
ಬೆಂಗಳೂರು : ಕೊರೊನಾ ಹಿನ್ನೆಲೆಯಲ್ಲಿ ದೇಶದಾದ್ಯಂತ ಅನ್ ಲಾಕ್ ಪ್ರಕ್ರೀಯೆಗಳು ನಡೆಯುತ್ತಿವೆ. ರಾಜ್ಯದಲ್ಲಿ ಬಾರ್. ಪಬ್, ಕ್ಲಬ್ ಗಳನ್ನು ರಾಜ್ಯ ಸರಕಾರ ತೆರೆಯಲು ಅನುಮತಿ ನೀಡಿದೆ. ಆದರೆ ಬಾರ್, ಪಬ್ ಓಪನ್ ಆಯ್ತು ಅಂತಾ ಬಿಯರ್ ಕುಡಿಯೋಕೆ ಹೋಗಬೇಡಿ. ಸ್ವಲ್ಪ ಯಾಮಾರಿದ್ರೂ ಅಪಾಯ ಗ್ಯಾರಂಟಿ.

ಹೌದು, ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಕಳೆದ 5 ತಿಂಗಳಿನಿಂದಲೂ ಬಾರ್, ಪಬ್ ಗಳನ್ನು ಮುಚ್ಚಲಾಗಿತ್ತು. ಈ ವೇಳೆಯಲ್ಲಿ ಸುಮಾರು 30 ಕೋಟಿ ಮೌಲ್ಯದ ಬಿಯರ್ ಎಕ್ಸ್ ಫೈರ್ ಆಗಿದೆ. ಹೀಗಾಗಿ ಎಕ್ ಫೈರಿ ಡೇಟ್ ನೋಡದೇ ಬಿಯರ್ ಕುಡಿಯಬೇಡಿ ಎನ್ನುತ್ತಿದೆ ಅಬಕಾರಿ ಇಲಾಖೆ.

ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ಜನರು ಕೊರೊನಾ ಹಿನ್ನೆಲೆಯಲ್ಲಿ ತಮ್ಮೂರುಗಳಿಗೆ ತೆರಳಿದ್ದರು. ಇನ್ನು ಹಲವರು ವರ್ಕ್ ಫ್ರಂ ಹೋಮ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರೋದ್ರಿಂದಾಗಿ ಬಾರ್ ಹಾಗೂ ಪಬ್ ಗಳಿಗೆ ತೆರಳಲು ಯುವ ಸಮುದಾಯ ಹಿಂದೇಟು ಹಾಕುತ್ತಿದ್ದಾರೆ.

ಏನೇ ಆಗಲಿ ಬಾರ್ ಅಲ್ಲಿಯೇ ಕುಳಿತು ಮದ್ಯ ಸೇವನೆ ಮಾಡಬೇಕು ಅನ್ನೋರು ಎಕ್ಸ್ ಫೈರಿ ಡೇಟ್ ನೋಡದೆ ಮಾತ್ರ ಬಿಯರ್ ಕುಡಿಯೋದಕ್ಕೆ ಹೋಗಲೇ ಬೇಡಿ.