ಶ್ರೇಯಸ್​ ಅಯ್ಯರ್​ಗೆ ದಂಡ..! ಗುಜರಾತ್​ ವಿರುದ್ಧದ ಗೆಲುವಿನ ಬಳಿಕ ಬಿತ್ತು ಭಾರಿ ಫೈನ್..!

ಪಂಜಾಬ್​ ಕಿಂಗ್ಸ್​ ತಂಡವು ನಾಯಕ ಶ್ರೇಯಸ್​ ಅಯ್ಯರ್ (Shreyas Iyer)​ ನಾಯಕತ್ವದಲ್ಲಿ ಗುಜರಾತ್​ ಟೈಟನ್ಸ್​ ವಿರುದ್ಧ ಗೆಲುವು ದಾಖಲಿಸಿದೆ. ಆದರೆ ಈ ಗೆಲುವಿನ ಸಂಭ್ರಮದ ನಡುವೆಯೇ ನಾಯಕ ಶ್ರೇಯಸ್​ ಅಯ್ಯರ್​ಗೆ ಬಿಗ್​ಶಾಕ್​ ಎದುರಾಗಿದೆ. ಐಪಿಎಲ್​ ಆಡಳಿತ ಮಂಡಳಿ ಶ್ರೇಯಸ್​ ಅಯ್ಯರ್​ಗೆ 12 ಲಕ್ಷ ರೂಪಾಯಿಗಳ ದಂಡ ವಿಧಿಸಿದೆ. ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡ ಆರೋಪದ ಮೇಲೆ ಈ ದಂಡ ವಿಧಿಸಲಾಗಿದೆ ಎಂದು ಐಪಿಎಲ್​ ಮ್ಯಾನೇಜ್​ಮೆಂಟ್​ ತಿಳಿಸಿದೆ.

ಈ ದಂಡದ ಮೂಲಕ ಐಪಿಎಲ್​ 2026ರ ಇತಿಹಾಸದಲ್ಲಿ ಓವರ್​ ರೇಟ್​ ನಿಯಮ ಉಲ್ಲಂಘಿಸಿದ ಮೊದಲ ನಾಯಕ ಎಂದೆನಿಸಿದ್ದಾರೆ ಶ್ರೇಯಸ್​ ಅಯ್ಯರ್​. ಪಂದ್ಯದ ನಿಗದಿತ ಸಮಯದೊಳಗೆ ಓವರ್‌ಗಳನ್ನು ಪೂರ್ಣಗೊಳಿಸದಿದ್ದಕ್ಕಾಗಿ ಶ್ರೇಯಸ್ ಅಯ್ಯರ್‌ಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ ಎಂದು IPL ಆಡಳಿತ ಮಂಡಳಿ ಮಾಹಿತಿ ನೀಡಿದೆ.

ಇದನ್ನೂ ಓದಿ: ಭಾನುವಾರ ಬಹುನಿರೀಕ್ಷಿತ ಚೆನ್ನೈ ವರ್ಸಸ್​ ಆರ್​ಸಿಬಿ ಮ್ಯಾಚ್​ : ಕೇವಲ 60 ಸೆಕೆಂಡುಗಳಲ್ಲಿ ಟಿಕೆಟ್ಸ್​ ಸೋಲ್ಡ್​ಔಟ್

ಮೊದಲು ಬ್ಯಾಟಿಂಗ್​ಗೆ ಇಳಿದಿದ್ದ ಗುಜರಾತ್​ ಟೈಟನ್ಸ್​ 6 ವಿಕೆಟ್​ಗಳ ನಷ್ಟಕ್ಕೆ 162 ರನ್​ಗಳನ್ನು ಕಲೆ ಹಾಕಲು ಯಶಸ್ವಿಯಾಗಿತ್ತು. ಈ ಗುರಿ ಬೆನ್ನಟ್ಟಿದ್ದ ಪಂಜಾಬ್​ ಕಿಂಗ್ಸ್​ ತಂಡ 3 ವಿಕೆಟ್​ ನಷ್ಟದಲ್ಲಿ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಆಸ್ಟ್ರೇಲಿಯಾದ ಯುವ ಆಟಗಾರ ಕೂಪರ್ ಕೊನೋಲಿ 22 ರನ್​ಗಳಿಗೆ 72ರನ್​ಗಳನ್ನು ಸೇರಿಸಿ ಅಜೇಯರಾಗಿ ಉಳಿಯುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಪಂಜಾಬ್​ ಕಿಂಗ್ಸ್​ ತಂಡದ ವಿರುದ್ಧ ಎಲ್ಲಾ ಮೂರು ವಿಕೆಟ್​ಗಳನ್ನು ಗುಜರಾತ್​ ಟೈಟನ್ಸ್​ ತಂಡದ ಪ್ರಸಿದ್ ಕೃಷ್ಣ ಅವರೇ ಕಬಳಿಸಿದ್ದರು.

ಇನ್ನು ದಂಡ ವಿಧಿಕೆಯಾದ ಬಳಿಕ ಮಾತನಾಡಿದ ನಾಯಕ ಶ್ರೇಯಸ್​ ಅಯ್ಯರ್​, ಮುಂದಿನ ಪಂದ್ಯಗಳಿಂದ ಸಮಯ ನಿರ್ವಹಣೆಯಲ್ಲಿ ಶಿಸ್ತು ಕಾಯ್ದುಕೊಳ್ಳುತ್ತೇವೆ ಎಂದಿದ್ದಾರೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories