ದ್ವಿತೀಯ ಪಿಯುಸಿ ಫಲಿತಾಂಶ ಯಾವಾಗ? ದಿನಾಂಕ, ವೆಬ್‌ಸೈಟ್‌ ಮಾಹಿತಿ ಇಲ್ಲಿದೆ ನೋಡಿ

Karnataka 2nd PUC Results 2026: ರಾಜ್ಯಾದ್ಯಂತ ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2026 ಕ್ಕಾಗಿ ವಿದ್ಯಾರ್ಥಿಗಳು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಆ ಕಾಯುವಿಕೆ ಈ ವರ್ಷ ಶೀಘ್ರದಲ್ಲೇ ಕೊನೆಗಳ್ಳುವ ಎಲ್ಲ ಸೂಚನೆಗಳು ಕಂಡುಬರುತ್ತಿದೆ. ಇತ್ತೀಚಿನ ಬೆಳವಣಿಗೆ ಹಾಗೂ ಹಿಂದಿನ ವರ್ಷದ ಫಲಿತಾಂಶಗಳನ್ನು ಗಮನಿಸಿದರೆ ಕರ್ನಾಟಕ ಪಿಯುಸಿ 2026 ಫಲಿತಾಂಶ ಏಪ್ರಿಲ್‌ನಲ್ಲಿ ಪ್ರಕಟವಾಗುವ ನಿರೀಕ್ಷೆಯಿದೆ. ಏಪ್ರಿಲ್‌ 6 ರಿಂದ ಏಪ್ರಿಲ್‌ 10, 2026 ನಡುವೆ ಫಲಿತಾಂಶ ಪ್ರಕಟಿಸಬಹುದು ಎಂದು ಹೇಳಲಾಗುತ್ತಿದೆ. ಉತ್ತರ ಪತ್ರಿಕೆಯ ಮೌಲ್ಯಮಾಪನ ಮಾರ್ಚ್‌ 20 ರಿಂದ ಪ್ರಾರಂಭವಾಗಿದ್ದು, ಪಿಯುಸಿ ಮಂಡಳಿ ಫಲಿತಾಂಶದ ಅಧಿಕೃತ ದಿನಾಂಕವನ್ನು ಯಾವುದೇ ಸಮಯದಲ್ಲಿ ಬೇಕಾದರೂ ಪ್ರಕಸಬಹುದು. ಆದ್ದರಿಂದ ವಿದ್ಯಾರ್ಥಿಗಳು ಜಾಗರೂಕರಾಗಿರಲು ಸೂಚಿಸಲಾಗಿದೆ.

ಫಲಿತಾಂಶ ಪ್ರಕಟವಾದಾಗ ಪರಿಶೀಲಿಸುವುದು ಹೇಗೆ?

ಪಿಯುಸಿ ಫಲಿತಾಂಶ ಪ್ರಕಟವಾದ ಕೂಡಲೇ ವಿದ್ಯಾರ್ಥಿಗಳು ಈ ಕೆಳಗಿನ ರೀತಿಯಲ್ಲಿ ತಮ್ಮ ಫಲಿತಾಂಶ ಪರಿಶೀಲಿಸಬಹುದು.

1. ಅಧಿಕೃತ ವೆಬ್‌ಸೈಟ್‌: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್‌ karresults.nic.in.ಗೆ ಭೇಟಿ ನೀಡಿ ಅಲ್ಲಿ ರಜಿಸ್ಟರ್‌ ನಂಬರ್‌ ನಮೂದಿಸಿ ಪರಿಶೀಲಿಸಬಹುದು.

2. SMS: ವೆಬ್‌ಸೈಟ್ ನಿಧಾನವಾಗಿದ್ದರೆ, ನೀವು ಎಸ್‌ಎಮ್‌ಎಸ್‌ ಕಳುಹಿಸಿ ಕೂಡಾ ಪಲಿತಾಂಶ ತಿಳಿದುಕೊಳ್ಳಬಹುದು.

KAR12 <ರಜಿಸ್ಟರ್‌ ನಂಬರ್‌> ಎಂದು ಟೈಪ್ ಮಾಡಿ 56263 ಗೆ ಕಳುಹಿಸಿ.

3. ಡಿಜಿಲಾಕರ್‌ : ನಿಮ್ಮ ಆಧಾರ್‌ ಸಂಖ್ಯೆಯನ್ನು ಡಿಜಿಲಾಕರ್‌ ಆಪ್‌ಗೆ ಲಿಂಕ್‌ ಮಾಡಿ ಅದರಲ್ಲಿ ಎಜ್ಯುಕೇಷನ್‌ ವಿಭಾಗದ ಅಡಿಯಲ್ಲಿ ಇರುವ KSEAB ಆಯ್ಕೆ ಮಾಡುವ ಮೂಲಕ ನೀವು ನಿಮ್ಮ ಡಿಜಿಟಲ್‌ ಮಾರ್ಕ್ಸ್‌ ಕಾರ್ಡ್‌ ಸಹ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಇದನ್ನೂ ಓದಿ: ಎಸ್ ಎಸ್ಎಲ್ ಸಿ ಪರೀಕ್ಷೆ : ಅಂಕ ಇಲ್ಲದಿದ್ರೂ ಬರೆಯಲೇ ಬೇಕು ಹಿಂದಿ ಪರೀಕ್ಷೆ

ದ್ವಿತೀಯ ಪಿಯುಸಿ ಮಂಡಳಿ 2026 ಕ್ಕೆ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಉತ್ತೀರ್ಣ ಅಂಕಗಳನ್ನು ಪರಿಷ್ಕೃತಗೊಳಿಸಿದೆ. ಅದರ ಪ್ರಕಾರ ಮಂಡಳಿಯು ಕನಿಷ್ಠ ಉತ್ತೀರ್ಣ ಅಂಕವನ್ನು 35 ರಿಂದ 33ಕ್ಕೆ ಇಳಿಸಿದೆ. ಅಂಕಗಳನ್ನು ಸುಧಾರಿಸಿಕೊಳ್ಳಲು ಅಥವಾ ಅನುತ್ತೀರ್ಣಗೊಂಡ ವಿಷಯದಲ್ಲಿ ಉತ್ತೀರ್ಣರಾಗಲು ಬಯಸುವ ವಿದ್ಯಾರ್ಥಿಗಳು ಏಪ್ರಿಲ್‌ 25, 2026 ರಿಂದ ನಡೆಯುವ ಪರೀಕ್ಷೆ –2 ರಲ್ಲಿ ಪಾಲ್ಗೊಳ್ಳಬಹುದು. ದ್ವಿತೀಯ ಪಿಯುಸಿಯ ಪರೀಕ್ಷೆ –1 ಮಾರ್ಚ್‌ 17 ರಂದು ಮುಕ್ತಾಯಗೊಂಡಿತ್ತು. ಈ ವರ್ಷ ರಾಜ್ಯದಲ್ಲಿ ವಿಜ್ಞಾನ ವಿಭಾಗದಲ್ಲಿ 2,92,645 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 2,11,174 ವಿದ್ಯಾರ್ಥಿಗಳು, ಕಲಾ ವಿಭಾಗದಲ್ಲಿ 1,42,982 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜಾರಾಗಿದ್ದರು. ಅದರಲ್ಲಿ 3,35,468 ಬಾಲಕರು, 3,78,389 ಬಾಲಕಿಯರು ಹಾಗೂ 5 ಟ್ರಾನ್ಸ್ಜೆಂಡರ್‌ ಸೇರಿದ್ದಾರೆ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories