ಪರಪ್ಪನ ಅಗ್ರಹಾರಕ್ಕೆ ಶಿರಹಟ್ಟಿ ಬಿಜೆಪಿ ಶಾಸಕ ಚಂದ್ರು ಲಮಾಣಿ; ಮಾರ್ಚ್ 2ರವರೆಗೆ ನ್ಯಾಯಾಂಗ ಬಂಧನ
BJP MLA Chandru Lamani | Bribery Case: ಬೆಂಗಳೂರು: ಗುತ್ತಿಗೆದಾರನಿಂದ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮಾರ್ಚ್ 2ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಶಾಸಕರ ಜೊತೆಗೆ ಅವರ ಇಬ್ಬರು ಆಪ್ತ ಸಹಾಯಕರಿಗೂ ಜೈಲು ಶಿಕ್ಷೆಯಾಗಿದ್ದು, ಎಲ್ಲರನ್ನೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.
ಪ್ರಕರಣದ ಹಿನ್ನೆಲೆ ಮತ್ತು ಬಂಧನ:
ಗದಗ ಜಿಲ್ಲೆಯ ಶಿರಹಟ್ಟಿ ಕ್ಷೇತ್ರದ ಶಾಸಕ ಚಂದ್ರು ಲಮಾಣಿ ಅವರು ಜುಲೈನಲ್ಲಿ ಮಂಜೂರಾಗಿದ್ದ ಟೆಂಡರ್ ಕಾಮಗಾರಿಗೆ ಚಾಲನೆ ನೀಡಲು ಗುತ್ತಿಗೆದಾರ ವಿಜಯರಾಜ್ ಅವರಿಂದ ಕಮಿಷನ್ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ.
ಲೋಕಾಯುಕ್ತ ಟ್ರ್ಯಾಪ್: 5 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಶಾಸಕರನ್ನು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದರು.
ಪಿಂಕ್ ಟೆಸ್ಟ್ ಪಾಸಿಟಿವ್: ಲಂಚದ ಹಣವನ್ನು ಮುಟ್ಟಿದ್ದರಿಂದ ಶಾಸಕರು ಮತ್ತು ಅವರ ಪಿಎಗಳ ಕೈ ತೊಳೆದಾಗ ದ್ರಾವಣವು ಗುಲಾಬಿ ಬಣ್ಣಕ್ಕೆ (Pink Color) ತಿರುಗಿದ್ದು, ಭ್ರಷ್ಟಾಚಾರಕ್ಕೆ ಪ್ರಬಲ ಸಾಕ್ಷಿಯಾಗಿದೆ.
ಆಡಿಯೋ ಸಂಭಾಷಣೆ ಲಭ್ಯ:
ತನಿಖೆಯ ವೇಳೆ ಲೋಕಾಯುಕ್ತ ಪೊಲೀಸರಿಗೆ ಮಹತ್ವದ ಆಡಿಯೋ ದಾಖಲೆಗಳು ಸಿಕ್ಕಿವೆ.
ಗುತ್ತಿಗೆದಾರ ಹಣ ನೀಡಲು ವಿಳಂಬ ಮಾಡಿದಾಗ ಶಾಸಕರು “ನಿನ್ನ ನಡ ಮುರಿಸ್ತೀನಿ” ಎಂದು ಬೆದರಿಕೆ ಹಾಕಿರುವ ಸಂಭಾಷಣೆ ಪತ್ತೆಯಾಗಿದೆ.
ಈ ಆಡಿಯೋವನ್ನು ಪ್ರಸ್ತುತ ಎಫ್‌ಎಸ್‌ಎಲ್ (FSL) ತನಿಖೆಗೆ ಕಳುಹಿಸಲಾಗಿದ್ದು, ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.
16 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಮೊಬೈಲ್ ಬ್ಯಾನ್? ಸಿಎಂ ಸಿದ್ದರಾಮಯ್ಯ ಹೊಸ ಮಾಸ್ಟರ್ ಪ್ಲಾನ್!
ಜೈಲು ಪಾಲಾದ ಆಪ್ತರು:
ಶಾಸಕರ ಜೊತೆಗೆ ಲಂಚದ ವ್ಯವಹಾರದಲ್ಲಿ ಭಾಗಿಯಾಗಿದ್ದ ಸರ್ಕಾರಿ ಪಿಎ ಮಂಜುನಾಥ್ ಮತ್ತು ಖಾಸಗಿ ಪಿಎ ಗುರು ಲಮಾಣಿ ಅವರಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಭಾನುವಾರ ಯಲಹಂಕದ ನ್ಯಾಯಾಧೀಶರ ನಿವಾಸಕ್ಕೆ ಹಾಜರುಪಡಿಸಿದ ನಂತರ, ನ್ಯಾಯಾಧೀಶರು ಈ ಮೂವರನ್ನು ಮಾರ್ಚ್ 2ರವರೆಗೆ ಜೈಲಿಗೆ ಕಳುಹಿಸಲು ಆದೇಶಿಸಿದರು.



