ ಅಧಿಸೂಚನೆಯನ್ನು ಇಲ್ಲಿ ಪರಿಶೀಲಿಸಿ.

ಇದನ್ನೂ ಓದಿ: ಡಿಆರ್‌ಡಿಒ ದಲ್ಲಿ 764 ಹುದ್ದೆಗಳ ನೇಮಕಾತಿ ಅಧಿಸೂಚನೆ ಪ್ರಕಟ: ಅರ್ಜಿ ಸಲ್ಲಿಕೆ ಯಾವಾಗ ಪ್ರಾರಂಭ?

ಅರ್ಜಿ ಪ್ರಕ್ರಿಯೆ ಹೇಗೆ?

  • UPSC ಸಹಾಯಕ ಕಮಾಂಡೆಂಟ್ ನೇಮಕಾತಿ ಅರ್ಜಿ ನಮೂನೆಯನ್ನು ಭರ್ತಿ ಮಾಡಲು, ಮೊದಲು ಅಧಿಕೃತ ವೆಬ್‌ಸೈಟ್ upsconline.nic.in ಗೆ ಭೇಟಿ ನೀಡಿ.
  • ಮುಖಪುಟದಲ್ಲಿ ಕ್ರಿಯೇಟ್‌ ಅಕೌಂಟ್‌ ಮೇಲೆ ಕ್ಲಿಕ್ ಮಾಡಿ. ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡುವ ಮೂಲಕ ನೋಂದಾಯಿಸಿ.
  • ಇದರ ನಂತರ, ಲಾಗಿನ್ ಮೂಲಕ ಇತರ ವಿವರಗಳನ್ನು ಭರ್ತಿ ಮಾಡುವ ಮೂಲಕ ಫಾರ್ಮ್ ಅನ್ನು ಪೂರ್ಣಗೊಳಿಸಿ.
  • ಫಾರ್ಮ್ ಅನ್ನು ಭರ್ತಿ ಮಾಡಿದ ನಂತರ, ಭವಿಷ್ಯದ ಉಲ್ಲೇಖಕ್ಕಾಗಿ ಪ್ರಿಂಟ್‌ಔಟ್‌ ತೆಗೆದುಕೊಳ್ಳಿ.

ಆಪ್‌ಲೈನ್‌ ಫಾರ್ಮ್ ಸಲ್ಲಿಕೆಗೆ ಕೊನೆಯ ದಿನ ಯಾವುದು?

ಈ ನೇಮಕಾತಿ ಅಭಿಯಾನದಲ್ಲಿ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ನಂತರ ಅಗತ್ಯ ದಾಖಲೆಗಳೊಂದಿಗೆ ಆನ್‌ಲೈನ್‌ ಫಾರ್ಮ್‌ ನ ಪ್ರತಿಯನ್ನು ಜನವರಿ 9, 2026 ರ ಒಳಗೆ ನಿಗದಿತ ವಿಳಾಸಕ್ಕೆ ಸಲ್ಲಿಸಬೇಕು.

ದಾಖಲೆಗಳನ್ನು ‘ಡೈರೆಕ್ಟರ್ ಜನರಲ್, ಸೆಂಟ್ರಲ್, ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್, 13, ಸಿಜಿಒ ಕಾಂಪ್ಲೆಕ್ಸ್, ಲೋದಿ ರಸ್ತೆ, ನವದೆಹಲಿ -110003’ ಈ ವಿಳಾಸಕ್ಕೆ ಕಳುಹಿಸಬೇಕು.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.