ಬೇಸಿಗೆಯಲ್ಲಿ ಕಂಕುಳಿನ ದುರ್ವಾಸನೆ ತಡೆಗಟ್ಟಲು ಈ 5 ಕ್ರಮಗಳನ್ನು ಅನುಸರಿಸಿ!
Simple steps to prevent underarm odor in summer: ಕಂಕುಳು ಸದಾ ತೇವವಾಗಿದ್ದರೆ ಚರ್ಮದ ಸೋಂಕು ಅಥವಾ ತೀವ್ರವಾದ ತುರಿಕೆ ಉಂಟಾಗಬಹುದು. ಬೆವರಿದಾಗ ಆ ಭಾಗವನ್ನು ಒಣಗಿಸಲು ಪ್ರಯತ್ನಿಸಿ.
ಅತಿಯಾದ ಸೆಖೆಯಿಂದ (Summer Tips) ಕಂಕುಳಿನಲ್ಲಿ ಬೆವರು ಮತ್ತು ದುರ್ವಾಸನೆ ಉಂಟಾಗುವುದು ಸಾಮಾನ್ಯ ಸಮಸ್ಯೆ. ಇದನ್ನು ನಿರ್ವಹಿಸಲು (underarm odor) ಈ ಕೆಳಗಿನ ಕ್ರಮಗಳನ್ನು ಅನುಸರಿಸಿ.
ಹತ್ತಿ ಬಟ್ಟೆಗಳನ್ನೇ ಧರಿಸಿ
ಬೇಸಿಗೆಯಲ್ಲಿ ಸಂಶ್ಲೇಷಿತ (Synthetic) ಬಟ್ಟೆಗಳಿಗಿಂತ ಹತ್ತಿ ಬಟ್ಟೆಗಳನ್ನು ಧರಿಸುವುದು ಉತ್ತಮ. ಹತ್ತಿ ಬಟ್ಟೆಯು ಬೆವರನ್ನು ಹೀರಿಕೊಳ್ಳುತ್ತದೆ ಮತ್ತು ಗಾಳಿಯಾಡಲು ಸಹಾಯ ಮಾಡುತ್ತದೆ, ಇದರಿಂದ ದುರ್ವಾಸನೆ ಕಡಿಮೆಯಾಗುತ್ತದೆ.
ಕಂಕುಳನ್ನು ಆಗಾಗ ಸ್ವಚ್ಛಗೊಳಿಸಿ
ಕಂಕುಳಿನ ಭಾಗದಲ್ಲಿ ಬ್ಯಾಕ್ಟೀರಿಯಾಗಳು ಸುಲಭವಾಗಿ ಹರಡುವುದರಿಂದ, ದಿನದಲ್ಲಿ ಎರಡು ಬಾರಿ ಅಥವಾ ಅಗತ್ಯವಿದ್ದಾಗ ಮೃದುವಾದ ಸೋಪು ಅಥವಾ ಒದ್ದೆ ಬಟ್ಟೆಯಿಂದ ಸ್ವಚ್ಛಗೊಳಿಸುತ್ತಿರಿ.
ತೇವದ ಬಗ್ಗೆ ಎಚ್ಚರವಿರಲಿ
ಕಂಕುಳು ಸದಾ ತೇವವಾಗಿದ್ದರೆ ಚರ್ಮದ ಸೋಂಕು ಅಥವಾ ತೀವ್ರವಾದ ತುರಿಕೆ ಉಂಟಾಗಬಹುದು. ಬೆವರಿದಾಗ ಆ ಭಾಗವನ್ನು ಒಣಗಿಸಲು ಪ್ರಯತ್ನಿಸಿ. ಸ್ನಾನದ ನಂತರ ಕೂಡ ಕಂಕುಳನ್ನು ಪೂರ್ತಿಯಾಗಿ ಒಣಗಿಸಿ ಆಮೇಲೆ ಬಟ್ಟೆ ಧರಿಸಿ.
ಚಿಕ್ಕಮಗಳೂರು : ವಾಣಿಜ್ಯ ಸಿಲಿಂಡರ್ ಸಿಗದ್ದಕ್ಕೆ ಕ್ಯಾಂಟೀನ್ನಲ್ಲಿ ಗೃಹೋಪಯೋಗಿ ಸಿಲಿಂಡರ್ ಬಳಕೆ : ಭಾರೀ ಸ್ಫೋಟ
ದೇಹವನ್ನು ತಂಪಾಗಿರಿಸಿ
ಹೊರಗಿನ ತಾಪಮಾನಕ್ಕೆ ತಕ್ಕಂತೆ ದೇಹದ ಒಳಗಿನ ಉಷ್ಣತೆಯನ್ನು ಸಮತೋಲನದಲ್ಲಿಡಿ. ಹೆಚ್ಚು ನೀರು ಕುಡಿಯಿರಿ ಮತ್ತು ಎಳನೀರು, ಮಜ್ಜಿಗೆಯಂತಹ ನೈಸರ್ಗಿಕ ಪಾನೀಯಗಳನ್ನು ಸೇವಿಸಿ ದೇಹವನ್ನು ತಂಪಾಗಿಟ್ಟುಕೊಳ್ಳಿ.
ನಿಯಮಿತವಾಗಿ ಸ್ನಾನ ಮಾಡಿ
ದಿನಕ್ಕೆ ಕನಿಷ್ಠ ಎರಡು ಬಾರಿ ಸ್ನಾನ ಮಾಡುವುದು ನಿಮ್ಮನ್ನು ತಾಜಾವಾಗಿರಿಸುತ್ತದೆ. ಸ್ನಾನದ ನೀರಿಗೆ ಸ್ವಲ್ಪ ಲಿಂಬೆ ರಸ ಅಥವಾ ಬೇವಿನ ಎಲೆಗಳನ್ನು ಹಾಕಿಕೊಂಡರೆ ಬೆವರಿನ ವಾಸನೆಯನ್ನು ತಡೆಯಬಹುದು.
[youtube https://www.youtube.com/watch?v=nCMSZDdXGYY]



