Business: ಅಕ್ಕ,-ತಂಗಿಯಂದ್ರಾ ಗಮನಿಸಿ, ಇಲ್ಲಿದೆ ಸ್ವ-ಉದ್ಯೋಗಕ್ಕೆ ದೊಡ್ಡ ಅವಕಾಶ!

ಇದು ಹೇಳಿ ಕೇಳಿ ಮೊಟ್ಟೆಗಳ ಬೆಲೆ ತಾರಕಕ್ಕೇರಿರುವ ಸಮಯ, ಒಂದು ಡಜನ್ ಮೊಟ್ಟೆ ಬೇಕಂದ್ರೆ ಈಗ 100-200 ರೂಪಾಯಿ ಬೇಕು! ಕರ್ನಾಟಕದಲ್ಲಿ ಬರೋಬ್ಬರಿ 2.5 ಕೋಟಿ ಮೊಟ್ಟೆಗಳನ್ನು ದಿನವೂ ತಿನ್ನುತ್ತಾರೆ. 11.4 ಕೆಜಿ ಚಿಕನ್ ಕರ್ನಾಟಕಕ್ಕೆ ಬೇಕೆ ಬೇಕು. ಇಂತಹ ಲಾಭದಾಯಕ ಕುಕ್ಕುಟೋದ್ಯಮಕ್ಕೆ ನೀವು ಬರಬೇಕೆ? ಹಾಗಿದ್ದರೆ ಇಲ್ಲಿ ಕೇಳಿ.
ಕರ್ನಾಟಕ ಸರ್ಕಾರದ ಯೋಜನೆ ಇದು
ಕರ್ನಾಟಕ ಸರ್ಕಾರದ 2024-25ರ ಯೋಜನೆಯಿದು. ಈ ಯೋಜನೆಯಡಿ, ಪಶುಸಂಗೋಪನಾ ಇಲಾಖೆಯಿಂದ ಆರು ವಾರಗಳ ನಾಟಿ ಕೋಳಿಮರಿಗಳನ್ನು ವಿತರಿಸಲಾಗುತ್ತದೆ ಮತ್ತು ಎಂಜಿನರೇಗಾ ಯೋಜನೆ ಅಡಿಯಲ್ಲಿ ಕೋಳಿ ಶೆಡ್ಗಳ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಲಾಗುತ್ತದೆ. ಜೊತೆಗೆ ಪ್ರತಿ ಸಂಘಕ್ಕೆ 25,000 ರೂ. ಸಹಾಯಧನವೂ ದೊರೆಯುತ್ತದೆ.
ಈ ಕೋಳಿಯ ಮೊಟ್ಟೆ ಸರ್ಕಾರಿ ಶಾಲೆಗೆ!
ಫಲಾನುಭವಿಗಳಿಗೆ ವೈಜ್ಞಾನಿಕ ಕೋಳಿ ಸಾಕಾಣಿಕೆ ಕುರಿತು ತರಬೇತಿ ಹಾಗೂ ತಾಂತ್ರಿಕ ಸಲಹೆಗಳನ್ನು ಒದಗಿಸಲಾಗುತ್ತದೆ. ಇಲ್ಲಿ ಉತ್ಪಾದನೆಯಾಗುವ ಮೊಟ್ಟೆಗಳನ್ನು ಸರ್ಕಾರಿ ಶಾಲೆಗಳ ಮಧ್ಯಾಹ್ನದ ಊಟ ಮತ್ತು ಸ್ಥಳೀಯ ಅಂಗನವಾಡಿ ಕೇಂದ್ರಗಳಿಗೆ ಮಾರಾಟ ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿದೆ.
ಎಲ್ಲರಿಗೂ ಸಿಗೋದಿಲ್ಲ ಈ ಯೋಜನೆ
ಕುಕ್ಕುಟ ಸಂಜೀವಿನಿ ಯೋಜನೆಯು ಎಲ್ಲರಿಗೂ ಸಿಗೋದಿಲ್ಲ. ಇದು 5 ರಿಂದ 10 ಸದಸ್ಯರನ್ನು ಹೊಂದಿರುವ ಮಹಿಳಾ ಸ್ವಸಹಾಯ ಸಂಘಗಳಿಗೆ ಹಾಗೂ ಕೋಳಿ ಸಾಕಾಣಿಕೆಯಲ್ಲಿ ಆಸಕ್ತಿ ಹೊಂದಿರುವ ಗ್ರಾಮ ಪಂಚಾಯತ್ ಮಟ್ಟದ ಸಂಘಗಳಿಗೆ ಸಿಗುತ್ತದೆ.
