ಕಾರ್ಕಳ : ಮಹಾಮಸ್ತಕಾಭಿಷೇಕಕ್ಕೆ 1.59 ಕೋಟಿ ಅನುದಾನ ಬಿಡುಗಡೆಗೆ ಮಂಜೂರಾತಿ : ವಿ.ಸುನಿಲ್ ಕುಮಾರ್
ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕದ ಅಟ್ಟಳಿಗೆ ನಿರ್ಮಾಣಕ್ಕೆ 50 ಲಕ್ಷ ರೂಪಾಯಿ ಮಂಜೂರು ಮಾಡಲಾಗಿದ್ದು, ಇದರಲ್ಲಿ ಮೊದಲ ಕಂತಿನಲ್ಲಿ 37.50 ಲಕ್ಷ ರೂಪಾಯಿ ಬಡುಗಡೆ ಆಗಲಿದೆ.
ಬೆಂಗಳೂರು : ಕಾರ್ಕಳದ ಐತಿಹಾಸಿಕ ಶ್ರೀ ಬಾಹುಬಲಿಯ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಮೇರೆಗೆ ಮೂಲಭೂತ ಸೌಕರ್ಯ ಒದಗಿಸುವ ಸಲುವಾಗಿ ರಾಜ್ಯ ವಿಶೇಷ ಪ್ರಕರಣ ಎಂದು ಪರಿಗಣಿಸಿ 2025-27ನೇ ಸಾಲಿನ ಆಯವ್ಯಯದಲ್ಲಿ ಸುಮಾರು 1.59 ಕೋಟಿ ರೂಪಾಯಿ ಬಿಡುಗಡೆಗೆ ಮಂಜೂರಾತಿ ದೊರಕಿಸಿದ್ದು, ಮೊದಲ ಹಂತದಲ್ಲಿ ಶೇಕಡಾ 75 ರಷ್ಟು ಹಣ ಬಿಡುಗಡೆ ಆಗಲಿದೆ ಎಂದು ಕಾರ್ಕಳ ಶಾಸಕರಾದ ವಿ.ಸುನಿಲ್ ಕುಮಾರ್ ತಿಳಿಸಿದ್ದಾರೆ.
ಪ್ರತಿ 12 ವರ್ಷಗಳಿಗೆ ಒಮ್ಮೆ ನಡೆಯುವ ಕಾರ್ಕಳದ ಐತಿಹಾಸಿಕ ಶ್ರೀ ಗೊಮ್ಮಟೇಶ್ವರ ಸ್ವಾಮಿಯ ಮಹಾ ಮಸ್ತಕಾಭಿಷೇಕ ಮಹೋತ್ಸವ ಕಾರ್ಯಕ್ರಮಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅನುದಾನ ಒದಗಿಸುಂತೆ ಕೋರಿ ಸರಕಾರಕ್ಕೆ ಮನವಿ ಮಾಡಿಕೊಂಡ ಮೇರೆಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ರೂಪಾಯಿ 01.59 ಕೋಟಿ ಅನುದಾನ ಮಂಜೂರು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
Also Read : ಗ್ಯಾಸ್ ಬುಕ್ಕಿಂಗ್ ಅವಧಿಯಲ್ಲಿ ಯಾವುದೇ ಬದಲಾವಣೆಯಿಲ್ಲ: ಕೇಂದ್ರ ಸರ್ಕಾರದಿಂದ ಹೊರಬಿತ್ತು ಸ್ಪಷ್ಟನೆ
ಬಾಹುಬಲಿ ಮಹಾಮಸ್ತಕಾಭಿಷೇಕ : ಯಾವುದಕ್ಕೆ ಎಷ್ಟು ಹಣ ?
ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕದ ಅಟ್ಟಳಿಗೆ ನಿರ್ಮಾಣಕ್ಕೆ 50 ಲಕ್ಷ ರೂಪಾಯಿ ಮಂಜೂರು ಮಾಡಲಾಗಿದ್ದು, ಇದರಲ್ಲಿ ಮೊದಲ ಕಂತಿನಲ್ಲಿ 37.50 ಲಕ್ಷ ರೂಪಾಯಿ ಬಡುಗಡೆ ಆಗಲಿದೆ. ಜೈನಮಠದ ಬಳಿಯಲ್ಲಿರುವ ತ್ಯಾಗಿ ಭವನ ಮತ್ತು ಮಾತಾಜಿ ಭವನ ನಿರ್ಮಾಣಕ್ಕಾಗಿ 85 ಲಕ್ಷ ರೂಪಾಯಿ ಮಂಜೂರು ಆಗಿದ್ದು, ಮೊದಲ ಕಂತಿನಲ್ಲಿ 63.75 ಲಕ್ಷ ರೂಪಾಯಿ. ಜೈನ ಮಠದ ಬಳಿಯಲ್ಲಿರುವ ಸಭಾಂಗಣದ ನವೀಕರಣಕ್ಕಾಗಿ 11 ಲಕ್ಷ ರೂಪಾಯಿ ಮಂಜೂರಾಗಿದ್ದು, ಮೊದಲ ಕಂತಿನಲ್ಲಿ 8.25 ಲಕ್ಷ ರೂಪಾಯಿ ಬಿಡುಗಡೆ ಆಗಲಿದೆ. ಅಲ್ಲದೇ ಗೋಟೇಶ್ವರ ಬೆಟ್ಟಕ್ಕೆ ನೀರಿನ ಸರಬರಾಜು ಹಾಗೂ ಕೊಳವೆ ಬಾವಿಯ ನಿರ್ಮಾಣಕ್ಕೆ 13 ಲಕ್ಷ ರೂಪಾಯಿ ಮಂಜೂರಾಗಿದ್ದು, 9.75 ಲಕ್ಷ ರೂಪಾಯಿ ಹಣ ಬಿಡುಗಡೆಗೆ ಆಗಲಿದೆ.
Also Read : ಕಾರ್ಕಳ : ಸೇತುವೆಗಳ ನಿರ್ಮಾಣಕ್ಕೆ 4.50 ಕೋಟಿ ಬಿಡುಗಡೆ : ವಿ.ಸುನಿಲ್ ಕುಮಾರ್
ಕಾರ್ಕಳ ಮಹಾಮಸ್ತಕಾಭಿಷೇಕ್ಕೆ ವಿಶೇಷ ಅನುದಾನ ಮಂಜೂರು ಮಾಡುಂತೆ ಕಾರ್ಕಳ ಶಾಸಕರಾದ ವಿ.ಸುನಿಲ್ ಕುಮಾರ್ ಅವರು ಸರಕಾರಕ್ಕೆ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಸರಕಾರ ಮೂಲಸೌಕರ್ಯ ಒದಗಿಸಲು ಅನುದಾನ ಬಿಡುಗಡೆ ಮಾಡಿದೆ.
karkala mahamasthakabhisheka grant approved




