ರಾಮ ನವಮಿ 2026: ದಶರಥ ನಂದನನ ಜನ್ಮದಿನ ಹೀಗೆ ಆಚರಿಸಿ

Ram Navami 2026: ರಾಮ ನವಮಿಯ ಆಚರಣೆ ಹೇಗೆ? ರಾಮನ ಕೃಪೆಗೆ ಪಾತ್ರರಾಗಲು ಏನು ಮಾಡಬೇಕು? ಇಲ್ಲಿದೆ ಓದಿ.

Ram Navami 2026: ಹಿಂದೂಗಳ ಹೊಸ ವರ್ಷ ಯುಗಾದಿಯ ನಂತರ ಬರುವ ಮೊದಲ ಹಬ್ಬವೇ ಶ್ರೀರಾಮನ ಜನ್ಮದಿನಾಚರಣೆಯಾದ ರಾಮ ನವಮಿ. ರಾಮ ನವಮಿ ಹಿಂದೂಗಳ ಪಾಲಿಗೆ ಬಹಳ ಪವಿತ್ರವಾದ ಹಬ್ಬವಾಗಿದೆ. ಲೋಕ ಕಲ್ಯಾಣಕ್ಕಾಗಿ ಮಹಾ ವಿಷ್ಣ ಅವತಾರ ತಾಳಿ ಶ್ರೀರಾಮನಾಗಿ ಭೂಮಿಗೆ ಬಂದ ದಿನವಿದು. ರಾಮ ಭಕ್ತರ ಪಾಲಿಗೆ ಈ ದಿನ ಬಹಳ ವಿಶೇಷವಾಗಿದೆ. ಶ್ರೀರಾಮನ ಕೃಪಾಕಟಾಕ್ಷಕ್ಕೆ ಪಾತ್ರರಾಗಲು ಉತ್ತಮ ದಿನವೆಂದು ನಂಬಿಕೆಯಿಟ್ಟಿದ್ದಾರೆ. ರಾಮ ನವಮಿಯ ಆಚರಣೆ ಹೇಗೆ? ರಾಮನ ಕೃಪೆಗೆ ಪಾತ್ರರಾಗಲು ಏನು ಮಾಡಬೇಕು? ಇಲ್ಲಿದೆ ಓದಿ.

ರಾಮ ನವಮಿ ಯಾವಾಗ?

ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯು ಮಾರ್ಚ್ 26 ರಂದು ಬೆಳಿಗ್ಗೆ 11:48 ಕ್ಕೆ ಪ್ರಾರಂಭವಾಗಿ ಮಾರ್ಚ್ 27 ರಂದು ಬೆಳಿಗ್ಗೆ 10:06 ಕ್ಕೆ ಕೊನೆಗೊಳ್ಳುತ್ತದೆ.

ರಾಮ ನವಮಿ ಪೂಜಾ ವಿಧಿ

ರಾಮ ನವಮಿಯಂದು ಭಕ್ತರು ಸೂರ್ಯೋದಕ್ಕೆ ಮುಂಚೆ ಎದ್ದು, ಸ್ನಾನ ಮಾಡಿ, ಸ್ವಚ್ಛವಾದ ಬಟ್ಟೆ ಧರಿಸಿ, ರಾಮನನ್ನು ಪೂಜಿಸಬೇಕು. ಶ್ರೀರಾಮನ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಬೇಕು. ಈ ದಿನದಂದು ರಾಮ ಭಜನೆ, ಶ್ಲೋಕ ಪಠಿಸುವುದು ಶುಭವೆಂದು ಪರಿಗಣಿಸಲಾಗಿದೆ. ಬಡವರಿಗೆ ಆಹಾರ, ಬಟ್ಟೆ ಮತ್ತು ಅಗತ್ಯ ವಸ್ತುಗಳನ್ನು ದಾನ ಮಾಡುವುದು ಶುಭವೆಂದು ಪರಿಗಣಿಸಲಾಗಿದೆ.

ರಾಮ ನವಮಿಯಂದು ಏನು ಮಾಡಬಾರದು?

ಈ ದಿನ ಉಪವಾಸ ಇದ್ದವರು ಅಕ್ಕಿ, ಈರುಳ್ಳಿ, ಬೆಳ್ಳುಳ್ಳಿ, ಮಾಂಸಾಹಾರಗಳನ್ನು ಸೇವಿಸಬಾರದು. ಶ್ರೀರಾಮನು ಶಾಂತಿ, ಸಹನೆಗೆ ಹೆಸರುವಾಸಿ. ಹಾಗಾಗಿ ಈ ದಿನ ಕೋಪ, ನಕಾರಾತ್ಮಕ ಚಿಂತನೆಗಳನ್ನು ಮಾಡಬಾರದು. ಮನಸ್ಸನ್ನು ಶುದ್ಧಿಗೊಳಿಸುವುದರ ಕಡೆಗೆ ಗಮನಹರಿಸಬೇಕು.

ಯಾವ ಮಂತ್ರಗಳನ್ನು ಪಠಿಸಬಹುದು?

ರಾಮ ನವಮಿಯಂದು ಶ್ರೀರಾಮನಿಗೆ ಅರ್ಪಿಸಿದ ಮಂತ್ರಗಳನ್ನು ಪಠಿಸುವುದು ಅತ್ಯಂತ ಫಲಪ್ರದವೆಂದು ಪರಿಗಣಿಸಲಾಗಿದೆ. “ಓಂ ಶ್ರೀ ರಾಮಾಯ ನಮಃ,” “ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್,” ಮತ್ತು “ಓಂ ನಮೋ ಭಗವತೇ ರಾಮಚಂದ್ರಾಯ” ಮುಂತಾದ ಮಂತ್ರಗಳನ್ನು ಪಠಿಸುವುದರಿಂದ ಮನಸ್ಸಿಗೆ ಶಾಂತಿ ಮತ್ತು ಜೀವನದಲ್ಲಿ ಸಕಾರಾತ್ಮಕ ಶಕ್ತಿ ಬರುತ್ತದೆ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories