ಕೆ.ಎಲ್. ರಾಹುಲ್ ಶತಕದ ಅಬ್ಬರ: ಮುಂಬೈ ಮಣಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಕರ್ನಾಟಕ

KL Rahul Ranji Trophy 2026 : ಮುಂಬೈ: ಅನುಭವಿ ಆಟಗಾರ ಕೆ.ಎಲ್. ರಾಹುಲ್ ಅವರ ಅಮೋಘ ಶತಕ ಹಾಗೂ ಆರ್. ಸ್ಮರಣ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಕರ್ನಾಟಕ ತಂಡ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್‌ನಲ್ಲಿ ಬಲಿಷ್ಠ ಮುಂಬೈ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದೆ.
ಮುಂಬೈನ ಎಂಸಿಎ-ಬಿಕೆಸಿ ಮೈದಾನದಲ್ಲಿ ನಡೆದ ಈ ರೋಚಕ ಪಂದ್ಯದಲ್ಲಿ ಗೆಲ್ಲಲು 325 ರನ್‌ಗಳ ಕಠಿಣ ಗುರಿ ಪಡೆದಿದ್ದ ಕರ್ನಾಟಕ, ನಾಲ್ಕನೇ ದಿನದಾಟದಲ್ಲಿ ದಿಟ್ಟ ಪ್ರದರ್ಶನ ನೀಡಿತು. ಆರಂಭಿಕ ಆಟಗಾರ ಮಾಯಾಂಕ್ ಅಗರ್ವಾಲ್ (3) ಬೇಗನೆ ವಿಕೆಟ್ ಒಪ್ಪಿಸಿದರೂ, ಕ್ರೀಸ್‌ಗೆ ಬಂದ ಕೆ.ಎಲ್. ರಾಹುಲ್ ನೆಲಕಚ್ಚಿ ಆಡಿದ್ದಾರೆ. ಅಬ್ಬರದ ಶತಕ 130 ರನ್ (182 ಎಸೆತ, 14 ಬೌಂಡರಿ, 1 ಸಿಕ್ಸರ್) ಬಾರಿಸುವ ಮೂಲಕ ತಂಡದ ಗೆಲುವಿನ ರೂವಾರಿಯಾದರು. ಇದು ರಾಹುಲ್ ಅವರ ಪ್ರಥಮ ದರ್ಜೆ ಕ್ರಿಕೆಟ್‌ನ 24ನೇ ಶತಕವಾಗಿದೆ.
Also Read : RCB IPL 2026 : ಐಪಿಎಲ್ 2026ಕ್ಕೆ ಸಜ್ಜಾಗುತ್ತಿದೆ ಆರ್‌ಸಿಬಿ ತಂಡ : ರಾಯಲ್ ಚಾಲೆಂಜರ್ಸ್‌ಗೆ ಹೊಸ ಮಾಲೀಕ ಯಾರು ?
KL Rahul Ranji Trophy 2026 : ರಾಹುಲ್- ಸ್ಮರಣ್ ಭರ್ಜರಿ ಜೊತೆಯಾಟ
ರಾಹುಲ್ ಅವರಿಗೆ ಉತ್ತಮ ಸಾಥ್ ನೀಡಿದ ಯುವ ಬ್ಯಾಟರ್ ಆರ್. ಸ್ಮರಣ್ ಅಜೇಯ 83 ರನ್ ಗಳಿಸಿ ತಂಡವನ್ನು ಗೆಲುವಿನ ದಡ ತಲುಪಿಸಿದರು. ಇವರಿಬ್ಬರ ನಡುವಿನ 147 ರನ್‌ಗಳ ಜೊತೆಯಾಟ ಪಂದ್ಯದ ಗತಿಯನ್ನೇ ಬದಲಿಸಿತು. ನಾಯಕ ದೇವದತ್ ಪಡಿಕ್ಕಲ್ 39 ರನ್ ಕಾಣಿಕೆ ನೀಡಿದರೆ, ಅಂತಿಮವಾಗಿ ವಿದ್ಯಾಧರ್ ಪಾಟೀಲ್ (31*) ಸ್ಫೋಟಕ ಬ್ಯಾಟಿಂಗ್ ನಡೆಸಿ ಜಯದ ಮುದ್ರೆ ಒತ್ತಿದರು.
Also Read :ಟಿ20 ವಿಶ್ವಕಪ್ 2026: ಸೂರ್ಯನ ಅಬ್ಬರ, ಸಿರಾಜ್ ಮಿಂಚು; ಅಮೆರಿಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ!
ಪಂದ್ಯದ ಸಂಕ್ಷಿಪ್ತ ಸ್ಕೋರ್:
ಮುಂಬೈ: 120 (ಮೊದಲ ಇನಿಂಗ್ಸ್) ಮತ್ತು 377 (ಎರಡನೇ ಇನಿಂಗ್ಸ್ – ಆಕಾಶ್ ಆನಂದ್ 70, ತನುಷ್ ಕೋಟ್ಯಾನ್ 48*).
ಕರ್ನಾಟಕ: 173 (ಮೊದಲ ಇನಿಂಗ್ಸ್ – ಮಾಯಾಂಕ್ ಅಗರ್ವಾಲ್ 92) ಮತ್ತು 326/6 (ಎರಡನೇ ಇನಿಂಗ್ಸ್ – ಕೆ.ಎಲ್. ರಾಹುಲ್ 130, ಆರ್. ಸ್ಮರಣ್ 83*).
ಈ ಗೆಲುವಿನೊಂದಿಗೆ ಎಂಟು ಬಾರಿ ಚಾಂಪಿಯನ್ ಆಗಿರುವ ಕರ್ನಾಟಕ ತಂಡವು ಸೆಮಿಫೈನಲ್‌ಗೆ ಅರ್ಹತೆ ಪಡೆದಿದ್ದು, ಅಲ್ಲಿ ಉತ್ತರಾಖಂಡ ತಂಡವನ್ನು ಎದುರಿಸಲಿದೆ. ಮುಂಬೈನಂತಹ ಬಲಿಷ್ಠ ತಂಡವನ್ನು ಅವರದ್ದೇ ನೆಲದಲ್ಲಿ ಸೋಲಿಸಿರುವುದು ರಾಜ್ಯ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.
KL Rahul 24th First-Class Hundred Takes Karnataka Into Ranji Trophy 2026 Semis With Win Over Mumbai



