ಭಾರತೀಯ ವಿದ್ಯಾರ್ಥಿಗಳಿಗೆ ಕೆನಡಾದಿಂದ 840 ಕೋಟಿ ಸ್ಕಾಲರ್ಶಿಪ್ ಘೋಷಣೆ: ಅರ್ಜಿ ಸಲ್ಲಿಸುವುದು ಹೇಗೆ?
Canada Scholarship for Indian Students: ಭಾರತೀಯ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಬೆಂಬಲ ನೀಡಲು ಕೆನಡಾ ಸರ್ಕಾರವು $100 ಮಿಲಿಯನ್ (ಸುಮಾರು ₹840 ಕೋಟಿ) ಮೊತ್ತದ ಬೃಹತ್ ವಿದ್ಯಾರ್ಥಿವೇತನ ಯೋಜನೆಯನ್ನು ಘೋಷಿಸಿದೆ. ‘ಕೆನಡಾ-ಭಾರತ ಟ್ಯಾಲೆಂಟ್ ಮತ್ತು ಇನ್ನೋವೇಶನ್ ಸ್ಟ್ರಾಟಜಿ’ ಅಡಿಯಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.
ಯಾರಿಗೆ ಲಭ್ಯ?
ಈ ಯೋಜನೆಯಡಿ ಸುಮಾರು 200 ವಿದ್ಯಾರ್ಥಿಗಳಿಗೆ ಸಂಪೂರ್ಣ ಧನಸಹಾಯದೊಂದಿಗೆ (Fully Funded) ಕೆನಡಾದಲ್ಲಿ ಓದಲು ಅವಕಾಶ ಸಿಗಲಿದೆ. ಪದವಿ, ಸ್ನಾತಕೋತ್ತರ, ಪಿಎಚ್ಡಿ ಮತ್ತು ಪೋಸ್ಟ್-ಡಾಕ್ಟರಲ್ ಹಂತದ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ಖರ್ಚು ವೆಚ್ಚದ ವಿವರ
ಈ ಸ್ಕಾಲರ್ಶಿಪ್ ಕೇವಲ ಕಾಲೇಜು ಫೀಸ್ಗೆ ಮಾತ್ರ ಸೀಮಿತವಾಗಿಲ್ಲ. ಇದು ವಿದ್ಯಾರ್ಥಿಗಳ ಪೂರ್ಣ ಶಿಕ್ಷಣ ಶುಲ್ಕದ ಜೊತೆಗೆ, ಕೆನಡಾದಲ್ಲಿನ ವಾಸದ ವೆಚ್ಚ (Living Expenses), ಸಂಶೋಧನಾ ವೆಚ್ಚಗಳು ಮತ್ತು ಆರೋಗ್ಯ ವಿಮೆಯನ್ನೂ ಭರಿಸಲಿದೆ.
ಹೈಬ್ರಿಡ್ ಶಿಕ್ಷಣ ಕೇಂದ್ರಗಳು
ಈ ಯೋಜನೆಯ ವಿಶೇಷತೆಯೆಂದರೆ ಭಾರತದಲ್ಲಿಯೇ ಮೂರು ‘ಹೈಬ್ರಿಡ್ ಸ್ಟಡಿ ಸೆಂಟರ್’ಗಳನ್ನು ಸ್ಥಾಪಿಸಲಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಕೋರ್ಸ್ನ ಮೊದಲ ಭಾಗವನ್ನು ಭಾರತದ ಈ ಕೇಂದ್ರಗಳಲ್ಲಿ ಆರಂಭಿಸಿ, ನಂತರ ಕೆನಡಾಕ್ಕೆ ತೆರಳಿ ಶಿಕ್ಷಣ ಪೂರ್ಣಗೊಳಿಸಲು ಅವಕಾಶವಿರುತ್ತದೆ.
ಅರ್ಜಿ ಸಲ್ಲಿಸುವ ವಿಧಾನ:
ಈ ಯೋಜನೆಯನ್ನು ಕೆನಡಾದ ಪ್ರತಿಷ್ಠಿತ ‘ಟೊರೊಂಟೊ ವಿಶ್ವವಿದ್ಯಾಲಯ’ (University of Toronto) ನಿರ್ವಹಿಸುತ್ತಿದೆ. ಆಸಕ್ತ ವಿದ್ಯಾರ್ಥಿಗಳು ಟೊರೊಂಟೊ ವಿಶ್ವವಿದ್ಯಾಲಯ ಅಥವಾ ಈ ಯೋಜನೆಯಡಿ ಒಪ್ಪಂದ ಮಾಡಿಕೊಂಡಿರುವ ಇತರ 13 ಕೆನಡಿಯನ್ ವಿಶ್ವವಿದ್ಯಾಲಯಗಳ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು.
16 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬ್ಯಾನ್; ಬಾಲ ಸ್ಟಾರ್ಗಳ ಗತಿಯೇನು!?
ಆದ್ಯತಾ ಕ್ಷೇತ್ರಗಳು:
ಕೃತಕ ಬುದ್ಧಿಮತ್ತೆ (AI), ತಂತ್ರಜ್ಞಾನ, ಕೃಷಿ ವಿಜ್ಞಾನ, ಆರೋಗ್ಯ ಮತ್ತು ಸಾರ್ವಜನಿಕ ನೀತಿ ವಿಷಯಗಳಲ್ಲಿ ಸಂಶೋಧನೆ ಅಥವಾ ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಈ ಸ್ಕಾಲರ್ಶಿಪ್ನಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ.
ಅಗತ್ಯ ದಾಖಲೆಗಳು:
ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಅಂಕಪಟ್ಟಿಗಳು, IELTS ಅಥವಾ PTE ಭಾಷಾ ಪರೀಕ್ಷೆಯ ಫಲಿತಾಂಶ, ಪ್ರಬಲವಾದ ಉದ್ದೇಶ ಪತ್ರ (SOP) ಮತ್ತು ಶಿಫಾರಸು ಪತ್ರಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು ‘EduCanada’ ಅಧಿಕೃತ ಪೋರ್ಟಲ್ ಅನ್ನು ಗಮನಿಸುತ್ತಿರಲು ಸೂಚಿಸಲಾಗಿದೆ.
[youtube https://www.youtube.com/watch?v=QA28TTkVMIY]



