ಐಫೋನ್ ಕಾಲ ಮುಗಿಯಿತೇ ? 200MP ಕ್ಯಾಮೆರಾ, ಸ್ಲಿಮ್ ಲುಕ್ ಸ್ಯಾಮ್ಸಂಗ್ S25 ಅಲ್ಟ್ರಾ ಎಂಟ್ರಿ
Samsung galaxy s25 ultra : ಸ್ಮಾರ್ಟ್ಪೋನ್ ಮಾರುಕಟ್ಟೆಯಲ್ಲಿ ಇಂದಿಗೂ ಖ್ಯಾತಿ ಉಳಿಸಿಕೊಂಡಿರುವ ಸ್ಯಾಮ್ಸಂಗ್ ಐ ಪೋನ್ಗೆ ಟಕ್ಕರ್ ಕೊಡುವ ಸ್ಮಾರ್ಟ್ಪೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್25 ಅಲ್ಟ್ರಾ ಮೊಬೈಲ್ ಇದೀಗ ಸುನಾಮಿ ಎಬ್ಬಿಸೋದಕ್ಕೆ ಸಜ್ಜಾಗಿದೆ.
Samsung galaxy s25 ultra : ಸ್ಮಾರ್ಟ್ಪೋನ್ ಮಾರುಕಟ್ಟೆಯಲ್ಲಿ ಇಂದಿಗೂ ಖ್ಯಾತಿ ಉಳಿಸಿಕೊಂಡಿರುವ ಸ್ಯಾಮ್ಸಂಗ್ ಐ ಪೋನ್ಗೆ ಟಕ್ಕರ್ ಕೊಡುವ ಸ್ಮಾರ್ಟ್ಪೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್25 ಅಲ್ಟ್ರಾ ಮೊಬೈಲ್ ಇದೀಗ ಸುನಾಮಿ ಎಬ್ಬಿಸೋದಕ್ಕೆ ಸಜ್ಜಾಗಿದೆ. ಗೂಗಲ್ ಟ್ರೆಂಡಿಂಗ್ನಲ್ಲಿ ಸದ್ಯ ಈ ಮೊಬೈಲ್ ಬಗೆಗಿನ ಹಲವು ಮಾಹಿತಿಗಳು ಲೀಕ್ ಹಾಕಿದ್ದು, ಆಪಲ್ ಜೊತೆಗೆ ಚೀನಾದ ಸ್ಮಾರ್ಟ್ಪೋನ್ ಕಂಪೆನಿಗಳಿಗೆ ನಡುಕ ಶುರುವಾಗಿದೆ.
ವಿನ್ಯಾಸದಲ್ಲಿ ದೊಡ್ಡ ಬದಲಾವಣೆ: ಕೈಗೆ ನೋವಿಲ್ಲ
ಸ್ಯಾಮ್ಸಂಗ್ ಅಲ್ಟ್ರಾ ಫೋನ್ಗಳೆಂದರೆ ಸಾಮಾನ್ಯವಾಗಿ ಚೂಪಾದ ಮೂಲೆಗಳಿರುತ್ತಿದ್ದವು. ಆದರೆ S25 ಅಲ್ಟ್ರಾ ಈ ಬಾರಿ ಬದಲಾಗಿದೆ. ಇದು ಹೆಚ್ಚು ರೌಂಡ್ ಎಡ್ಜ್ಗಳೊಂದಿಗೆ (Rounded Corners) ಬರುತ್ತಿದ್ದು, ಕೈಯಲ್ಲಿ ಹಿಡಿಯಲು ಅತ್ಯಂತ ಆರಾಮದಾಯಕವಾಗಿದೆ. ಕೇವಲ 8.2mm ನಷ್ಟು ತೆಳುವಾಗಿರುವ ಇದು ಸ್ಯಾಮ್ಸಂಗ್ ಇತಿಹಾಸದಲ್ಲೇ ಅತ್ಯಂತ ಸ್ಲಿಮ್ ಆದ ಅಲ್ಟ್ರಾ ಫೋನ್ ಎನಿಸಿಕೊಳ್ಳಲಿದೆ.
ಟೈಟಾನಿಯಂ ಫ್ರೇಮ್ ಮತ್ತು ಮ್ಯಾಜಿಕ್ ಡಿಸ್ಪ್ಲೇ
- ಈ ಫೋನ್ನಲ್ಲಿ ಗಾಜಿನ ಬದಲು ಟೈಟಾನಿಯಂ ಫ್ರೇಮ್ ಬಳಸಲಾಗಿದ್ದು, ಇದು ಫೋನ್ಗೆ ಗಟ್ಟಿತನ ನೀಡುವುದರ ಜೊತೆಗೆ ತೂಕವನ್ನು ಕಡಿಮೆ ಮಾಡಿದೆ.
- ಡಿಸ್ಪ್ಲೇ: 6.9 ಇಂಚಿನ ಡೈನಾಮಿಕ್ AMOLED 2X ಸ್ಕ್ರೀನ್.
- ಬ್ರೈಟ್ನೆಸ್: ಸೂರ್ಯನ ಬೆಳಕಿನಲ್ಲೂ ಸ್ಪಷ್ಟವಾಗಿ ಕಾಣುವಂತೆ 3000 ನಿಟ್ಸ್ ಪೀಕ್ ಬ್ರೈಟ್ನೆಸ್.
- ಗೊರಿಲ್ಲಾ ಗ್ಲಾಸ್ ಆರ್ಮರ್: ಸ್ಕ್ರೀನ್ ಮೇಲೆ ಸ್ಕ್ರಾಚ್ ಬೀಳದಂತೆ ವಿಶೇಷ ರಕ್ಷಣೆ.
- 200MP ಕ್ಯಾಮೆರಾ: ಇನ್ನು ದೂರದ ವಸ್ತುಗಳೂ ಪಕ್ಕದಲ್ಲೇ
- ಸ್ಯಾಮ್ಸಂಗ್ ತನ್ನ ಕ್ಯಾಮೆರಾ ಸಾಮರ್ಥ್ಯವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ.
- ಮುಖ್ಯ ಕ್ಯಾಮೆರಾ: 200MP ಪ್ರೈಮರಿ ಸೆನ್ಸರ್.
ಟೆಲಿಫೋಟೋ: 50MP ಸಾಮರ್ಥ್ಯದ 5x ಆಪ್ಟಿಕಲ್ ಜೂಮ್ ಲೆನ್ಸ್.
AI ಫೋಟೋಗ್ರಫಿ: ಫೋಟೋ ತೆಗೆದ ನಂತರ ಅದರಲ್ಲಿರುವ ಬೇಡದ ವಸ್ತುಗಳನ್ನು ತೆಗೆಯಲು ಅಥವಾ ಮಸುಕಾದ ಫೋಟೋಗಳನ್ನು ಎಚ್ಡಿ ಮಾಡಲು ಸ್ಯಾಮ್ಸಂಗ್ನ ಹೊಸ Galaxy AI ಕೆಲಸ ಮಾಡಲಿದೆ.
Also Read : Google Pixel 10 : ಐಪೋನ್ ಬಿಟ್ಟು ಗೂಗಲ್ ಫಿಕ್ಸೆಲ್ 10 ಖರೀದಿಗೆ ಮುಂದಾದ ಜನ : ಅಷ್ಟಕ್ಕೂ ಇದರಲ್ಲಿ ಏನಿದೆ ಫೀಚರ್ಸ್
ಪ್ರೊಸೆಸರ್ ಮತ್ತು ಪರ್ಫಾರ್ಮೆನ್ಸ್
ಇದರಲ್ಲಿ ವಿಶ್ವದ ಅತ್ಯಂತ ವೇಗದ Snapdragon 8 Gen 4 (ಅಥವಾ Gen 5) ಚಿಪ್ಸೆಟ್ ಬಳಸಲಾಗಿದೆ. ನೀವು ಎಷ್ಟೇ ಹೆವಿ ಗೇಮಿಂಗ್ ಮಾಡಿದರೂ ಫೋನ್ ಬಿಸಿಯಾಗುವುದಿಲ್ಲ. ಇದರ ಜೊತೆಗೆ 16GB RAM ಆಯ್ಕೆ ಇರುವುದರಿಂದ ಮಲ್ಟಿ-ಟಾಸ್ಕಿಂಗ್ ಸುಲಭವಾಗಲಿದೆ.
Also Read : Vivo T5 Pro 5G : ವಿವೋ ಟಿ5 ಪ್ರೋ 5ಜಿ ಒಂದಲ್ಲ ಎರಡಲ್ಲ.. ಬರೋಬ್ಬರಿ 9020mAh ಬ್ಯಾಟರಿ ! ಬೆಲೆ ಎಷ್ಟು ಗೊತ್ತಾ ?
Samsung Galaxy S25 Ultra ಬೆಲೆ ಎಷ್ಟು, ಯಾವಾಗ ಬಿಡುಗಡೆ ?
ಭಾರತದಲ್ಲಿ ಈ ಫೋನ್ ಸರಿಸುಮಾರು ₹1,24,999 ರಿಂದ ₹1,30,000 ರ ನಡುವೆ ಲಾಂಚ್ ಆಗುವ ನಿರೀಕ್ಷೆಯಿದೆ. 2026ರ ಆರಂಭದಲ್ಲೇ ಇದು ಮಾರುಕಟ್ಟೆಗೆ ಬರಲಿದ್ದು, ಸದ್ಯಕ್ಕಂತೂ ಟೆಕ್ ಪ್ರಿಯರ ಫೇವರೆಟ್ ಲಿಸ್ಟ್ನಲ್ಲಿ ಮೊದಲ ಸ್ಥಾನದಲ್ಲಿದೆ.
ನೀವು ಪ್ರೊಫೆಷನಲ್ ಫೋಟೋಗ್ರಫಿ ಮತ್ತು ಗೇಮಿಂಗ್ಗಾಗಿ ಬೆಸ್ಟ್ ಫೋನ್ ಹುಡುಕುತ್ತಿದ್ದರೆ, ಸ್ವಲ್ಪ ಕಾಯಿರಿ… ಸ್ಯಾಮ್ಸಂಗ್ S25 ಅಲ್ಟ್ರಾ ಬರಲಿದೆ.
Samsung galaxy s25 ultra 200mp camera features price india release


