ಗ್ರಾಹಕರಿಗೆ ಇಲ್ಲ ‘ಗ್ಯಾಸ್ ಟ್ರಬಲ್’ : ಹೋಟೆಲ್ ಮಾಲೀಕರಿಗೆ ಕೇಂದ್ರದಿಂದ ಖಡಕ್ ಆದೇಶ – ತಪ್ಪಿದರೆ ಬೀಳುತ್ತೆ ಭಾರಿ ದಂಡ!
ಆಹಾರದ ಮೊತ್ತ ಹಾಗೂ ಜಿಎಸ್ಟಿ ಮಾತ್ರವನ್ನೇ ಗ್ರಾಹಕರ ಬಳಿಯಿಂದ ಹೋಟೆಲ್ ಮಾಲೀಕರು ಪಡೆದುಕೊಳ್ಳಬಹುದಾಗಿದೆ. ಗ್ರಾಹಕರಿಗೆ ತಿಳಿಯದಂತೆ ಇಂತಹ ಚಾರ್ಜ್‌ಗಳನ್ನು ಬಿಲ್‌ನಲ್ಲಿ ಸೇರಿಸುವುದು ಗ್ರಾಹಕ ಸಂರಕ್ಷಣಾ ಕಾಯ್ದೆಯ ನೇರ ಉಲ್ಲಂಘನೆಯಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಬೆಂಗಳೂರು : ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಭಾರತದಲ್ಲಿ ವಾಣಿಜ್ಯ ಸಿಲಿಂಡರ್ಗೆ ಅಭಾವ ಉಂಟಾಗಿರುವುದು ಹೊಸ ವಿಚಾರವೇನಲ್ಲ. ಆದರೆ ಇದೇ ಅಭಾವವನ್ನು ಬಂಡವಾಳವಾಗಿಟ್ಟುಕೊಂಡು ಗ್ರಾಹಕರ ಜೇಬು ( ಸುಡುವ (hotel gas service charges ) ಯತ್ನ ಮಾಡುವ ಹೋಟೆಲ್ ಹಾಗೂ ರೆಸ್ಟಾರೆಂಟ್ ಮಾಲೀಕರಿಗೆಂದೇ ಕೇಂದ್ರ ಸರ್ಕಾರ ಹೊಸ ನಿಯಮವೊಂದನ್ನು ಜಾರಿಗೆ ತಂದಿದೆ.
ಈ ನಿಯಮಾವಳಿಯ ಪ್ರಕಾರ ಗ್ರಾಹಕರಿಗೆ ಹೆಚ್ಚುವರಿ ಶುಲ್ಕ ವಿಧಿಸುವಂತಿಲ್ಲ ಎಂದು ತಾಕೀತು ಮಾಡಲಾಗಿದೆ.
ಯಾವುದೇ ಹೋಟೆಲ್ಗಳಲ್ಲಿ ಗ್ರಾಹಕರಿಗೆ ನೀಡುವ ಬಿಲ್‌ನಲ್ಲಿ ಗ್ಯಾಸ್ ಸರ್ಚಾರ್ಜ್ ಅಥವಾ ಇಂಧನ ರಿಕವರಿ ಶುಲ್ಕ ಎಂಬ ಹೆಸರಿನಲ್ಲಿ ಹೆಚ್ಚುವರಿ ಹಣವನ್ನು ಕೇಳುವಂತಿಲ್ಲ.
ಆಹಾರದ ಮೊತ್ತ ಹಾಗೂ ಜಿಎಸ್ಟಿ ಮಾತ್ರವನ್ನೇ ಗ್ರಾಹಕರ ಬಳಿಯಿಂದ ಹೋಟೆಲ್ ಮಾಲೀಕರು ಪಡೆದುಕೊಳ್ಳಬಹುದಾಗಿದೆ. ಗ್ರಾಹಕರಿಗೆ ತಿಳಿಯದಂತೆ ಇಂತಹ ಚಾರ್ಜ್‌ಗಳನ್ನು ಬಿಲ್‌ನಲ್ಲಿ ಸೇರಿಸುವುದು ಗ್ರಾಹಕ ಸಂರಕ್ಷಣಾ ಕಾಯ್ದೆಯ ನೇರ ಉಲ್ಲಂಘನೆಯಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
Also Read : ಷೇರು ಮಾರುಕಟ್ಟೆಯಲ್ಲಿ ಭಾರಿ ಜಿಗಿತ : ಇನ್ಫೋಸಿಸ್ ಮತ್ತು ಎಲ್‌ಆಂಡ್‌ಟಿ ಷೇರು ಖರೀದಿಸಲು ಇದು ಸಕಾಲವೇ? ತಜ್ಞರ ಸಲಹೆ
ಇದಾದ ಬಳಿಕವೂ ಯಾವುದೇ ಹೋಟೆಲ್ಗಳಲ್ಲಿ ಈ ರೀತಿಯ ಚಾರ್ಜ್ ವಿಧಿಸುತ್ತಿರುವುದು ಗ್ರಾಹಕರ ಗಮನಕ್ಕೆ ಬಂದರೆ ಅದನ್ನು ನೇರವಾಗಿ ಪ್ರಶ್ನಿಸುವ ಹಾಗೂ ಈ ಬಿಲ್ನ್ನು ಪಾವತಿ ಮಾಡದೇ ಇರುವ ಅಧಿಕಾರವನ್ನು ಗ್ರಾಹಕರು ಹೊಂದಿರುತ್ತಾರೆ.
ಅಲ್ಲದೇ ಸಹಾಯಕ್ಕಾಗಿ ಗ್ರಾಹಕರು 1915 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಹೋಟೆಲ್ ಮಾಲೀಕರ ವಿರುದ್ಧ ದೂರು ಸಲ್ಲಿಸಬಹುದಾಗಿದೆ. ಇದರ ಜೊತೆಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಸಿಸಿಪಿಎ ಅವರಿಗೆ ಇ-ಮೇಲ್ ಮೂಲಕ ಸೂಕ್ತ ದಾಖಲೆಗಳೊಂದಿಗೆ ದೂರು ನೀಡಬಹುದಾಗಿದೆ.
Also Read : ಉಡುಪಿ : ಗ್ಯಾಸ್ ಅಭಾವ.. ಸಂಕಷ್ಟದಲ್ಲಿ ಚಿನ್ನಾಭರಣ ತಯಾರಕರು..!
central government order hotel gas service charges relief to customers



