ಕೆಎಸ್​ಆರ್​ಟಿಸಿ ಚಾಲಕರಿಗೆ ಗುಡ್​ ನ್ಯೂಸ್​: ದುಪ್ಪಟ್ಟಾಯ್ತು ಮಾಸಿಕ ಭತ್ಯೆ ಹಾಗೂ ಪುರಸ್ಕಾರ ದರ

KSRTC Drivers: ಅಪಘಾತ ರಹಿತ ಹಾಗೂ ಅಪರಾಧ ರಹಿತ ಸೇವೆ ಸಲ್ಲಿಸುವ ಕೆಎಸ್​ಆರ್​ಟಿಸಿ ಸಿಬ್ಬಂದಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗದಿಂದ ಸಿಹಿ ಸುದ್ದಿ ದೊರಕಿದೆ. ಅಪಘಾತ ರಹಿತ ಚಾಲನೆ ಮಾಡುವ ಚಾಲಕರ ಮಾಸಿಕ ಭತ್ಯೆ ಹಾಗೂ ನಗದು ಪುರಸ್ಕಾರ ದರವನ್ನು ದುಪ್ಪಟ್ಟು ಮಾಡಲಾಗಿದೆ. ಪರಿಷ್ಕರಣೆಯಾದ ಮೊತ್ತದ ಬಗ್ಗೆ ಕೆಎಸ್​ಆರ್​ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷಾ ಮಾಹಿತಿ ನೀಡಿದ್ದಾರೆ.
ಮುಖ್ಯಮಂತ್ರಿ ಚಿನ್ನದ ಪದಕ ಪಡೆದ ಚಾಲಕರಿಗೆ 5000 ರೂಪಾಯಿ ನಗದು ಪುರಸ್ಕಾರ ನೀಡಿ ಗೌರವಿಸಲಾಗುತ್ತಿತ್ತು. ಆದರೆ ಈ ಮೊತ್ತವನ್ನು ಇದೀಗ 10 ಸಾವಿರ ರೂಪಾಯಿಗೆ ಏರಿಕೆ ಮಾಡಲಾಗಿದೆ. ಇದರ ಜೊತೆಯಲ್ಲಿ ಮಾಸಿಕ ಭತ್ಯೆಯನ್ನು 500 ರೂಪಾಯಿಗಳಿಂದ 1000 ರೂಪಾಯಿಗೆ ಏರಿಕೆ ಮಾಡಲಾಗಿದೆ.

ಇದನ್ನೂ ಓದಿ: ಹೀಗೆ ಮಾಡಿದವರ ಮನೆ ಒಡೆಯಲಿದೆ ಕರ್ನಾಟಕ ಸರ್ಕಾರ; ಬುಲ್ಲೋಜರ್ ಕಾರ್ಯಾಚರಣೆಯ ಎಚ್ಚರಿಕೆ

ಅದೇ ರೀತಿ ಬೆಳ್ಳಿ ಪದಕಕ್ಕೆ ಅರ್ಹರಾಗುವ ಚಾಲಕರ ಮಾಸಿಕ ಭತ್ಯೆ ಹಾಗೂ ನಗದು ಪುರಸ್ಕಾರ ದುಪ್ಪಟ್ಟಾಗಿದೆ. ಈ ಹಿಂದೆ ಸಿಗುತ್ತಿದ್ದ 2500 ರೂಪಾಯಿ ನಗದು ಪುರಸ್ಕಾರವನ್ನು 5000 ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ. ಹಾಗೂ ಮಾಸಿಕ ಭತ್ಯೆಯನ್ನು 250 ರೂಪಾಯಿಗಳಿಂದ 500 ರೂಪಾಯಿಗೆ ಏರಿಸಲಾಗಿದೆ. ಮುಂದಿನ ವರ್ಷ ಜನವರಿ ತಿಂಗಳಿನಿಂದಲೇ ಈ ಪರಿಷ್ಕೃತ ದರ ಜಾರಿಗೆ ಬರಲಿದ್ದು ಕೆಎಸ್​ಆರ್​ಟಿಸಿ ಸಿಬ್ಬಂದಿ ಫುಲ್​ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories