ಸಿಲಿಕಾನ್ ಸಿಟಿ ಬೆಂಗಳೂರಿಗೆ ತಟ್ಟಿದ ಮಳೆಯ ಕೊರತೆ ; ವಾಹನ ತೊಳೆದ್ರೆ, ಈಜುಕೊಳಕ್ಕೆ ನೀರು ಬಳಕೆಗೆ ನಿಷೇಧ
Bengaluru water crisis : ಮನೆ, ವಾಣಿಜ್ಯ ಕಟ್ಟಡ, ಅಪಾರ್ಟ್ಮೆಂಟ್, ಹೋಟೆಲ್, ಕೈಗಾರಿಕೆ , ಸರಕಾರಿ ಕಚೇರಿ ಸೇರಿದಂತೆ ನೀರು ಬಳಕೆ ಮಾಡುವ ಎಲ್ಲಾ ಕಟ್ಟಡಗಳಲ್ಲಿ ಕಡ್ಡಾಯವಾಗಿ ಏರೇಟರ್ ಅಳವಡಿಕೆ ಮಾಡುವಂತೆ ಸೂಚಿಸಲಾಗಿದೆ.

Bengaluru water crisis : ಬೆಂಗಳೂರು : ಮುಂಗಾರಿನಲ್ಲಿಯೂ ಕರ್ನಾಟಕದಲ್ಲಿ ಮಳೆಯ ಕೊರತೆ ಎದುರಾಗಿದೆ. ಅದ್ರಲ್ಲೂ ಎಲ್ನಿನೋ ಎಫೆಕ್ಟ್ನಿಂದಾಗಿ ಬೆಂಗಳೂರಿನಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ. ಇದೇ ಕಾರಣದಿಂದಲೇ ಇದೀಗ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಿ 3 ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಆದೇಶವನ್ನು ಉಲ್ಲಂಘಿಸುವವರ ವಿರುದ್ದ ಕಠಿಣ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ಮನೆ, ವಾಣಿಜ್ಯ ಕಟ್ಟಡ, ಅಪಾರ್ಟ್ಮೆಂಟ್, ಹೋಟೆಲ್, ಕೈಗಾರಿಕೆ , ಸರಕಾರಿ ಕಚೇರಿ ಸೇರಿದಂತೆ ನೀರು ಬಳಕೆ ಮಾಡುವ ಎಲ್ಲಾ ಕಟ್ಟಡಗಳಲ್ಲಿ ಕಡ್ಡಾಯವಾಗಿ ಏರೇಟರ್ ಅಳವಡಿಕೆ ಮಾಡುವಂತೆ ಸೂಚಿಸಲಾಗಿದೆ. ಏರೇಟರ್ ಬಳಕೆಯಿಂದ ನೀರಿನ ಬಳಕೆ ಶೇಕಡಾ 30 ರಿಂದ 50 ರಷ್ಟು ಕಡಿಮೆಯಾಗಲಿದೆ ಎಂದು ಜಲ ಮಂಡಳಿ ತಿಳಿಸಿದೆ.
ಕುಡಿಯುವ ನೀರನ್ನು ಯಾವುದೇ ಕಾರಣಕ್ಕೂ ವಾಹನ ತೊಳೆಯಲು, ಉದ್ಯಾನಗಳಿಗೆ ನೀರು ಹಾಯಿಸುವುದು, ರಸ್ತೆ ಮತ್ತು ಪಾದಚಾರಿ ಮಾರ್ಗಗಳನ್ನು ಸ್ವಚ್ಚಗೊಳಿಸಲು, ಕಟ್ಟಡ ನಿರ್ಮಾಣ ಕಾಮಗಾರಿ, ಖಾಸಗಿ ಮಾತ್ರವಲ್ಲದೇ ಸಾರ್ವಜನಿಕ ಈಜುಕೊಳಗಳಿಗೆ ಕುಡಿಯುವ ನೀರನ್ನು ಬಳಕೆ ಮಾಡುವುದಕ್ಕೆ ನಿಷೇಧ ಹೇರಲಾಗಿದೆ. ಜಲಮಂಡಳಿಯ ಆದೇಶವನ್ನು ಉಲ್ಲಂಘಿಸಿದ್ರೆ 5 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ, ಮತ್ತೆ ಮತ್ತೆ ಉಲ್ಲಂಘನೆ ಕಂಡು ಬಂದ್ರೆ ಪ್ರತೀ ದಿನ 500 ರೂಪಾಯಿ ದಂಡ ವಿಧಿಸಲಾಗುತ್ತದೆ.
Bengaluru water crisis bwssb bans drinking water for-pools car wash

