ಐಪಿಎಲ್ನಲ್ಲಿ ಆಡಲು ಕ್ರಿಕೆಟ್ ಬೋರ್ಡ್ ವಿರುದ್ಧವೇ ಸಮರ ಸಾರಿದ ಕ್ರಿಕೆಟಿಗ..! ಕೋರ್ಟ್ ಮೆಟ್ಟಿಲೇರಿದ RCB ಪ್ಲೇಯರ್
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಈ ಬಾರಿ ಆರ್ಸಿಬಿ ಪರ ಕಣಕ್ಕಿಳಿಯಬೇಕಿದ್ದ ಶ್ರೀಲಂಕಾ ಆಟಗಾರ ನುವಾನ್ ತುಷಾರ್ (Nuwan Thushara) ಇದೀಗ ಕಾನೂನು ಸಮರಕ್ಕೆ ಇಳಿದಿದ್ದಾರೆ. ಐಪಿಎಲ್ ಪಂದ್ಯವನ್ನಾಡಲು ಎನ್ಓಸಿ ನೀಡಲು ನಿರಾಕರಿಸುತ್ತಿರುವ ಶ್ರೀಲಂಕಾ ಕ್ರಿಕೇಟ್ ಬೋರ್ಡ್ನ ನಡೆಯನ್ನು ಪ್ರಶ್ನಿಸಿ ನುವಾನ್ ತುಷಾರ್ ಕೋರ್ಟ್ ಮೆಟ್ಟಿಲೇರಿದ್ದಾರೆ.
ಕಳೆದ ವರ್ಷ ತುಷಾರ್ರನ್ನು ಆರ್ಸಿಬಿ ತಂಡವು 1.6 ಕೋಟಿ ರೂಪಾಯಿಗಳನ್ನು ನೀಡಿ ಖರೀದಿ ಮಾಡಿದೆ. ಕಳೆದ ಸೀಸನ್ನಲ್ಲಿ 1 ಪಂದ್ಯದಲ್ಲಿ ತುಷಾರ್ ಕಾಣಿಸಿಕೊಂಡಿದ್ದರು. ಉತ್ತಮ ಬೌಲರ್ ಆಗಿರುವ ತುಷಾರ್ಗೆ ಫಿಟ್ನೆಸ್ ಸರ್ಟಿಫಿಕೇಟ್ ಸಿಗದ ಕಾರಣ ಈ ಬಾರಿ ಆರ್ಸಿಬಿ ಪರ ಆಡಲು ತಾಂತ್ರಿಕ ಸಮಸ್ಯೆ ಎದುರಿಸುತ್ತಿದ್ದಾರೆ.ಹೀಗಾಗಿ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ವಿರುದ್ಧ ಕಾನೂನು ಸಮರಕ್ಕೆ ತುಷಾರ್ ಇಳಿದಿದ್ದಾರೆ.
ಇದನ್ನೂ ಓದಿ: ಶ್ರೇಯಸ್ ಅಯ್ಯರ್ಗೆ ದಂಡ..! ಗುಜರಾತ್ ವಿರುದ್ಧದ ಗೆಲುವಿನ ಬಳಿಕ ಬಿತ್ತು ಭಾರಿ ಫೈನ್..!
ಸದ್ಯ ತುಷಾರ್ ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿಲ್ಲ ಎಂಬ ಕಾರಣ ನೀಡುತ್ತಿರುವ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಅವರಿಗೆ ಎನ್ಒಸಿ ನೀಡಲು ನಿರಾಕರಿಸಿದೆ. ತಮಗೆ ತಕ್ಷಣವೇ NOC ನೀಡುವಂತೆ ಮಂಡಳಿಗೆ ನಿರ್ದೇಶಿಸಬೇಕೆಂದು ತುಷಾರ್ ನ್ಯಾಯಾಲಯವನ್ನು ಕೋರಿದ್ದಾರೆ. ಅಲ್ಲದೇ ತಾವು ಇನ್ಮುಂದೆ ಶ್ರೀಲಂಕಾ ತಂಡದ ಪರವಾಗಿ ಆಡುವುದಿಲ್ಲ ಎಂಬುದನ್ನೂ ಅರ್ಜಿಯಲ್ಲಿ ತುಷಾರ್ ನಮೂದಿಸಿದ್ದಾರೆ. ಕೊಲಂಬೊ ಜಿಲ್ಲಾ ನ್ಯಾಯಾಲಯವು ಈ ಅರ್ಜಿಯ ವಿಚಾರಣೆಯನ್ನು ಏಪ್ರಿಲ್ 9ಕ್ಕೆ ನಿಗದಿಪಡಿಸಿದೆ.



