ಎಂಟು ವರ್ಷಗಳಿಂದ ಲೈಂಗಿಕ ಸುಖ ನಿರಾಕರಿಸಿದ ಪತ್ನಿಯನ್ನು ಕೊಲೆ ಮಾಡಿದ ಪತಿ

Husband kills Wife: ಇಂದೋರ್: ಕಳೆದ ಎಂಟು ವರ್ಷಗಳಿಂದ ಲೈಂಗಿಕ ಸಂಬಂಧಕ್ಕೆ ನಿರಾಕರಿಸುತ್ತಿದ್ದಳು ಎಂಬ ಕಾರಣಕ್ಕೆ ಪತಿಯೊಬ್ಬ ತನ್ನ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಭೀಕರ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.

ಜನವರಿ 9 ರಂದು ಇಲ್ಲಿನ ಏರೋಡ್ರೋಮ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 40 ವರ್ಷದ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಮೆಕ್ಯಾನಿಕ್ ಆಗಿ ಕೆಲಸ ಮಾಡುವ ಪತಿ, ತನ್ನ ಪತ್ನಿಯನ್ನು ಕೂಡಲೇ ಸರ್ಕಾರಿ ಮಹಾರಾಜ ಯಶವಂತರಾವ್ ಆಸ್ಪತ್ರೆಗೆ ದಾಖಲಿಸಿದ್ದನು. “ರಕ್ತದೊತ್ತಡ (BP) ಏರಿಕೆಯಾಗಿ ತಲೆ ಸುತ್ತಿ ಬಿದ್ದಿದ್ದರಿಂದ ತಲೆಗೆ ಪೆಟ್ಟಾಗಿ ಆಕೆ ಮೃತಪಟ್ಟಿದ್ದಾಳೆ” ಎಂದು ವೈದ್ಯರ ಮುಂದೆ ಕಟ್ಟುಕಥೆ ಹೇಳಿದ್ದನು.

ತನಿಖೆಯಲ್ಲಿ ಬಯಲಾದ ಸತ್ಯ:

ಪತಿಯ ಹೇಳಿಕೆಯ ಮೇಲೆ ಸಂಶಯಗೊಂಡ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಮಹಿಳೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂಬ ಸತ್ಯಾಂಶ ಹೊರಬಂದಿದೆ.

ಅಕ್ಕಿ ಉತ್ಪಾದನೆಯಲ್ಲಿ ಪ್ರಪ್ರಥಮ ಬಾರಿಗೆ ಚೀನಾ ಹಿಂದಿಕ್ಕಿದ ಭಾರತ : ವಿಶ್ವಕ್ಕೆ ನಾವೇ ನಂ.1

ಇದಾದ ನಂತರ ಪೊಲೀಸರು ಪತಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಆತ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. “ಕಳೆದ ಎಂಟು ವರ್ಷಗಳಿಂದ ಪತ್ನಿ ದೈಹಿಕ ಸಂಬಂಧಕ್ಕೆ ನಿರಾಕರಿಸುತ್ತಿದ್ದಳು, ಇದರಿಂದ ತಾನು ತೀವ್ರ ಆಕ್ರೋಶಗೊಂಡಿದ್ದೆ” ಎಂದು ಆತ ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾನೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories