RCB IPL 2026 : ಐಪಿಎಲ್‌ 2026ಕ್ಕೆ ಸಜ್ಜಾಗುತ್ತಿದೆ ಆರ್‌ಸಿಬಿ ತಂಡ : ರಾಯಲ್‌ ಚಾಲೆಂಜರ್ಸ್‌ಗೆ ಹೊಸ ಮಾಲೀಕ ಯಾರು ?

RCB IPL 2026 : ಬೆಂಗಳೂರು : ಇಂಡಿಯನ್‌ ಪ್ರೀಮಿಯರ್‌ ಲೀಗ್‌ಗಾಗಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಸಜ್ಜಾಗುತ್ತಿದೆ. ಆದರೆ ಮುಂದಿನ ಬಾರಿ ಹೊಸ ಮಾಲೀಕನ ಜೊತೆಗೆ ಆರ್‌ಸಿಬಿ ಕಣಕ್ಕೆ ಇಳಿಯುವುದು ಫಿಕ್ಸ್‌ ಆಗಿದೆ. ರಾಯಲ್‌ ಚಾಲೆಂಜರ್ಸ್‌ ತಂಡದ ಪ್ರಾಚೈಸಿ ಒಡೆತನ ಹೊಂದಿರುವ ಡಿಯಾಜಿಯೋ ಕಂಪೆನಿ ಮಾರಾಟ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಿದೆ.

RCB Ready for IPL 2026 Who is the new owner of Royal Challengers

ಇಂಗ್ಲೀಷ್‌ ಪ್ರಿಮೀಯರ್‌ ಲೀಗ್‌ನ ದೈತ್ಯ ಮ್ಯಾಂಚೆಸ್ಟರ್‌ ಯುನೈಟೆಡ್ ಮಾಲೀಕರಾಗಿರುವ ಗ್ಲೇಜರ್‌ ಆರ್‌ಸಿಬಿ ಖರೀದಿಗೆ 16 ಸಾವಿರ ಕೋಟಿ ರೂಪಾಯಿಯ ಬಿಡ್‌ ಸಲ್ಲಿಕೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಮಾತ್ರವಲ್ಲದೇ ಸೀರಮ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾದ ಸಿಇಓ ಆದಾರ್‌ ಪೂನಾವಾಲ ಕೂಡ ಆರ್‌ಸಿಬಿ ಖರೀದಿಗೆ ಆಸಕ್ತಿ ತೋರಿಸಿದ್ದು, ಬಿಡ್‌ ಸಲ್ಲಿಸುವುದಾಗಿ ಬಹಿರಂಗವಾಗಿಯೇ ಘೋಷಣೆ ಮಾಡಿದ್ದಾರೆ.

ಅಲ್ಲದೇ ಜೆಎಸ್‌ಡಬ್ಲೂ, ಅದಾನಿ ಗ್ರೂಪ್‌, ಜೆರೋದಾದ ನಿಖಿಲ್‌ ಕಾಮತ್‌, ಮಣಿಪಾಲ ಗ್ರೂಪ್‌ನ ರಂಜನ್‌ ಪೈ ಸೇರಿದಂತೆ ಒಟ್ಟು 9 ಸಂಸ್ಥೆಗಳು ಕನ್ನಡಿಗರ ನೆಚ್ಚಿನ ತಂಡ ಖರೀದಿಗೆ ಆಸಕ್ತಿ ತೋರಿಸಿದ್ದಾರೆ. ಡಿಯಾಜಿಯೋ ಕಂಪನಿಯು 2026ರ ಮಾರ್ಚ್ 31ರ ಒಳಗಾಗಿ ಆರ್‌ಸಿಬಿ ತಂಡದ ಮಾರಾಟ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಿದೆ.

Also Read : ಟಿ20 ವಿಶ್ವಕಪ್ 2026: ಸೂರ್ಯನ ಅಬ್ಬರ, ಸಿರಾಜ್ ಮಿಂಚು; ಅಮೆರಿಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ!

ಈಗಾಗಲೇ ಕೆಲವೊಂದು ಕಂಪೆನಿಗಳು ಬಿಡ್‌ ಸಲ್ಲಿಸಿದ್ದು, ನಾನ್‌ ಬೈಂಡಿಂಗ್‌ ಆಗಿದ್ದು, ಫೆಬ್ರವತಿ ತಿಂಗಳ ಅಂತ್ಯಕ್ಕೆ ತಂಡಗಳ ಶಾರ್ಟ್‌ ಲಿಸ್ಟ್‌ ಆಗಲಿದೆ. ಇದೇ ಹೊತ್ತಲ್ಲೇ ಬಿಡ್‌ದಾರರ ಜೊತೆಗೆ ಅಂತಿಮ ಸುತ್ತಿನ ಚರ್ಚೆ ನಡೆಯಲಿದೆ. ಎಪ್ರಿಲ್‌ ತಿಂಗಳಿನಲ್ಲಿ ಐಪಿಎಲ್‌ ಆರಂಭಕ್ಕೂ ಮೊದಲೇ ಆರ್‌ಸಿಬಿ ತಂಡಕ್ಕೆ ಹೊಸ ಮಾಲೀಕನ ಹೆಸರು ಘೋಷಣೆ ಆಗುವ ಸಾಧ್ಯತೆಯಿದೆ.

ಐಪಿಎಲ್‌ ಟ್ರೋಫಿ ಗೆಲುವು ಕಾಣುತ್ತಲೇ ಆರ್‌ಸಿಬಿ ತಂಡದ ಬ್ರ್ಯಾಂಡ್‌ ವ್ಯಾಲ್ಯೂ ಬರೋಬ್ಬರಿ 18 ಸಾವಿರ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಇದರ ಲಾಭ ಪಡೆಯುವ ಸಲುವಾಗಿಯೇ ಡಿಯಾಜಿಯೋ ರಾಯಲ್ ಚಾಲೆಂಜರ್ಸ್‌ ತಂಡದ ಮಾರಾಟಕ್ಕೆ ಮುಂದಾಗಿದೆ.

Also Read : ವಿಶ್ವಕಪ್ ಫೈನಲ್‌ನಲ್ಲಿ 175 ರನ್ ಸಿಡಿಸಿದರೂ ವೈಭವ್ ಸೂರ್ಯವಂಶಿ ಸದ್ಯಕ್ಕೆ ಟೀಮ್ ಇಂಡಿಯಾಕ್ಕೆ ಸೇರುವಂತಿಲ್ಲ! ಯಾಕೆ ಗೊತ್ತೇ?

RCB Ready for IPL 2026 Who is the new owner of Royal Challengers

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »

Related Stories