ಇದನ್ನೂ ಓದಿ: ವೈಭವ್ ಸೂರ್ಯವಂಶಿ ಐತಿಹಾಸಿಕ ವಿಶ್ವ ದಾಖಲೆಯ ಶತಕ-http://kannada.newsnext.live/cricket/under-19-world-cup-vaibhav-suryavanshi-hits-historic-world-record-century/
ಏನಿದೆ ಈ ಯೋಜನೆಯಲ್ಲಿ?
ಪಶುಸಂಗೋಪನೆ ಇಲಾಖೆಯಿಂದ ಆರು ವಾರಗಳ ನಾಟಿ ಕೋಳಿ ಮರಿಗಳನ್ನು ವಿತರಿಸಲಾಗುತ್ತದೆ. ಕೋಳಿ ಶೆಡ್ ನಿರ್ಮಾಣಕ್ಕಾಗಿ ಎಂಜಿ ನರೇಗಾ ಯೋಜನೆ ಅಡಿಯಲ್ಲಿ 500 ಕೋಳಿಗಳಿಗೆ 4.5 ಲಕ್ಷ ರೂ. ಮತ್ತು 1000 ಕೋಳಿಗಳಿಗೆ 7.5 ಲಕ್ಷ ರೂ.ದವರೆಗೆ ಆರ್ಥಿಕ ನೆರವು ಒದಗಿಸಲಾಗುತ್ತದೆ. ಇದರ ಜೊತೆಗೆ, ಪಶುಸಂಗೋಪನೆ ಇಲಾಖೆ ಅಥವಾ ಜಿಲ್ಲಾ ಪಂಚಾಯತ್ನಿಂದ ಪ್ರತಿ ಸಂಘಕ್ಕೆ 25,000 ರೂ.ಗಳ ಹೆಚ್ಚುವರಿ ಸಹಾಯಧನವನ್ನು ನೀಡಲಾಗುತ್ತದೆ.
ತರಬೇತಿಗೆ ಬಂದರೂ ಭತ್ಯೆ ಉಂಟು
ಕುಕ್ಕುಟ ಸಂಜೀವಿನಿ ಯೋಜನೆಯಡಿ ನೀಡಲಾಗುವ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ದಿನವೊಂದಕ್ಕೆ 200 ರೂ. ರಂತೆ ಭತ್ಯೆ ನೀಡಲಾಗುತ್ತದೆ. ಜೊತೆಗೆ ಪ್ರವಾಸ ವೆಚ್ಚ ಮತ್ತು ಲೇಖನಿ ಸಾಮಗ್ರಿಗಳಿಗಾಗಿ 800 ರೂ. ಅನುದಾನ ಹಾಗೂ ಕೋಳಿ ಸಾಕಾಣಿಕೆಯ ಒದಗಿಸಲಾಗುತ್ತದೆ. ಕೋಳಿ ಸಾಕೋದ್ರಲ್ಲಿ ಅನುಭವ ಇದ್ದವರಿಗೆ ಹಾಗೂ ಮೊದಲು ಬಂದವರಿಗೆ ಆದ್ಯತೆ ಒಂದು ಯೋಜನೆಯ ನಿರ್ದೇಶಕರು ತಿಳಿಸಿದ್ದಾರೆ.
ಏನು ಷರತ್ತು? ಅರ್ಜಿ ಸಲ್ಲಿಸೋ ಬಗೆ ಹೇಗೆ?
ಆಧಾರ್ ಕಾರ್ಡ್, ಪೋಟೋ, ಬ್ಯಾಂಕ್ ಪಾಸ್ಬುಕ್, ಜಮೀನಿನ ಪಹಣಿ, ಮೊಬೈಲ್ ನಂಬರ್ ನೊಂದಿಗೆ ತಾಲೂಕಾ ಪಶುಪಾಲನಾ ಇಲಾಖೆ ಅಥವಾ ತಹಶೀಲ್ದಾರ್ ಕಚೇರಿಗೆ ಹೋಗಿ ನೇರ ಅರ್ಜಿ ಸಲ್ಲಿಸಬಹುದು. ಆದರೆ ಷರತ್ತೊಂದೇ ನೀವು ಯಾವುದಾದರೂ ಗ್ರಾಮೀಣ ಮಹಿಳಾ ಸ್ವಸಹಾಯ ಸಂಘದ ಸದಸ್ಯರಾಗಿರಲೇಬೇಕು!



